Advertisement
ಇವತ್ತಿನ ಕಾಲದಲ್ಲಿ ತಿಂಗಳ ಸಂಬಳ ಪಡೆದು ಬದುಕವವರಿಗೆ ಆ ಹಣ ತಿಂಗಳು ಪೂರ್ತಿ ಕೈಯಲ್ಲಿ ಉಳಿಯುವುದಿಲ್ಲ; ಎಲ್ಲವೂ ಖರ್ಚಾಗಿ ಹೋಗುತ್ತಿದೆ. ಏಕೆಂದರೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನ ಮುಖೀಯಾಗಿವೆ. ಜೀವನ ವೆಚ್ಚವು ತಿಂಗಳ ಸಂಬಳದಿಂದ ಭರಿಸಲಾಗದಷ್ಟು ಜಾಸ್ತಿಯಾಗಿದೆ. ಮೇಲಾಗಿ ಜೀವನ ಶೈಲಿ ವೆಚ್ಚವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವವರೇ ಅಧಿಕ. ಹಾಗಿರುವಾಗ ಉಳಿತಾಯ ಹೇಗೆ ಸಾಧ್ಯ ?
Related Articles
Advertisement
ಜೀವನದಲ್ಲಿ ಮನುಷ್ಯನಿಗೆ ಹಲವಾರು ಗುರಿಗಳಿರುತ್ತವೆ. ಉನ್ನತ ಶಿಕ್ಷಣ, ಸ್ವಂತ ಮನೆ, ಮಕ್ಕಳ ಶಿಕ್ಷಣ, ಮಕ್ಕಳ ಮದುವೆ, ಹಂಗಿಲ್ಲದ ನಿವೃತ್ತಿಯ ಬದುಕು ಹೀಗೆ ಪಟ್ಟಿ ದೊಡ್ಡದಿರುತ್ತದೆ. ಈ ಗುರಿಗಳನ್ನು ಸಾಧಿಸಲು ಮನುಷ್ಯನಿಗೆ ಹಣ ತುಂಬಾ ಮುಖ್ಯ. ಅಂತೆಯೇ ಸಂಪಾದನೆಯ ಹಣವನ್ನು ಉಳಿಸಿ ತೊಡಗಿಸುವುದು ಕೂಡ ಅಷ್ಟೇ ಮುಖ್ಯ.
ಹಾಗೆ ಉಳಿಸಿ ತೊಡಗಿಸಿದ ಹಣ ಅಧಿಕ ಇಳುವರಿಯನ್ನು ತರುವುದು ಕೂಡ ಮುಖ್ಯ.ಏಕೆಂದರೆ ಬದುಕಿನ ವಿಭಿನ್ನ ಗುರಿಗಳನ್ನು ಸಾಧಿಸಲು ಉಳಿಸಿ ತೊಡಗಿಸಿದ ಹಣ ಹಲವು ಪಟ್ಟು ಬೆಳೆದು ಹೆಮ್ಮರವಾಗಬೇಕು. ಆದುದರಿಂದ ಈ ಗುರಿಯನ್ನು ಸಾಧಿಸಲು ನಾವು ಮೂರು ಅತೀ ಮುಖ್ಯ ಚಿನ್ನದ ನಿಯಮಗಳನ್ನು ಪಾಲಿಸಲೇ ಬೇಕು.
ಅವೆಂದರೆ : 1. ಸಣ್ಣ ವಯಸ್ಸಿನಲ್ಲೇ ಹಣ ಹೂಡಿಕೆಯನ್ನು ಆರಂಭಿಸುವುದು. 2. ಕ್ರಮಬದ್ಧವಾಗಿ ಹಣ ಹೂಡುವುದು. 3. ದೀರ್ಘಾವಧಿಗೆ ಹಣವನ್ನು ತೊಡಗಿಸುವುದು, ಅರ್ಥಾತ್ ಎಂದಿಗೂ ಕಿರು ಅವಧಿಗೆ ಅಲ್ಲ !
ನಾವು ದೀರ್ಘಾವಧಿಗೆ ಹೂಡುವ ಹಣ ದುಪ್ಪಟ್ಟು, ನಾಲ್ಕು ಪಟ್ಟು, ಎಂಟು ಪಟ್ಟು, ಹದಿನಾರು ಪಟ್ಟು, 32 ಪಟ್ಟು, 64 ಪಟ್ಟು ಬೆಳೆಯುತ್ತಾ ಹೋಗುವುದಕ್ಕೆ ಕಾಂಪೌಂಡಿಂಗ್ ಎಂದು ಹೂಡಿಕೆ ಭಾಷೆಯಲ್ಲಿ ಹೇಳುತ್ತಾರೆ. ಸಣ್ಣ ವಯಸ್ಸಿನಲ್ಲೇ ನೀವು ಆರಂಭಿಸುವ ದೀರ್ಘಾವಧಿಯ ಪೋಸ್ಟಲ್ ಆರ್ ಡಿ ಇದಕ್ಕೊಂದು ಅತ್ಯಂತ ಮಹತ್ವದ ಉದಾಹರಣೆ ಎನ್ನಬಹುದು. ಕಿರು ಅವಧಿಗೆ ಹೂಡುವ ಹಣ ಆ ಅವಧಿ ಮುಗಿದಾಕ್ಷಣ ಕೈ ಸೇರಿ ಒಡನೆಯೇ ನೀರಿನಂತೆ ಖರ್ಚಾಗುವುದು ನಮ್ಮ ನಿಮ್ಮ ಎಲ್ಲರ ಅನುಭವ.
ಹಣ ಹೂಡುವುದಕ್ಕೆ ಯಾವ ಮಾಧ್ಯಮ ಅತ್ಯಂತ ಆಕರ್ಷಕ ಎಂಬ ಪ್ರಶ್ನೆಗೆ ನಾವು ಈ ಕೆಳಗಿನಂತೆ ಅವುಗಳನ್ನು ಪಟ್ಟಿ ಮಾಡಬಹುದು.
1. ಈಕ್ವಿಟಿ ಶೇರುಗಳು 2. ಬಾಂಡ್ ಗಳು
3. ಮ್ಯೂಚುವಲ್ ಫಂಡ್
4. ನಿರಖು ಠೇವಣಿಗಳು (FD)
5. ಇತರ ಮಾರ್ಗಗಳು.