ನವದೆಹಲಿ: ಸಿನಿಮಾ ತಾರೆಯರು , ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ಜನರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಲವಾರು ಪೋಟೋಗಳನ್ನು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಹೀಗೆ ಪೋಸ್ಟ್ ಮಾಡಲಾದ ಪೋಟೋಗಳು ಅರಿವಿಗೆ ಬಂದೋ ಅಥವಾ ತಿಳಿಯದೆಯೋ ಡಿಲೀಟ್ ಆಗಿ ಬಿಡುತ್ತದೆ.
ಒಮ್ಮೆ ನಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಆಗಿರುವ ಪೋಟೋಗಳು ಇನ್ಯಾವುದೊ ಸಮಯದಲ್ಲಿ ಮತ್ತೆ ಮರಳಿ ಪಡೆಯಬೇಕು ಎಂದು ಅನ್ನಿಸಬಹುದು. ಅಂತಹ ಸಮಯದಲ್ಲಿ ಈ ಕೆಳಗಿನ ಸರಳ ವಿಧಾನವನ್ನು ಅನುಸರಿಸುವ ಮೂಲಕ ಡಿಲೀಟ್ ಆಗಿರುವ ಪೋಟೋಗಳನ್ನು ಮರಳಿ ಪಡೆಯಬಹುದಾಗಿದೆ.
ಮೊದಲು ನಿಮ್ಮ ಇನ್ ಸ್ಟಾಗ್ರಾಂ ಖಾತೆಯನ್ನು ಓಪನ್ ಮಾಡಿ ನಂತರ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಪ್ರೊಫೈಲ್ ನಲ್ಲಿ ಇರುವ ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ನಿಮ್ಮ ಇನ್ ಸ್ಟಾಗ್ರಾಂ ಖಾತೆಯ ಸೆಟ್ಟಿಂಗ್ ಗೆ ಸಂಬಂಧಿಸಿರುವ ವಿವಿಧ ಆಯ್ಕೆಗಳ ಪಟ್ಟಿ ಕಾಣಸಿಗುತ್ತದೆ.
ಇದನ್ನೂ ಓದಿ:ಮಾಡಬಾರದ ಕೆಲಸ ಮಾಡಿ ಕಾಂಗ್ರೆಸ್ ನವರಿಗೆ ಅಭ್ಯಾಸ: ಸಚಿವ ಕೆ.ಎಸ್. ಈಶ್ವರಪ್ಪ
ಆ ಬಳಿಕ ಸೆಟ್ಟಿಂಗ್ ವಿವಿಧ ಆಯ್ಕೆಗಳ ಪಟ್ಟಿಯನ್ನು ಸ್ಕ್ರೋಲ್ ಮಾಡಿದಾಗ ಕೆಳಭಾಗದಲ್ಲಿ ಇತ್ತೀಚಿಗೆ ಡಿಲೀಟ್ ಮಾಡಿರುವ ಪೋಟೋಗಳನ್ನು ಮರಳಿ ಪಡೆಯುವ ಆಯ್ಕೆ ಕಂಡುಬರುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈ ಆಯ್ಕೆಯ ಮೂಲಕ ನಿಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಡಿಲೀಟ್ ಮಾಡಲಾಗಿರುವ ಫೋಟೋವನ್ನು ನೀವು ಮರಳಿ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಸೌಲಭ್ಯ ಫೋಟೋ ಒಂದನ್ನು ನೀವು ಇನ್ ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ 30 ದಿನದ ಒಳಗೆ ಮಾತ್ರ ಲಭ್ಯವಾಗುತ್ತದೆ. 30 ದಿನಗಳ ನಂತರ ಪೋಟೋಗಳು ಶಾಶ್ವತವಾಗಿ ಡಿಲೀಟ್ ಆಗುತ್ತವೆ.