Advertisement

6,000 ಉದ್ಯೋಗಗಳ ಕಡಿತಕ್ಕೆ ಮುಂದಾದ ಎಚ್‌ಪಿ

08:51 PM Nov 23, 2022 | Team Udayavani |

ನವದೆಹಲಿ: ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳ ಕಡಿತಕ್ಕೆ ಹೆವ್ಲೆಟ್‌ ಪ್ಯಾಕರ್ಡ್‌(ಎಚ್‌ಪಿ) ಕಂಪನಿ ಮುಂದಾಗಿದೆ.

Advertisement

ಪ್ರಸ್ತುತ ಕಂಪನಿಯಲ್ಲಿ ಸುಮಾರು 61,000 ಉದ್ಯೋಗಿಗಳಿದ್ದು, ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 2025ರ ಆರ್ಥಿಕ ವರ್ಷ ಮುಗಿಯುವವರೆಗೆ ಶೇ.10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಉದ್ಯೋಗ ಕಡಿತದ ಜತೆಗೆ ತಂತ್ರಜ್ಞಾನ ವೆಚ್ಚವನ್ನು ಕೂಡ ಕಡಿತಗೊಳಿಸಲಾಗುವುದು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಎಚ್‌ಪಿ ಸಿಇಒ ಎನ್ರಿಕ್‌ ಲೋರೆಸ್‌ ಹೇಳಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಟ್ವಿಟರ್‌, ಅಮೆಜಾನ್‌, ಸಿಸ್ಕೊ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ.

ಅಮೆಜಾನ್‌ ಇಂಡಿಯಾಗೆ ಸಮನ್ಸ್‌:
ಉದ್ಯೋಗಿಗಳನ್ನು ಬಲವಂತವಾಗಿ ಕೆಲಸದಿಂದ ವಜಾಗೊಳಿಸಿದ ಆರೋಪದ ಮೇರೆಗೆ ಅಮೆಜಾನ್‌ ಇಂಡಿಯಾಗೆ ಕಾರ್ಮಿಕ ಆಯುಕ್ತರು ಸಮನ್ಸ್‌ ಜಾರಿಗೊಳಿಸಿದ್ದಾರೆ.

ಸೂಕ್ತ ದಾಖಲೆಗಳೊಂದಿಗೆ ತಪ್ಪಿಸಿಕೊಳ್ಳದೇ ಸಂಬಂಧಿಸಿದ ಅಧಿಕಾರಿಗಳು ಬುಧವಾರ ಬೆಂಗಳೂರಿನ ಉಪ ಮುಖ್ಯ ಕಾರ್ಮಿಕ ಆಯುಕ್ತರ ಎದುರು ಹಾಜರಿರಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next