ನವದೆಹಲಿ: ಭಾರತದಲ್ಲಿ ನಾಗರಿಕ ಗುರುತಿನ ಚೀಟಿ ಎನ್ನಿಸಿಕೊಂಡಿರುವ ಆಧಾರ್ ಕಾರ್ಡ್ ಗೆ ಬಹು ದೊಡ್ಡ ಮಾನ್ಯತೆ ಇದೆ. ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ದೇಶದಲ್ಲಿ ಸರ್ಕಾರದ ಯಾವ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಬಹಳ ಮುಖ್ಯವಾಗುತ್ತದೆ.
ಇಷ್ಟು ಮಾನ್ಯತೆ ಇರುವ ಆಧಾರ್ ಕಾರ್ಡ್, ಕಳೆದುಹೋದರೆ, ನೀವು ಅದನ್ನು ತಕ್ಷಣ ಲಾಕ್ ಮಾಡುವುದಕ್ಕೆ ಕೂಡ ಸಾಧ್ಯವಿದೆ. ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಬೇರೆ ಯಾವುದೇ ವ್ಯಕ್ತಿ ದುರುಪಯೋಗಪಡಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ ನೀವು ಆಧಾರ್ ಕಾರ್ಡ್ ಕಳೆದು ಹೋದಲ್ಲಿ ಅದನ್ನು ಲಾಕ್ ಮಾಡುವುದು ಉತ್ತಮ. ಹಾಗಾದರೇ, ಸರ್ಕಾರದ ಮತ್ತು ಖಾಸಗಿ ಬಹುತೇಕ ಎಲ್ಲಾ ಕೆಲಸಗಳಿಗೆ ಅಗತ್ಯವಿರುವ ಆಧಾರ್ ಕಾರ್ಡ್ ಕಳೆದು ಹೋದರೆ ಲಾಕ್ ಮಾಡುವುದು ಹಾಗೂ ಅದನ್ನು ಮತ್ತೆ ಅನ್ ಲಾಕ್ ಮಾಡುವ ಪ್ರಕ್ರಿಯೆಗಳ ಬಗ್ಗೆ ಯುಐಡಿಎಐ ವೆಬ್ ಸೈಟ್ ನಲ್ಲಿ ವಿವರಿಸಲಾಗಿದೆ.
ಓದಿ : ಕೋವಿಡ್ ಆರ್ಭಟ : ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಸಿದ್ದರಾಮಯ್ಯ!
ಆಧಾರ್ ಅನ್ನು ಹೇಗೆ ಲಾಕ್ ಮಾಡುವುದು? ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು, ನೀವು ಯುಐಡಿಎಐ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ನಂತರ ಕೆಳಗೆ ನೀಡಿದ ವಿಧಾನಗಳನ್ನು ಅನುಸರಿಸಿ.
- ಯುಐಡಿಎಐ ನ ಅಧಿಕೃತ ವೆಬ್‌ಸೈಟ್https://resident.uidai.gov.in/ ಗೆ ಭೇಟಿ ನೀಡಿ
- ‘ನನ್ನ ಆಧಾರ್’ ನಲ್ಲಿ ನೀವು ‘Aadhaar Services’ ಆಯ್ಕೆಯನ್ನು ಮಾಡಿ
- Lock/Unlock Biometrics ಆಧಾರ್ ಸರ್ವೀಸಸ್ ಆಯ್ಕೆಯನ್ನು ಕಾನ ಸಿಗುತ್ತದೆ.
- ಕೆಳಗಿನLock/Unlock Biometrics ಟ್ಯಾಬ್ ಕ್ಲಿಕ್ ಮಾಡಿ.
- log in ಆಯ್ಕೆ ಕಾಣಿಸುತ್ತದೆ, ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆ ಅಥವಾ 15 ಅಂಕಿಯ ವರ್ಚುವಲ್ ಐಡಿ (ವಿಐಡಿ) ಅನ್ನು ನಮೂದಿಸಿ.
- ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು’Send OTP’ ಕ್ಲಿಕ್ ಮಾಡಿ
- ಒಟಿಪಿಯನ್ನು ಎಂಟರ್ ಮಾಡಿದ ನಂತರ, ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.
- ಲಾಕ್ ಆಯ್ಕೆಯನ್ನು ಕ್ಲಿಕ್ ಮಾಡಿ, ಹಾಗೆ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತದೆ.
Related Articles
ಇನ್ನು, ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವ ಮೊದಲು, ನೀವು ವರ್ಚುವಲ್ ಐಡಿ ಅನ್ನು ಕ್ರಿಯೇಟ್ ಮಾಡಬೇಕು ಎಂಬುದು ನೆನಪಿನಲ್ಲಿರಲಿ, ಆಧಾರ್ ಸಂಖ್ಯೆಯನ್ನು ಲಾಕ್ ಮಾಡಿದ ನಂತರ, KYCಗೆ ಸಂಬಂಧಿಸಿದಂತೆ ಇದು ಅಗತ್ಯವಾಗಿಬೇಕಾಗುತ್ತದೆ. ನೀವು ಲಾಕ್ ಮಾಡಿ ಹಾಗೆ ಅದೇ ಪ್ರಕ್ರಿಯೆಯಲ್ಲಿ ಅದನ್ನ ಅನ್ಲಾಕ್ ಮಾಡಬಹುದು. OTP ನಮೂದಿಸುವ ಮೂಲಕ, ಬಯೋಮೆಟ್ರಿಕ್ ಡೇಟಾವನ್ನು ‘ಅನ್ಲಾಕ್’ ಮಾಡುವ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ.
ಓದಿ : ದ.ಕನ್ನಡದಲ್ಲಿ ವಾಕ್ಸಿನ್ ಕೊರತೆಯಿದೆ ಆದರೆ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ: ಐವನ್