Advertisement

ಸಾಲ ಪುನರಾಚನೆ ಯೋಜನೆ ನಿಮಗೆಷ್ಟು ಗೊತ್ತು?

12:33 AM Sep 15, 2020 | mahesh |

ಮಣಿಪಾಲ: ಇಎಂಐ ಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಸೆ.28ರವರಗೆ ವಿಸ್ತ ರಿಸಲಾಗಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್‌ ಗುರುವಾರ ಮಧ್ಯಂತಾರ ಆದೇಶ ನೀಡಿದ್ದು. ಇಎಂಐ ಮೊರಾಟೋರಿಯಂ ಯೋಜನೆ ಕುರಿತ ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿದೆ.

Advertisement

ಈ ನಡುವೆ ಕಳೆದ ತಿಂಗಳು ಆರ್‌ಬಿಐ ಸಾಲ ಪುನರಾಚನೆ (ಲೋನ್‌ ರೀಸ್ಟ್ರಕ್ಚರಿಂಗ್‌) ಯೋಜನೆ ಘೋಷಿಸಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳು ಜನಸಾಮಾನ್ಯರ ನೆರವಿಗೆ ಬರಲಿವೆ. ಮುಖ್ಯವಾಗಿ ಈಗಾಗಲೇ ಸಾಲ ಪಡೆದಿರುವವರು ಮತ್ತೆ ಸಾಲ ಪಡೆಯಲು ಅಥವಾ ಅದರ ಬಡ್ಡಿ, ಮಾಸಿಕ ಕಂತು, ಒಟ್ಟು ಅವಧಿ ಮೊದಲಾದವನ್ನು ನವೀಕರಣ ಮಾಡಲು ಅವಕಾಶ ನೀಡಲಾಗಿದೆ. ಒಟ್ಟಾರೆ ಉದ್ದೇಶ ಸಾಲಗಾರರಿಗೆ ಹೆಚ್ಚಿನ ಸಮಯಾವಕಾಶ ನೀಡಿ, ಅವರಿಗೆ ಕೊಂಚ ನೆಮ್ಮದಿ ನೀಡುವುದು ಈ ಕ್ರಮದ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿಯೇ ಸಾಲ ಪುನರಾಚನೆ ಯೋಜನೆ ಎಂದರೇನು ? ಇದರ ಪ್ರಕ್ರಿಯೆ ಹೇಗೆ ? ಇದರಿಂದಾಗುವ ಲಾಭಗಳೇನು ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮರುಪಾವತಿ ಅವಧಿ ಹೆಚ್ಚಿಸಬಹುದು
ಈ ಯೋಜನ ಅನುಮೋದನೆ ಪಡೆದ ಅನಂತರ, ಈಗ ಬ್ಯಾಂಕ್‌ಗಳು ತಮ್ಮ ಸಾಲ ಮರುಪಾವತಿ ವೇಳಾಪಟ್ಟಿಯನ್ನು ಮರು ನವೀಕರಿಸ ಬಹುದಾಗಿದ್ದು, ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸಬಹುದು ಅಥವಾ ಪಾವತಿ ಪ್ರಕ್ರಿಯೆಯಲ್ಲಿ ಪರಿಹಾರವನ್ನು ನೀಡಬಹುದು. ಇನ್ನು ಈ ಯೋಜನೆ ಅಡಿಯಲ್ಲಿ ಬ್ಯಾಂಕ್‌ಗಳು ಇಎಂಐ ಅನ್ನು ಕಡಿಮೆ ಮಾಡಬೇಕೆ? ಸಾಲದ ಅವಧಿಯನ್ನು ಹೆಚ್ಚಿಸಬೇಕೇ? ಅಥವಾ ಬಡ್ಡಿಯನ್ನು ವಿಧಿಸಬೇಕೇ? ಎಂಬುದನ್ನು ನಿರ್ಧರಿಸಲು ಅನುಕೂಲವಾಗಲಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವರದಾನ
ನಷ್ಟಕ್ಕೆ ಒಳಗಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಲಗಾರರು ತಮ್ಮ ಸಾಲಗಳನ್ನು ಪ್ರಸ್ತುತ ( ಮಾರ್ಚ್‌ 1, 2020 ರ ವೇಳೆಗೆ) ಅಸ್ತಿತ್ವದಲ್ಲಿರುವ ಚೌಕಟ್ಟಿನಡಿಯಲ್ಲಿ ತಮ್ಮ ಸಾಲಗಳನನ್ನು ಮರುರಚಿಸಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ಗವರ್ನರ್‌ ತಿಳಿಸಿ¨ªಾರೆ. ಈ ಮರುರಚನೆಯ ಪ್ರಕ್ರಿಯೆಯನ್ನು 2021ರ ಮಾರ್ಚ್‌ 31ರೊಳಗೆ ಜಾರಿಗೆ ತರಬೇಕಾಗುತ್ತದೆ. ಕೊರೊನಾ ಸೋಂಕು ಉದ್ಯಮಗಳ ಕಾರ್ಯನಿರ್ವಹಣೆ ಮತ್ತು ಹಣದ ಹರಿವಿಗೆ ಅಡ್ಡಿಪಡಿಸುತ್ತಿದೆ. ಈ ಸದಂರ್ಭದಲ್ಲಿ ಆರ್‌ಬಿಐನ ಈ ನಿರ್ಧಾರ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವರದಾನವಾಗಲಿದೆ.

Advertisement

ಈ ಯೋಜನೆ ಯಾರಿಗೆ ಲಾಭ ಸಿಗಲಿದೆ?
ವಿಮಾನಯಾನ ಕಂಪೆನಿಗಳು, ಹೊಟೇಲ್‌ಗ‌ಳು ಮತ್ತು ಸ್ಟೀಲ್-ಸಿಮೆಂಟ್‌ ಕಂಪೆನಿಗಳು ಬ್ಯಾಂಕ್‌ ಜಾರಿಗೊಳಿಸಿರುವ ಈ ಹೊಸ ಯೋಜನೆಯ ಮೂಲಕ ಲಾಭ ಪಡೆಯಬಹುದು. ಗೃಹ ಸಾಲ ತೆಗೆದುಕೊಳ್ಳುವ ಗ್ರಾಹಕರು ಬ್ಯಾಂಕ್‌ ಅಧಿಕೃತ ಪ್ರಕಟನೆ ಹೊರಡಿಸುವವರೆಗೂ ಕಾಯಬೇಕಾಗಿದ್ದು, ಬ್ಯಾಂಕ್‌ ಕಡಿಮೆಗೊಳಿಸಿದ ಬಡ್ಡಿದರಕ್ಕೆ ಸಂಬಂಧಿಸಿದಂತೆ, ಆರ್‌ಬಿಐ ಬಡ್ಡಿದರವನ್ನು ಕಡಿಮೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next