Advertisement

Hubli; ಮನೆ ಮಂದಿಯನ್ನು ಬೆದರಿಸಿ 70 ಲಕ್ಷ ರೂ. ಮೌಲ್ಯದ ನಗದು- ಚಿನ್ನ ಕಳವು

12:38 PM Sep 21, 2023 | Team Udayavani |

ಹುಬ್ಬಳ್ಳಿ: ಮನೆಯಲ್ಲಿದ್ದವರನ್ನು ಬೆದರಿಸಿ 70 ಲಕ್ಷ ರೂ. ಮೌಲ್ಯ ನಗದು ಹಾಗೂ ಆಭರಣ ಕಳ್ಳತನ ಮಾಡಿದ ಪ್ರಕರಣ ಗೋಕುಲ ರಸ್ತೆಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಉಲ್ಲಾಸ ದೊಡ್ಡಮನಿ ಎಂಬವವರ ಮನೆ ಕಳ್ಳತನ ಮಾಡಲಾಗಿದ್ದು, ಮನೆಯಲ್ಲಿದ್ದ ಹಣವನ್ನು ದೊಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಮನೆಯ ಕಬ್ಬಿಣದ ಡ್ರಿಲ್ ಕಟ್ ಮಾಡಿ ಮನೆ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದವರನ್ನು ಬೆದರಿಸಿದ್ದಾರೆ. ಬಳಿಕ ಮನೆಯಿದ್ದ ನಗದು ಹಾಗೂ ಆಭರಣ ಸೇರಿ 70 ಲಕ್ಷ ರೂ. ಕಳ್ಳತ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ:Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ನಡೆಸಲಾಗುತ್ತಿದೆ. ಗಣೇಶ ಹಬ್ಬದ ಅಂಗವಾಗಿ ರಾಣಿಚನ್ನಮ್ಮ ಮೈದಾನದ ಭದ್ರತೆಯಲ್ಲಿ ಪೊಲೀಸರು ಕಾರ್ಯ ನಿರತರಾಗಿದ್ದರು. ಇದೇ ಸಮಯದ ಬಳಸಿಕೊಂಡು ಕಳ್ಳರು ಕೈಚಳಕ ತೊರಿಸಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next