ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಐದು ಮನೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಟೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಖಾಸಿಂಸಾಬ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಬೆಂಕಿ ತಗುಲಿ ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಪೋಟಗೊಂಡಿದೆ. ಈ ತೀವ್ರತೆಯಿಂದಾಗಿ ಅಕ್ಕಪಕ್ಕದ ಮನೆಗಳು ಬೆಂಕಿ ತಗುಲಿ ಐದು ಮನೆಗಳಿ ಬೆಂಕಿಗೆ ಆಹುತಿಯಾಗಿವೆ. ಇದರಿಂದ ಮನೆಯಲ್ಲಿದ್ದ ದಿನ ನಿತ್ಯದ ವಸ್ತುಗಳು ಸೇರಿ ಬೆಲೆ ಬಾಳುವ ವಸ್ತುಗಳು ಸುಟ್ಟಿವೆ.
ಬೆಂಕಿ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಖಾಸಿಂ ಸಾಬ್ ಅವರ ಮನೆಯಲ್ಲಿದ್ದ 8 ಲಕ್ಷ ರೂಪಾಯಿ ಹಣ, 60 ಗ್ರಾಮ ಚಿನ್ನ, ಬೆಳ್ಳಿ ಹಾಗೂ ಎಲ್ಲ ದಾಖಲಾತಿಗಳು ಬೆಂಕಿಗೆ ಸಂಪೂರ್ಣವಾಗಿ ಭಸ್ಮಗೊಂಡಿವೆ. ಇದರೊಂದಿಗೆ ಅಶೋಕಪ್ಪ, ದಾವಲ್ ಸಾಬ್, ರಮೇಶಪ್ಪ ಮಲ್ಲೇಶಪ್ಪ ಎಂಬುವರಿಗೆ ಸೇರಿದ ಮನೆಗಳಿಗೂ ಕೂಡ ಬೆಂಕಿ ಹೊತ್ತಿಕೊಂಡಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಲು ಹಾರ ಸಾಹಸ ಪಟ್ಟಿದ್ದಾರೆ.