Advertisement

ಖಾಕಿ ತೊಟ್ಟು ಖಡಕ್‌ ಆಫೀಸರ್‌ ಆದ ಡಾಲಿ: ‘ಹೊಯ್ಸಳ’ಚಿತ್ರದ ಟೀಸರ್ ಔಟ್

01:15 PM Feb 05, 2023 | Team Udayavani |

ಕೆ.ಆರ್.ಜಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಿರುವ, ನಟ ರಾಕ್ಷಸ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, “ಹೊಯ್ಸಳ” ದ ಟೀಸರ್ ಇಂದು ಬಿಡುಗಡೆಯಾಗಿದೆ.

Advertisement

ನಿಷ್ಠಾವಂತ – ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ಧನಂಜಯ, ತಪ್ಪು ಮಾಡಿದವರ ಪಾಲಿಗೆ ಖಾಕಿ ತೊಟ್ಟ ಯಮನಾಗಿ ಕಾಣಿಸಿಕೊಂಡಿದ್ದಾರೆ.

ಟೀಸರ್ ಬಿಡುಗಡೆಯಾಗಿದ್ದು, ಭಾರತ ಸಿನಿಮಾಗಳಲ್ಲಿ ರಫ್ ಅಂಡ್ ಟಫ್ ಪೊಲೀಸ್ ಆಫೀಸರ್ ಗಳಾಗಿ ಕಾಣಿಸಿಕೊಂಡಿದ್ದ ಕನ್ನಡದ ಕಿಚ್ಚ ಸುದೀಪ, ತೆಲುಗು ನಟ ಅದಿವಿ ಶೇಷ್, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಕಾರ್ತಿ ರವರು ‘ಗ್ಲಿಮ್ಪ್ಸ್ ಆಫ್ ಗುರುದೇವ್’ ಅನ್ನು ಬಿಡುಗಡೆ ಮಾಡಿದರು. ಆಫೀಸರ್ ಗುರುದೇವ್ ಅಲಿಯಾಸ್ ಧನಂಜಯರವರನ್ನು ಅಭಿನಂದಿಸಿ ತಮ್ಮ ಪೊಲೀಸ್ ಗ್ಯಾಂಗ್ ಗೆ ಬರಮಾಡಿಕೊಂಡಿದ್ದಾರೆ.

ಹೊಯ್ಸಳ ಟೀಸರ್ ನಲ್ಲಿ ಧನಂಜಯರವರ ಖಾಕಿ ಖದರ್, ಹಾಗೂ ಡೈಲಾಗ್ ಗೆ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆನಂದ್ ಆಡಿಯೋ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಚಿತ್ರವು ಇದೇ ಮಾರ್ಚ್ ಬಿಡುಗಡೆಯಾಗಲಿದ್ದು ಡಾಲಿ ಧನಂಜಯ ರವರು ಪೊಲೀಸ್ ಆಫೀಸರ್  “ಗುರುದೇವ್” ಆಗಿ ಮಾರ್ಚ್ 30 ರಿಂದ ಚಾರ್ಜ್ ತೆಗೆದುಕೊಳ್ಳಲಿದ್ದಾರೆ.

ಡಾಲಿ ಧನಂಜಯರವರ 25ನೇ ಚಿತ್ರ ಇದಾಗಿದ್ದು, ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್‌ನಡಿ  ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ರವರು ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

ವಿಜಯ್.ಎನ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ರವರು ಛಾಯಾಗ್ರಾಹಕರಾಗಿದ್ಡಾರೆ.

ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next