Advertisement

ಹುಬ್ಬಳ್ಳಿ :ಪ್ರತಿಭಟನೆ ವೇಳೆ ಕುಲಪತಿಗಳ ಮೇಲೆ ಮಸಿ :ವಿದ್ಯಾರ್ಥಿ ಮುಖಂಡ ಸೇರಿ ಹಲವರು ವಶಕ್ಕೆ

05:38 PM Jan 05, 2022 | Team Udayavani |

ಹುಬ್ಬಳ್ಳಿ: ಕಾನೂನು ಪದವಿ ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರ, ಕುಲಪತಿ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬ ಕಾನೂನು ವಿವಿ ಕುಲಪತಿ ಮೇಲೆ ಮಸಿ ಎರಚಿದ ಘಟನೆ ಬುಧವಾರ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೂ ಮಸಿ ಬಿದ್ದಿದ್ದು ಘಟನೆ ತೀವ್ರ ರೂಪ ಪಡೆಯುತ್ತಿದ್ದಂತೆ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರತಿಭಟನಾ ನಿರತರನ್ನು ಚದುರಿಸಿದರು.

Advertisement

ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಕುಲಪತಿ ಪ್ರೊ| ಈಶ್ವರ ಭಟ್ಟ ಅವರು ಆಗಮಿಸಿದ್ದು ವಿದ್ಯಾರ್ಥಿಗಳ ಬೇಡಿಕೆಗಳು ಕುರಿತು ಮಾತನಾಡಿದ ಕುಲಪತಿಗಳು, ವಿಶ್ವವಿದ್ಯಾಲಯದ ನಿಯಮಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ನಿರ್ಣಯ ಕೈಗೊಳ್ಳಲು ಬರುವುದಿಲ್ಲ. ಕೆಲ ಬೇಡಿಕೆ ಈಡೇರಿಸಲು ಸಮಯ ಬೇಕಾಗುತ್ತದೆ. ಕಾನೂನು ಪದವಿ ವೃತ್ತಿಪರ ಕೋರ್ಸ್ ಆಗಿರುವುದರಿಂದ ಆನ್‌ಲೈನ್ ಪರೀಕ್ಷೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದರ ನಡುವೆ ವಿದ್ಯಾರ್ಥಿಯೊಬ್ಬ ಆರಂಭದಿಂದಲೂ ಇದೇ ಉತ್ತರವನ್ನು ನೀಡುತ್ತಿದ್ದೀರಿ ಎಂದು ಕೋಪಗೊಂಡು ಮಸಿ ಎರಚಿದ್ದಾನೆ. ಈ ವೇಳೆ ಕುಲಪತಿಗಳ ಪಕ್ಕದಲ್ಲೇ ಇದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮಸಿ ಬಿದ್ದಿದೆ ಇದರಿಂದ ಗೊಂದಲ ನಿರ್ಮಾಣವಾಗಿ ವಿದ್ಯಾರ್ಥಿ ಮುಖಂಡರನ್ನು ಪೊಲೀಸ್‌ರು ವಶಕ್ಕೆ ಪಡೆದು ಉಳಿದ ವಿದ್ಯಾರ್ಥಿಗಳನ್ನು ಚದುರಿಸಿದ ಘಟನೆ ನಡೆಯಿತು.

ಇದನ್ನೂ ಓದಿ :ಜೀವಂತವಾಗಿ ಬಂದಿದ್ದೇನೆ…ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ-ಮೋದಿ

ಕಳೆದ ಒಂದು ತಿಂಗಳಿನಿಂದ ಆನ್‌ಲೈನ್ ಮೌಲ್ಯಮಾಪನದಂತೆ ಆನ್‌ಲೈನ್ ಪರೀಕ್ಷೆ ನಡೆಸುವುದು, ಮೂರು ವರ್ಷದ ಪದವಿ ವಿದ್ಯಾರ್ಥಿಗಳಿಗೆ ನೀಡಿದಂತೆ 5 ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆಯಿಲ್ಲದ ಮಾರ್ಗಸೂಚಿಯ ಪ್ರಕಾರ ಮುಂದಿನ ಸೆಮಿಸ್ಟರ್‌ಗೆ ಪಾಸ್ ಮಾಡಬೇಕು ಎಂಬುವುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು. ಸರಕಾರ ಹಾಗೂ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಬೃಹತ್ ಹೋರಾಟ ಆಯೋಜಿಸಿ, ರಾಜ್ಯದ ವಿವಿಧ ಭಾಗಗಳಿಂದ ಕಾನೂನು ಪದವಿ ವಿದ್ಯಾರ್ಥಿಗಳು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next