Advertisement

ಹುಬ್ಬಳ್ಳಿ ಗಲಭೆ ಪ್ರಕರಣ : ಸಂಬಂಧವೇ ಇಲ್ಲ: ಜಮೀರ್‌ ಅಹಮದ್‌

12:56 AM Apr 30, 2022 | Team Udayavani |

ಬೆಂಗಳೂರು: ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬಗಳಿಗೆ ರಂಜಾನ್‌ ಪ್ರಯುಕ್ತ ಆಹಾರ ಕಿಟ್‌ ವಿತರಣೆ ಸಂಬಂಧ ಟ್ವೀಟ್‌ ಮಾಡಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌, ಅದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ “ನನಗೂ ಅದಕ್ಕೂ ಸಂಬಂಧವೇ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಜಮೀರ್‌ ಅಹಮದ್‌ ಅವರು ಶುಕ್ರವಾರ ಬೆಳಗ್ಗೆ, ಹುಬ್ಬಳ್ಳಿ ಪ್ರಕರಣದಲ್ಲಿ ಬಂಧನವಾಗಿರುವ ಬಡ ಕುಟುಂಬದ ತಾಯಂದಿರಿಗೆ, ಹೆಣ್ಣು ಮಕ್ಕಳಿಗೆ ಹಾಗೂ ಪುಟ್ಟ ಮಕ್ಕಳಿಗೆ ರಂಜಾನ್‌ ಹನ್ನದ ಆಚರಣೆಗೆ ಸಹಾಯ ಹಸ್ತ. ಪವಿತ್ರ ರಂಜಾನ್‌ ದಿನದಂದು ಪ್ರಾರ್ಥನೆ ಮಾಡಿ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಿ, ಮತ್ತೂಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾನಲ್ಲಿ ಹಾಗೂ ದೇವರಲ್ಲಿ ಪ್ರಾರ್ಥಿಸಿ. ನಮ್ಮ ತಂಡದ ಸ್ನೇಹಿತರು ಆ ಕುಟುಂಬದವರಿಗೆ ಇಂದು ಮಧ್ಯಾಹ್ನ ಫುಡ್‌ ಕಿಟ್‌ ಹಾಗೂ ತಲಾ ಐದು ಸಾವಿರ ರೂ. ಧನ ಸಹಾಯ ಮಾಡಲಿದ್ದಾರೆ. ಇದಕ್ಕೆ ತಪ್ಪು ಅರ್ಥ ಬೇಡ. ತಪ್ಪು ಮಾಡಿದವರನ್ನು ರಾಜ್ಯ ಸರಕಾರ ಹಾಗೂ ಪೊಲೀಸ್‌ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ಇದು ತಪ್ಪಿತಸ್ಥರಿಗೆ ಸಹಾಯವೂ ಅಲ್ಲ, ಉತ್ತೇಜನೆಯೂ ಅಲ್ಲ ಎಂದು ಟ್ವೀಟ್‌ ಮಾಡಿದ್ದರು.

ಈ ಕ್ರಮಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಗಲಭೆಕೋರರಿಗೆ ಆಹಾರ ಕಿಟ್‌ ಕೊಡಲಾಗಿದೆ ಎಂದು ಟೀಕಿಸಿದರು.

ಇದರ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಜಮೀರ್‌ ಉಮ್ರಾದಲ್ಲಿದ್ದಾರೆ. ಯಾರೋ ಕೊಟ್ಟರೆ ಅವರು ಕೊಟ್ಟಂತೆ ಆಗುತ್ತದೆಯೇ ಎಂದು ಪ್ರಶ್ನಿಸಿದ್ದರು.

ಇದರ ಬೆನ್ನಲ್ಲೇ ಜಮೀರ್‌ ಅಹಮದ್‌ ಮೆಕ್ಕಾದಿಂದಲೇ ಸ್ಪಷ್ಟನೆ ನೀಡಿ, “ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಯಾವುದೇ ಫುಡ್‌ ಕಿಟ್‌ ಕೊಡುತ್ತಿಲ್ಲ. ನಾನು ಬೆಂಗಳೂರು ತೊರೆದು ಮೆಕ್ಕಾದಲ್ಲಿದ್ದೇನೆ. ಇದರಲ್ಲಿ ನನ್ನ ತಪ್ಪು ಇಲ್ಲ, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ’ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next