Advertisement
ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಮೊಬೈಲ್ ಪೋನ್ ಗಳು ಬರೋಬ್ಬರಿ 120 Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಮತ್ತು 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮರಾಗಳನ್ನು ಒಳಗೊಂಡಿದೆ. ಹಾಗೂ 66 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನೂ ಒಳಗೊಂಡಿದೆ.
Related Articles
Advertisement
ನೋವಾ 8 ಮೊಬೈಲ್ ಪೋನ್ 8 ಜಿಬಿ RAM ಅನ್ನು ಒಳಗೊಂಡಿದ್ದು, ಇದರಲ್ಲಿ 128 ಜಿಬಿ ಇಂಟರ್ನಲ್ ಸ್ಟೋರೇಜ್ ಸೌಲಭ್ಯವಿದೆ. ಇನ್ನು ನೋವಾ 8 ಪ್ರೋ ಸರಣಿಯು ತನ್ನಲ್ಲಿ 2.58Hz kirin 985 ಚಿಪ್ ಸಪ್ ಸೆಟ್ ಅನ್ನು ಒಳಗೊಂಡಿದೆ. ಈ ನಡುವೆ ಈ ಎರಡೂ ಪೋನ್ ಗಳು EMUI 11 ಮೂಲದ ಆ್ಯಂಡ್ರಾಯ್ಡ್ 10 OS ಹೊಂದಿದೆ.
ಕ್ಯಾಮರಾ ಫೀಚರ್ ಗಳು
ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಎರಡೂ ಮೊಬೈಲ್ ಪೋನ್ ಗಳು 64 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಒಳಗೊಂಡಿದೆ. ಅಲ್ಲದೆ 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಜೊತೆಗೆ 120 FOV ಮತ್ತು 2 ಮೆಗಾಪಿಕ್ಸಲ್ ಮೈಕ್ರೋ ಕ್ಯಾಮರಾವನ್ನು ಒಳಗೊಂಡಿದೆ. ಇದರ ಜೊತೆಗೆ 4CM ಪೋಕಲ್ ಲೆಂಥ್ ಮತ್ತು 2 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಇದು ಹೊಂದಿದೆ. ಇನ್ನು ನೋವಾ ಪ್ರೋನಲ್ಲಿ ಎರಡು ಸೆಲ್ಫಿ ಕ್ಯಾಮರಾ ಜೊತೆಗೆ f/2.0 ಅಪಾರ್ಚರ್ ಹೊಂದಿರುವ 16 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಗಳಿವೆ.
ಇದನ್ನೂ ಓದಿ:ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗ್ರಾಹಕರಿಗೆ ಅವಶ್ಯಕ : ಆಲ್ಬರ್ಟ್ ಡಿ’ಸೋಜಾ
ಬ್ಯಾಟರಿ ಸಾಮರ್ಥ್ಯ
ಹುವಾಯಿ ನೋವಾ 8 ಒಟ್ಟು 3800 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ನೋವಾ 8 ಪ್ರೋ ಒಟ್ಟು 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ
ಈ ಎರಡು ಮೊಬೈಲ್ ಗಳು ಹಸಿರು, ಕಪ್ಪು, ಪರ್ಪಲ್ ಹಾಗೂ ಗ್ರೇಡಿಯಂಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.