Advertisement

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಣಯ್‌ ಪ್ರಿ-ಕ್ವಾರ್ಟರ್‌ ಫೈನಲಿಗೆ

11:33 PM Aug 30, 2022 | Team Udayavani |

ಒಸಾಕಾ: ಭಾರತದ ಶಟ್ಲರ್‌ ಎಚ್‌. ಎಸ್‌. ಪ್ರಣಯ್‌ ಸುಲಭವಾಗಿ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಪುರುಷರ ಸಿಂಗಲ್ಸ್‌ ನಲ್ಲಿ ಪ್ರಿ-ಕ್ವಾರ್ಟರ್‌ಫೈನಲಿಗೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ಸಿಂಗಾಪುರದ ಮಾಜಿ ವಿಶ್ವ ಚಾಂಪಿಯನ್‌ ಲೋಹ್‌ ಕೀನ್‌ ಅವರನ್ನು ಎದುರಿಸಲಿದ್ದಾರೆ.

Advertisement

ಶ್ರೇಯಾಂಕರಹಿತ ಆಟಗಾರ ಪ್ರಣಯ್‌ ಮೊದಲ ಗೇಮ್‌ನಲ್ಲಿ 11-10ರಿಂದ ಮುನ್ನಡೆಯಲ್ಲಿದ್ದಾಗ ಅವರ ಎದುರಾಳಿ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್‌ ಆ್ಯಂಗಸ್‌ ಗಾಯದಿಂದ ಪಂದ್ಯ ತ್ಯಜಿಸಿದರು.

ಉತ್ತಮ ಫಾರ್ಮ್ ನಲ್ಲಿರುವ ಪ್ರಣಯ್‌ ಕಳೆದ ವಾರ ಟೋಕಿಯೊದಲ್ಲಿ ಮುಗಿದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದರು. ಎರಡು ಬಾರಿಯ ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟ ಅವರನ್ನು ಉರುಳಿಸಿ ಅಚ್ಚರಿಗೊಳಿಸಿದ್ದ ಪ್ರಣಯ್‌ ಆಬಳಿಕ ತನ್ನ ದೇಶದವರೇ ಆದ ಲಕ್ಷ್ಯ ಸೇನ್‌ ಅವರನ್ನು ಕೆಡಹಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಆದರೆ ಅಲ್ಲಿ ಚೀನದ ಝಾವೊ ಜುನ್‌ಪೆಂಗ್‌ ಕೈಯಲ್ಲಿ ಸೋತು ನಿರ್ಗಮಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next