Advertisement
ದಿನದಿಂದ ದಿನಕ್ಕೆ ಆಧಾರ ಕಾರ್ಡ್‌ನ ಅಗತ್ಯತೆ ಹೆಚ್ಚಾಗುತ್ತಿರುವುದರಿಂದ ಹೊಸ ಕಾರ್ಡ್, ತಿದ್ದುಪಡಿ ಕಾರ್ಯಕ್ಕೆ ಆಧಾರ್ ಕೇಂದ್ರಗಳಿಗೆ ಬೇಡಿಕೆ ಉಂಟಾಗಿದೆ. ಕರ್ನಾಟಕ ಒನ್ ಸೇರಿದಂತೆ ಕೆಲ ಅಧಿಕೃತ ಖಾಸಗಿ ಕೇಂದ್ರಗಳಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಕ್ಲಬ್ ರಸ್ತೆಯಲ್ಲಿ ಆಧಾರ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಸಾಮರ್ಥ್ಯವಿದ್ದರೂ ಕ್ಯೂ ಮಾತ್ರ ತಪ್ಪಿಲ್ಲ. ಸಾಕಷ್ಟು ಕೌಂಟರ್‌ಗಳಿವೆ ಆದಷ್ಟು ಬೇಗ ಕೆಲಸ ಮುಗಿಯುತ್ತಿದೆ ಎನ್ನುವ ಕಾರಣಕ್ಕೆ ಜನರು ಹಿಂದಿನ ಎಲ್ಲ ಕೇಂದ್ರಗಳನ್ನು ಬಿಟ್ಟು ಇಲ್ಲಿನ ಕೇಂದ್ರಕ್ಕೆ ಮುಗಿ ಬೀಳುತ್ತಿರುವುದು ಇಷ್ಟೊಂದು ದಟ್ಟಣೆಗೆ ಕಾರಣ ಎನ್ನಲಾಗಿದೆ. ಇಲ್ಲಿನ ಸರತಿ ನೋಡಿದರೆ ಆ ಕೇಂದ್ರಗಳೇ ಉತ್ತಮ ಎನ್ನುವ ಮಾತುಗಳು ಜನರಿಂದ ಕೇಳಿಬರುತ್ತಿವೆ. ನಿತ್ಯ 1000 ಜನರಿಗೆ ಟೋಕನ್ ನೀಡಲಾಗುವುದು ಎಂದು ಹೇಳುತ್ತಿದ್ದರು.
Related Articles
ಜನರ ಪ್ರಶ್ನೆಯಾಗಿದೆ.
Advertisement
ಓಡಾಡುವುದು ಕಷ್ಟ: ಆಧಾರ ಸೇವಾ ಕೇಂದ್ರ ಆರಂಭವಾದಾಗಿನಿಂದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಆಧಾರ್ ಕಾರ್ಡ್ ಕೆಲಸಗಳಿಗೆ ಬರುವ ಜನರನ್ನು ರಸ್ತೆಯಲ್ಲಿಯೇ ಟೋಕನ್ ನೀಡಿ ಸರತಿಯಲ್ಲಿ ನಿಲ್ಲಿಸಲಾಗುತ್ತಿದೆ. ಅವರು ತಂದ ವಾಹನಗಳನ್ನು ಇನ್ನೊಂದು ಪಕ್ಕದಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಇರುವ ಸಣ್ಣ ರಸ್ತೆ ದ್ವಿಚಕ್ರ ವಾಹನ ಓಡಾಟಕ್ಕೂ ತೊಂದರೆಯಾಗುತ್ತಿದೆ. ಆಟೋ ರಿಕ್ಷಾ, ದ್ವಿಚಕ್ರವಾಹನ, ಕಾರುಗಳು ನಿಲ್ಲುತ್ತಿರುವುದರಿಂದ ಇನ್ನೊಂದು ವಾಹನದ ಸಂಚಾರಕ್ಕೂ ರಸ್ತೆಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಧಾರ ಕೇಂದ್ರದ ಪಕ್ಕದಲ್ಲಿಯೇ ಇರುವ ಗೋದಾಮುವೊಂದಕ್ಕೆ ಸಾಮಗ್ರಿ ಇಳಿಸಲು, ತೆಗೆದುಕೊಂಡು ಹೋಗಲು ಲಾರಿಗಳು ಬರುತ್ತಿರುವುದು ಸಹ ಸಮಸ್ಯೆಗೆ ಕಾರಣವಾಗಿದೆ. ಈ ರಸ್ತೆಯಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ರಕ್ತ ಪರೀಕ್ಷೆ ಕೇಂದ್ರಗಳು, ಅಪಾರ್ಟ್‌ಮೆಂಟ್ಸ್, ಇತರೆ ಹಲವು ಕಚೇರಿಗಳಿವೆ. ಖಾಸಗಿ ಕಾಲೇಜು ಇದ್ದು, ಅಲ್ಲಿನ ವಾಹನಗಳು ಸಹ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸುತ್ತಿವೆ. ಗದಗ ರಸ್ತೆಯಿಂದ ಕ್ಲಬ್ ರಸ್ತೆಗೆ ಕಾಲ್ನಡಿಗೆ ಮೂಲಕ ಆಗಮಿಸುವ ಜನರಿಗೆ ಇದು ಅಡ್ಡ ರಸ್ತೆ ಕೂಡ ಹೌದು. ಈ ಮೊದಲೇ ದಟ್ಟಣೆಯಿಂದ ಕೂಡಿದ್ದ ರಸ್ತೆ ಇದೀಗ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂಕ್ತ ವ್ಯವಸ್ಥೆ ಅಗತ್ಯ: ಆಧಾರ್ ಸೇವಾ ಕೇಂದ್ರಕ್ಕೆ ಬರುವ ಜನರನ್ನು ಆವರಣದೊಳೆಗೆ ಸಾಲಿನಲ್ಲಿ ನಿಲ್ಲಿಸಬೇಕು. ಕಟ್ಟಡದ ಮುಂಭಾಗದಲ್ಲಿ ವಾಹನಗಳ ನಿಲುಗಡೆ ಅವಕಾಶ ನೀಡಬೇಕು. ಆದರೆ ಕೇಂದ್ರದ ಸಿಬ್ಬಂದಿ ರಸ್ತೆ ಬದಿಯಲ್ಲಿ ಸಾಲು, ಇನ್ನೊಬ್ಬರ ಅಂಗಡಿ ಕಚೇರಿಗಳ ಮುಂದೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ. ಕಳೆದ ಮೂರ್‍ನಾಲ್ಕು ದಿನಗಳ ಹಿಂದೆ ಇದೇ ವಿಚಾರಕ್ಕೆ ಪೊಲೀಸರು ಬಂದು ಸೂಚನೆ ನೀಡಿದ ಘಟನೆಯೂ ನಡೆದಿದೆ. ಈ ಎಲ್ಲಾ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಜನಾಗ್ರಹವಾಗಿದೆ.
ಹೇಮರಡ್ಡಿ ಸೈದಾಪುರ