Advertisement

ಅರ್ಜುನ ಪ್ರಶಸ್ತಿಯ ಆಯ್ಕೆ ಮಾನದಂಡ ಪ್ರಶ್ನಿಸಿದ ಪ್ರಣಯ್‌

02:02 AM Jun 04, 2020 | Sriram |

ಹೊಸದಿಲ್ಲಿ: ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ ಎಚ್‌.ಎಸ್‌. ಪ್ರಣಯ್‌ ಅರ್ಜುನ ಪ್ರಶಸ್ತಿಯ ನಾಮ ನಿರ್ದೇಶನದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದರ ಆಯ್ಕೆಯ ಮಾನದಂಡ ಯಾವುದು ಎಂದು ಭಾರತೀಯ ಬ್ಯಾಡ್ಮಿಂಟನ್‌ ಒಕ್ಕೂಟವನ್ನು (ಬಿಎಐ) ಪ್ರಶ್ನಿಸಿದ್ದಾರೆ. ಸತತ 2 ವರ್ಷಗಳಿಂದ ಈ ಪ್ರಶಸ್ತಿಗೆ ತನ್ನ ಹೆಸರು ಸೂಚಿಸದ ಬಗ್ಗೆ ಅವರು ಕಿಡಿ ಕಾರಿದ್ದಾರೆ.

Advertisement

“ಇದು ಅದೇ ಹಳೆಯ ಕತೆ. ಕಾಮನ್ವೆಲ್ತ್‌ ಗೇಮ್ಸ್‌, ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಯಾರು ಪದಕ ಗೆದ್ದಿರುವರೋ ಅವರನ್ನು ಬಿಎಐ ಶಿಫಾರಸು ಮಾಡುವುದೇ ಇಲ್ಲ. ಇಂಥ ಪ್ರಮುಖ ಕೂಟಗಳಲ್ಲಿ ಪಾಲ್ಗೊಳ್ಳದ ಹಾಗೂ ಇಲ್ಲಿ ಗೆಲ್ಲದವರ ಹೆಸರನ್ನು ಸೂಚಿಸುತ್ತದೆ’ ಎಂದು ಪ್ರಣಯ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪಾರುಪಳ್ಳಿ ಕಶ್ಯಪ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಹಾಗೂ ಸಿಂಗಲ್ಸ್‌ ಆಟಗಾರ ಸಮೀರ್‌ ವರ್ಮ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ಬಳಿಕ ಪ್ರಣಯ್‌ ಈ ಅಸಮಾಧಾನ ಹೊರಗೆಡಹಿದ್ದಾರೆ.

ಪ್ರಣಯ್‌ 2018ರ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ಮಿಶ್ರ ಡಬಲ್ಸ್‌ ನಲ್ಲಿ ಚಿನ್ನ, ಅದೇ ವರ್ಷದ ಏಶ್ಯನ್‌ ಚಾಂಪಿಯನ್‌ಶಿಪ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಆದರೆ ಈವರೆಗೆ ಪ್ರಣಯ್‌ ಹೆಸರನ್ನು ಬಿಎಐ ಅರ್ಜುನ ಪ್ರಶಸ್ತಿಗೆ ಸೂಚಿಸಿಲ್ಲ.

ಪ್ರಣಯ್‌ಗೆ ಮತ್ತೋರ್ವ ಖ್ಯಾತ ಶಟ್ಲರ್‌ ಪಿ. ಕಶ್ಯಪ್‌ ಅವರಿಂದ ಬೆಂಬಲ ವ್ಯಕ್ತವಾಗಿದೆ. “ಈ ಪ್ರಶಸ್ತಿಗಳಿಗೆ ಹೆಸರು ಸೂಚಿಸುವ ವಿಧಾನವೇ ಅರ್ಥವಾಗುತ್ತಿಲ್ಲ. ಇದು ಬದಲಾಗಬೇಕು. ಚಿಂತಿಸಬೇಡ…’ ಎಂದು ಪ್ರಣಯ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next