ಬೇಸಗೆಯಲ್ಲಿ ಮುಖದ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಯಾಕೆಂದರೆ ಬಿಸಿಲಿನ ಪರಿಣಾಮ ಮುಖದ ಮೃದು ಚರ್ಮದ ಮೇಲೆ ಗಂಭೀರವಾಗಿರುತ್ತದೆ. ಇದರಿಂದ ಅಲರ್ಜಿ ಸಮಸ್ಯೆಗಳು ಕಾಡುತ್ತದೆ. ಅದ್ದರಿಂದ ಬೇಸಗೆಯಲ್ಲಿ ಮುಖದ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡುವುದು ಉತ್ತಮ.
ಬಿಸಿಲಿನ ಶಾಖದ ಪರಿಣಾಮ, ತಾಪಮಾನದ ಏರಿಕೆಯಿಂದಾಗಿ ಮುಖದಲ್ಲಿ ಕೆಂಪು ಗುಳ್ಳೆಗಳು, ತುರಿಕೆ, ಮೊಡವೆ, ಕಪ್ಪು ಕಲೆಗಳು ಉಂಟಾಗುವ ಸಾಧ್ಯತೆಗಳಿವೆ.
ರಕ್ಷಣೆ ಹೇಗೆ ?
••ಬಿಸಿಲಿಗೆ ಹೋಗುವಾಗ ಮುಖವನ್ನು ಬಟ್ಟೆಯಿಂದ ಸಾಧ್ಯವಾದಷ್ಟು ಭಾಗವನ್ನು ಮುಚ್ಚಿ. ಹೊರಗೆ ಹೋಗಿ ಬಂದ ತತ್‌ಕ್ಷಣ ತಣ್ಣಿಗಿನ ನೀರಿನಲ್ಲಿ ಮುಖ ತೊಳೆಯಲು ಮರೆಯದಿರಿ. ರಾಸಾಯನಿಕ ಬಳಸಿದ ಮೇಕಪ್ ವಸ್ತುಗಳನ್ನು ಬಳಸದಿರಿ. ಮನೆಯಲ್ಲಿ ಸಿಗುವ ಹಣ್ಣುಗಳ ರಸದಿಂದ ಮುಖದ ಮೇಲಿನ ಕಲೆಗಳನ್ನು ನಿವಾರಿಸಿ.
Related Articles
••ಮುಖದ ಚರ್ಮದ ಅಲರ್ಜಿಗೆ ಅಲೋವೆರಾ ಉತ್ತಮ ಮದ್ದು.
••ಆಲಿವ್ ಆಯಿಲ್ನಲ್ಲಿ ವಿಟಮಿನ್ ಇ ಇದ್ದು, ಇದು ಮುಖದ ಅಲರ್ಜಿಯ ತುರಿಕೆಯನ್ನು ಕಡಿಮೆ ಮಾಡಿ, ನುಣುಪಾಗಿಸುತ್ತದೆ. ಇದರ ಜತೆ ಸ್ವಲ್ಪ ಜೇನುತಪ್ಪವನ್ನು ಸೇರಿಸಬಹುದು.
••ಬೇಕಿಂಗ್ ಸೋಡಾವನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರ ಮಾಡಿ ಮುಖಕ್ಕೆ ಹಚ್ಚುವುದರಿಂದ ಅಲರ್ಜಿ ಕಡಿಮೆಯಾಗುತ್ತದೆ. ಆದರೆ ಹೆಚ್ಚು ಕಾಲ ಇದನ್ನು ಮುಖದಲ್ಲಿ ಇರಿಸಬಾರದು.
••ನಾವು ತಿನ್ನುವ ಆಹಾರವು ಚರ್ಮದ ಮೇಲೆ ಪರಿಣಾಮ ಬೀರುವುದರಿಂದ ಆದಷ್ಟು ಹಣ್ಣು ತರಕಾರಿಗಳನ್ನು ಮತ್ತು ಒಣಗಿದ ದ್ರಾಕ್ಷಿ, ಬಾದಾಮ್‌ಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದು ಉತ್ತಮ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.
••ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದರಿಂದಲೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.