Advertisement

ಹಳೆಹುಬ್ಬಳ್ಳಿ ಗಲಭೆ ಪ್ರಕರಣ : 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ

09:26 PM May 17, 2022 | Team Udayavani |

ಧಾರವಾಡ : ಹಳೇ ಹುಬ್ಬಳ್ಳಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿಕೊಂಡಿದ್ದ ಪೈಕಿ 11 ಪ್ರಕರಣಗಳಿಗೆ ಹೈಕೋರ್ಟ್ ಪೀಠ, ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಹಳೇ ಹುಬ್ಬಳ್ಳಿಯಲ್ಲಿ ಏ. 16ರಂದು ನಡೆದ ಗಲಭೆಗೆ ಸಂಬಂಧಿಸಿ, ಹಳೆಯ ಹುಬ್ಬಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸುತ್ತಿನ ಪ್ರದೇಶದಲ್ಲಿ ಗಲಾಟೆ ಮಾಡಿದ್ದ 157 ಜನರ ವಿರುದ್ಧ 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದ ಸರಿಯಲ್ಲ. ಹೀಗಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳು ಅನುರ್ಜಿತಗೊಳಿಸಬೇಕು ಎಂದು ಮಹಮ್ಮದ್ ಆರೀಫ್ ನಾಗರಾಳ ಸೇರಿದಂತೆ ಇತರ 157 ಜನರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಪೊಲೀಸರು ದಾಖಲಿಸಿಕೊಂಡಿದ್ದ 12 ಪ್ರಕರಣಗಳ ಪೈಕಿ, 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಜೂ. 7ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ವಿಶ್ವನಾಥ ಬೀಚಗತ್ತಿ ವಾದ ಮಂಡಿಸಿದರು.

ಇದನ್ನೂ ಓದಿ : ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next