Advertisement

ಯೂಟ್ಯೂಬ್ ನಲ್ಲಿ ಸಬ್‌ಸ್ಕ್ರೈಬರ್ ಸಂಖ್ಯೆಯನ್ನು ಹೈಡ್ ಮಾಡುವುದು ಹೇಗೆ?

03:39 PM Feb 10, 2022 | Team Udayavani |

ಯೂಟ್ಯೂಬ್ ಎಲ್ಲರಿಗೂ ಪರಿಚಿತ. ಲಾಕ್‌ಡೌನ್ ಸಮಯದಲ್ಲಂತೂ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳೂ ಸಹ ಯೂಟ್ಯೂಬ್ ನಲ್ಲಿ ಚಾನಲ್ ಗಳನ್ನು ಆರಂಭಿಸಿದ್ದಾರೆ. ಕೆಲವರು ಒಳ್ಳೆ ಯಶಸ್ಸನ್ನೂ ಗಳಿಸಿದ್ದಾರೆ. ಆದರೆ ಯೂಟ್ಯೂಬ್‌ನಲ್ಲಿ ವೀವರ್ಸ್‌ಗಳನ್ನಾದರೂ ಪಡೆಯಬಹುದು, ಸಬ್‌ಸ್ಕ್ರೈಬರ್ಸ್‌ ಗಳನ್ನಲ್ಲ. ನಮ್ಮ ಪ್ರತಿಯೊಂದು ವೀಡಿಯೊ ಸಾವಿರಗಟ್ಟಲೆ ವೀಕ್ಷಣೆ ಪಡೆಯಬಹುದು, ಆದರೆ ಸಬ್ಸ್‌ಕ್ರೈಬರ್ಸ್‌ ಪಡೆಯುವುದು ಹರಸಾಹಸವೇ ಸರಿ.

Advertisement

ಇದಕ್ಕೊಂದು ಮುಖ್ಯ ಕಾರಣ ನಮಗೂ ಗೊತ್ತಿರಬಹುದು. ನಾವೂ ಸಹ ಹಲವು ಬಾರಿ, ಒಂದು ಚಾನಲ್‌ಗೆ ಎಷ್ಟು ಸಬ್‌ಸ್ಕ್ರೈಬರ್ಸ್‌ ಇದ್ದಾರೆ ಎಂದು ನೋಡಿ, ನಾವೂ ಸಬ್‌ಸ್ಕ್ರೈಬ್ ಮಾಡುತ್ತೇವೆ. ಕಡಿಮೆ ಸಬ್‌ಸ್ಕ್ರೈಬರ್ಸ್‌ ಇದ್ದರೆ, ಅಥವಾ ಒಂದು ಹೊಸ ಚಾನಲ್ ಆದರೆ ಅಷ್ಟು ಬೇಗ ಸಬ್‌ಸ್ಕ್ರೈಬ್ ಮಾಡಲ್ಲ. ಹಾಗಿರುವಾಗ ನಮ್ಮ ಚಾನಲ್ ಗೆ ಸಬ್‌ಸ್ಕ್ರೈಬರ್ಸ್‌ ಗಳನ್ನು ನಿರೀಕ್ಷಿಸುವುದು ಎಷ್ಟು ಸರಿ, ಅಲ್ವಾ!

ಅದಕ್ಕೊಂದು ಸುಲಭ ಪರಿಹಾರ, ನಮ್ಮ ಚಾನಲ್‌ನ ಸಬ್‌ಸ್ಕ್ರೈಬರ್ಸ್‌ ಗಳ ಸಂಖ್ಯೆಯನ್ನು ಹೈಡ್ ಮಾಡುವುದು. ಒಳ್ಳೆಯ ಕಂಟೆಂಟ್ ಗಳು ಇದ್ದರೂ ಸಬ್‌ಸ್ಕ್ರೈಬರ್ಸ್‌ ಕಡಿಮೆ ಇದ್ದಾರೆ ಎಂದರೆ, ಸಂಖ್ಯೆ ಹೈಡ್ ಮಾಡುವುದರಿಂದ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಸಬ್‌ಸ್ಕ್ರೈಬರ್ಸ್‌ ಸಿಗುವ ಸಾಧ್ಯತೆ ಇರುತ್ತದೆ.

ಹೈಡ್ ಮಾಡುವುದು ಹೇಗೆ:

ಮೊದಲು ಯೂಟ್ಯೂಬ್ ಸ್ಟೂಡಿಯೋಗೆ ಲಾಗಿನ್ ಆಗಿ. ಮೊಬೈಲ್ ನಲ್ಲಾದರೆ ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡಬೇಕು. ಡೆಸ್ಕ್‌ಟಾಪ್ ನಲ್ಲಾದರೆ ಬ್ರೌಸರ್ ಮೂಲಕ ನೇರ ಓಪನ್ ಮಾಡಬಹುದು.

Advertisement

ಸ್ಟೂಡಿಯೋದಲ್ಲಿ ‘ಸೆಟ್ಟಿಂಗ್ಸ್’ ಅನ್ನು ಆಯ್ಕೆ ಮಾಡಿ, ‘ಚಾನಲ್’ ಗೆ ಹೋಗಿ

ಅಲ್ಲಿ ‘ಅಡ್ವಾನ್ಸ್‌ಡ್ ಸೆಟ್ಟಿಂಗ್ಸ್’ ಗೆ ಹೋದರೆ, ಕೆಳಗೆ ’ಡಿಸ್‌ಪ್ಲೇ ನಂಬರ್….’ ಅನ್ನೋ ಆಪ್ಷನ್ ಇರುತ್ತದೆ. ಅದನ್ನು ಡಿಸೆಲೆಕ್ಟ್ ಮಾಡಿ (ಟಿಕ್ ಮಾರ್ಕ್ ಆಫ್ ಮಾಡಿ).

ಕೊನೆಯಲ್ಲಿ ಅದನ್ನು ಸೇವ್ ಮಾಡಲು ಮರೆಯದಿರಿ.

ಇದನ್ನು ಹೊಸ ಚಾನಲ್‌ಗಳಿರುವವರು, ಕಡಿಮೆ ಸಬ್ ಇರುವವರು ಬಳಸಿದರೆ ಉತ್ತಮ. ಇಷ್ಟು ಸಾಕು, ಇನ್ನು ಡಿಸ್ಪ್ಲೇ ಮಾಡುವ ಎಂದು ನಿಮಗನಿಸಿದರೆ, ಸಬ್‌ಸ್ಕ್ರೈಬರ್ಸ್‌ ಸಂಖ್ಯೆಯನ್ನು ಎಲ್ಲರಿಗೂ ಕಾಣುವಂತೆ ಇಡಬಹುದು.

– ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next