ಹುಬ್ಬಳ್ಳಿ: ನನಗೆ ನೀನು ಹೊಂದಾಣಿಕೆ ಆಗುತ್ತಿಲ್ಲವೆಂದುಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಪ್ರಾಧ್ಯಾಪಕನಿಗೆ ಸ್ಥಳೀಯ ಒಂದನೇ ಅಪರ ಜಿಲ್ಲಾ ಮತ್ತುಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರರೂ. ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಯಾದಗಿರಿಜಿಲ್ಲೆ ಶಹಾಪುರ ನಿವಾಸಿ, ಇಲ್ಲಿನ ವಿದ್ಯಾನಗರದ ಪ್ರತಿಷ್ಠಿತವಿಜ್ಞಾನ ಕಾಲೇಜಿನ ಪ್ರಾಧ್ಯಾಪಕನಾಗಿದ್ದ ಉದಯಕುಮಾರಕಾಂಬಳೆ ಶಿಕ್ಷೆಗೊಳಗಾದವನು.
ಪ್ರಕರಣದ ಹಿನ್ನೆಲೆ: ಉದಯಕುಮಾರ ರಸಾಯನ ಶಾಸ್ತ್ರದಲ್ಲಿಪಿಎಚ್‌ಡಿ ಮಾಡುತ್ತಿದ್ದ ವೇಳೆ ಶ್ರೀಸೀಮಾ ಎಂಬುವರನ್ನುಪ್ರೀತಿಸಿ, ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದ.ಬಳಿಕ ಇಲ್ಲಿನ ಉಣಕಲ್‌ನ ಶಿವಗಿರಿಯಲ್ಲಿ ವಾಸಿಸುತ್ತಿದ್ದರು.ಉದಯಕುಮಾರ ನಗರದ ವಿಜ್ಞಾನ ಕಾಲೇಜಿನಲ್ಲಿ ಮತ್ತುಶ್ರೀಸೀಮಾ ಧಾರವಾಡದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಕೆಲಸ ಮಾಡುತ್ತಿದ್ದರು. ಮದುವೆಯಾಗಿ ಮೂರುತಿಂಗಳ ಬಳಿಕ ನೀನು ಹೊಂದಾಣಿಕೆ ಆಗುತ್ತಿಲ್ಲ ಎಂದುಉದಯಕುಮಾರ ವಿಚ್ಛೇದನಕ್ಕಾಗಿ ಬಲವಂತ ಮಾಡುತ್ತಿದ್ದ.ಹೀಗಾಗಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು.
ಇದೇ ವಿಚಾರವಾಗಿ 2013ರ ಏ. 18ರಂದು ಬೆಳಗ್ಗೆ ಇಬ್ಬರನಡುವೆ ತೀವ್ರ ಗಲಾಟೆಯಾದಾಗ ಉದಯಕುಮಾರಪತ್ನಿಯನ್ನು ಚಾಕುವಿನಿಂದ ಇರಿದು, ಮನೆಗೆ ಬೀಗಹಾಕಿಕೊಂಡು ಪರಾರಿಯಾಗಿದ್ದ. ಸಂಶಯಗೊಂಡಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಪೊಲೀಸರು ಸ್ಥಳಕ್ಕೆ ಭೇಟಿ ಕೊಡುವಷ್ಟರಲ್ಲಿ ಶ್ರೀಸೀಮಾಮೃತಪಟ್ಟಿದ್ದರು.
ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್‌ಗಿರೀಶ ರೂಢಕರ ಪ್ರಕರಣ ದಾಖಲಿಸಿಕೊಂಡು, ತನಿಖೆಕೈಗೊಂಡಿದ್ದರು. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧಾರದಮೇಲೆ ಸಾಕ್ಷé ಸಂಗ್ರಹಿಸಿದ್ದರು. ಉದಯಕುಮಾರಕೊಲೆಗೈದ ಮೇಲೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.ಆತನಿಗೆ ಇಲ್ಲಿಂದಲೇ ನೋಟಿಸ್ ಕಳುಹಿಸಲಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನಿಸಿದಾಗ ಮೂರು ವರ್ಷದಬಳಿಕ 2016ರಲ್ಲಿ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದ.ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು,ಆರೋಪಿತನ ಮೇಲಿನ ಸಾಕ್ಷéಗಳು ಸಾಬೀತಾಗಿವೆ ಎಂದುಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರೂ.ದಂಡ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ ಮೃತಳ ತಂದೆಗೆ50 ಸಾವಿರ ರೂ. ಹಾಗೂ 5 ಸಾವಿರ ರೂ. ರಾಜ್ಯ ಸರಕಾರಕ್ಕೆನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.