Advertisement

Hubballi: ಪಾಲಿಕೆ ಆಯುಕ್ತರು, ಸಿಬ್ಬಂದಿಗಳಿಂದ ದಾಳಿ… ನಿಷೇಧಿತ ಪ್ಲಾಸ್ಟಿಕ್ ವಶ

02:21 PM Jul 02, 2024 | Team Udayavani |

ಹುಬ್ಬಳ್ಳಿ: ರಾಜ್ಯ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಹಾಗೂ ನಿಷೇಧಿತ ಪ್ಲಾಸ್ಟಿಕ್ ತಯಾರಿಕಾ ನಿಷೇಧ ಮಾಡಿದರೂ ಕೂಡಾ ಅವಳಿ ನಗರದಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್ ಮಾರಾಟ ನಡೆದಿದ್ದು, ಮಂಗಳವಾರ ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಹಾಗೂ ಕಚ್ಚಾ ವಸ್ತುಗಳ ವಶಪಡಿಸಿಕೊಂಡ ಘಟನೆ ನಗರದ ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.

Advertisement

ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಮೊದಲನೇ ಹಂತದಲ್ಲಿರುವ ರಜನಿ ಪಾಲಿ ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನಡೆಸುತ್ತಿದ್ದ ಉದ್ಯಮದ ಮೇಲೆ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿಗಳೊಂದಿಗೆ ಆಗಮಿಸಿ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 15 ಟನ್ ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ಮುಂದೆ ಕಾರ್ಯವನ್ನು ಅಧಿಕಾರಿಗಳು ನಡೆಸಿದ್ದಾರೆ.

ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರರು ಗಣತಾಜ್ಯ ನಿರ್ವಹಣಾ ವಿಭಾಗದ ಮಲ್ಲಿಕಾರ್ಜುನ, ವಲಯ ಆಯುಕ್ತ ಗಿರೀಶ ತಳವಾರ, ಪರಿಸರ ಅಭಿಯಂತರ ಯುವರಾಜ್, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ಸೇರಿದಂತೆ ಮೊದಲಾದವರು ಇದ್ದರು‌.

ಇದನ್ನೂ ಓದಿ: ಮಾಟಮಂತ್ರದ ಕಾಟ: ಕುಟುಂಬದ ವಿರುದ್ಧವೇ ದೂರು ನೀಡಲು ಮುಂದಾದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next