Advertisement

ಪ್ರತಿ ಜಿಲ್ಲಾಕೇಂದ್ರದಲ್ಲೂ ಮೈದಾನ ವ್ಯವಸ್ಥೆ

11:52 AM Jan 21, 2019 | |

ಹುಬ್ಬಳ್ಳಿ: ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಮೈದಾನದ ವ್ಯವಸ್ಥೆ ಮಾಡುವ ಮೂಲಕ ಕ್ರಿಕೆಟ್ ಆಟಗಾರರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಯೋಜನೆ ರೂಪಿಸಲಾಗುವುದು ಎಂದು ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ ಪಟೇಲ್‌ ಹೇಳಿದರು.

Advertisement

ಗೋಪನಕೊಪ್ಪ-ಉಣಕಲ್ಲ ರಸ್ತೆ ಜೆ.ಕೆ. ಸ್ಕೂಲ್‌ ಬಳಿಯ ಶಿರೂರ್‌ ಲೇಔಟ್‌ನಲ್ಲಿ ಬಿಡಿಕೆ ಸ್ಪೋರ್ಟ್ಸ್  ಫೌಂಡೇಶನ್‌ ಕ್ಲಬ್‌ನ ಬೆಳ್ಳಿ ಮಹೋತ್ಸವ ಹಾಗೂ ಭಾಂಜಿ ಡಿ. ಖೀಮಜಿ ಮೈದಾನದ ನಾಮಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಕ್ರಿಕೆಟ್ ಕಲಿಯಲು ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮೈದಾನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದ್ದರಿಂದ ರಾಜ್ಯ ತಂಡದಲ್ಲಿ ಶೇ.50 ಪ್ರತಿಭೆಗಳು ಬೆಂಗಳೂರು ಹೊರತು ಪಡಿಸಿ ಬೇರೆ ಭಾಗದವರು ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರು ಆಟಗಾರರಿಗೆ ಹೋಲಿಸಿದರೆ, ಜಿಲ್ಲಾ ಕೇಂದ್ರದ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಾರೆ ಎಂದರು.

ಕೆಎಸ್‌ಸಿಎ ಸಹ ಕಾರ್ಯದರ್ಶಿ ಸಂತೋಷ ಮೆನನ್‌ ಮಾತನಾಡಿ, ಭರತ ಖೀಮಜಿ ಅಂತಹವರ ಉದಾರ ಗುಣಗಳಿಂದ ಈ ಭಾಗದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ಸಿಗುತ್ತಿದ್ದು, ಈ ಭಾಗದ ಜನರು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಧಾರವಾಡ ವಲಯದ ಕೆಎಸ್‌ಸಿಎ ಚೇರ್ಮನ್‌ ವೀರಣ್ಣ ಸವಡಿ ಮಾತನಾಡಿ, ರಾಜ್ಯದಲ್ಲಿ ಧಾರವಾಡ ವಲಯದಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮೈದಾನಗಳಿವೆ. ಒಂದೇ ವಲಯದಲ್ಲಿ 2 ಮೈದಾನಗಳಿರುವುದು ಇಲ್ಲಿ ಮಾತ್ರ ಎಂದರು.

ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್‌ ಮುಖ್ಯ ಟ್ರಸ್ಟಿ ಭರತ ಖೀಮಜಿ 51 ಲಕ್ಷ ರೂ. ದೇಣಿಗೆ ಚೆಕ್‌ ವಿತರಿಸಿದರು. ಕೆಎಸ್‌ಸಿಎ ಧಾರವಾಡ ವಲಯ ಸಂಯೋಜಕ ಬಾಬಾ ಭೂಸದ ಮಾತನಾಡಿದರು. ಶಿವಾನಂದ ಗುಂಜಾಳ, ಮನಿಷ ಠಕ್ಕರ, ದಾವಣಗೆರೆ, ಮೈಸೂರು ಸಂಯೋಜಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next