Advertisement
ಚೈನ್ ಯಾಕೆ ನಿರ್ವಹಣೆ ಮಾಡಬೇಕು?ಭಾರತದಂತಹ ದೇಶದಲ್ಲಿ ಹವಾಮಾನ ಬದಲಾವಣೆಯಾಗುತ್ತಲೇ ಇರುತ್ತದೆ. ಜತೆಗೆ ಎಲ್ಲ ಕಡೆಯೂ ರಸ್ತೆಯ ಸ್ಥಿತಿ ಚೆನ್ನಾಗಿ ಇರುವುದಿಲ್ಲ. ಡಾಮಾರು/ ಮಣ್ಣಿನ ರಸ್ತೆ ಇದ್ದು, ಇಂತಹ ಕಡೆಗಳಲ್ಲಿ ಚೈನ್ ಬಿಗಿತ ಬೇಗನೆ ಕಳೆದುಕೊಳ್ಳುತ್ತದೆ. ಆದ್ದರಿಂದ ನಿಯಮಿತವಾಗಿ ಇದರ ನಿರ್ವಹಣೆ ಮಾಡಲೇ ಬೇಕು.
ಸುಮಾರು 500 ರಿಂದ 800 ಕಿ.ಮೀ. ಅವಧಿಗೆ ಚೈನ್ ಲ್ಯೂಬ್ರಿಕೇಶನ್ ಮಾಡುತ್ತಿದ್ದರೆ ಉತ್ತಮ. ಚೈನ್‌ನ ಬಾಳಿಕೆಯೂ ಉತ್ತಮವಾಗಿರುತ್ತದೆ. ಚೈನ್‌ಗೆ ಆಯಿಲ್ ಸಿಂಪಡಿಸುವ ಬದಲು ಅದಕ್ಕೆಂದೇ ಸಿಗುವ ಸ್ಪ್ರೇ ಗಳನ್ನು ಬಳಸಿದರೆ, ಬಾಳಿಕೆಯೂ, ಸವಾರಿಯ ಖುಷಿಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ನಮ್ಮ ಚಾಲನಾ ಅಭ್ಯಾಸ, ಯಾವ ರೀತಿಯ ರಸ್ತೆ ಇದೆ? ಕರಾವಳಿ ಭಾಗದಲ್ಲಿದ್ದೇವೆಯೇ? ಎಂಬುದರ ಮೇಲೆ ಚೈನ್ ನಿರ್ವಹಣೆ ನಿರ್ಧಾರವಾಗುತ್ತದೆ. ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪು ನೀರಿನ ಅಂಶದ ಕಾರಣದಿಂದ ಚೈನ್ ಬೇಗನೆ ಸವೆತ, ಬಿಗಿತ ಕಳೆದುಕೊಳ್ಳುವುದು ಸಾಮಾನ್ಯ. ಆದ್ದರಿಂದ ಇಲ್ಲಿ ಸರಿಯಾಗಿ ನಿರ್ವಹಣೆ, ಬಿಗಿತದ ಪರಿಶೀಲನೆ ಮಾಡಬೇಕಾಗುತ್ತದೆ. ಸಾಂಪ್ರಾಯಿಕ ಮತ್ತು ಒ ರಿಂಗ್ ಚೈನ್
ಚೈನ್‌ಗಳಲ್ಲಿ ಎರಡು ರೀತಿಗಳಿವೆ. ಚೈನ್ ಒಳಗಿನ ಜೋಡಣಾ ಭಾಗದಲ್ಲಿ ಇದು ವ್ಯತ್ಯಾಸ ಹೊಂದಿದೆ. ಒ ರಿಂಗ್ ಚೈನ್‌ಗಳಿಗೆ ಚೈನ್ ಗಾರ್ಡ್ ಇರದೇ ಎದುರಿಗೆ ಕಾಣಿಸುವಂತೆ ಇರುತ್ತದೆ. ಸಾಂಪ್ರದಾಯಿಕ ಚೈನ್‌ಗಳಿಗೆ ಚೈನ್ ಗಾರ್ಡ್ ಇದ್ದು, ಇದಕ್ಕೆ ಹೆಚ್ಚಿನ ಮಣ್ಣು, ಕೆಸರು ಇತ್ಯಾದಿಗಳು ಮೆತ್ತಿಕೊಳ್ಳದಂತೆ ಕಾಪಾಡುವುದು ಅಗತ್ಯವಾಗುತ್ತದೆ. ಒ ರಿಂಗ್ ಚೈನ್‌ಗಳನ್ನು ತುಸು ಅಧಿಕ ಸಾಮರ್ಥ್ಯದ ಬೈಕಗಳಲ್ಲಿ ಬಳಸುವುದು ಸಾಮಾನ್ಯ.
Related Articles
ಚೈನ್ ಅನ್ನು ಡೀಸೆಲ್‌ನಲ್ಲಿ ಸ್ವಲ್ಪ ಹೊತ್ತು ಅದ್ದಿ ಇಟ್ಟು ಬಳಿಕ ಅದರ ಕೊಳೆಯನ್ನು ತೆಗೆಯಬೇಕು. ನೀರಿನಿಂದ ತೊಳೆದ ಬಳಿಕ ನೀರಿನ ಅಂಶವನ್ನು ಬಟ್ಟೆಯಿಂದ ಒರೆಸಿ, ಒಣಗಿದ ಬಳಿಕ ಆಯಿಲ್ ಅಥವಾ ಸ್ಪ್ರೇ ಮಾಡಬಹುದು. ಅಥವಾ ಕ್ಲೀನಿಂಗ್ ಸ್ಪ್ರೇ ಮೂಲಕವೂ ಕೊಳೆ ತೆಗೆಯಬಹುದು. ಸ್ಪ್ರೇ ಅಥವಾ ಆಯಿಲ್ ಸಮಪ್ರಮಾಣದಲ್ಲಿ ಚೈನ್ ಸುತ್ತಲೂ ಹಾಕಬೇಕು.
Advertisement
ಲ್ಯೂಬ್ರಿಕೆಂಟ್ ಆಯ್ಕೆ ನಾನ್‌ಸ್ಟಿಕಿ ಲ್ಯೂಬ್ರಿಕೆಂಟ್‌ಗಳ ಆಯ್ಕೆಯೇ ಉತ್ತಮ ಇವುಗಳು ಯಾವುದೇ ಧೂಳು, ಗ್ರೀಸ್ ಇತ್ಯಾದಿಗಳನ್ನು ಚೈನ್‌ನಲ್ಲಿ ಇರಗೊಡುವುದಿಲ್ಲ. ಚೈನ್ ಬಿಗಿತ ಪರಿಶೀಲನೆ ಹೇಗೆ?
ಚೈನ್ ಸ್ಲಾಕ್‌ನೆಸ್ ಮತ್ತು ಟೆನ್ಷ್ ನ್ ಎಂದು ಇದನ್ನು ಕರೆಯುತ್ತಾರೆ. ಇದಕ್ಕಾಗಿ ಬೈಕ್ ಅನ್ನು ಮೇನ್ ಸ್ಟಾಂಡ್ ಹಾಕಿ ನಿಲ್ಲಿಸಿ ಚಕ್ರವವನ್ನು ಹಿಂದೆ, ಮುಂದೆ ತಿರುಗಿಸಬೇಕು. ಈ ವೇಳೆ ಚೈನ್ ಹೆಚ್ಚು ಬಿಗಿ ಇರದೇ, ಹಾಗೆಂದು ಹೆಚ್ಚು ಸಡಿಲವಾಗಿಯೂ ಇರಬಾರದು. ಚೈನ್‌ನ ಎಲ್ಲ ಬದಿಯೂ ಒಂದೇ ರೀತಿ ಬಿಗಿತ ಹೊಂದದಿರಬೇಕು. ಈ ಬಿಗಿತ ಪರಿಶೀಲನೆಗೆ ಚೈನ್ ಗಾರ್ಡ್‌ನಲ್ಲಿ ಒಂದು ಮಟ್ಟವಿದ್ದು, ಅದರ ಒಳಗೆ ಚೈನ್ ನಿಂತಿದಿಯೇ ಎಂದು ಪರಿಶೀಲಿಸಬಹುದು. ಈಶ