ನವ ದೆಹಲಿ : ನಿಮಗೆ ಎಸ್ ಬಿ ಐ ಮತ್ತೊಂದು ಸೌಲಭ್ಯವನ್ನು ನೀಡುತ್ತಿದೆ. ನಿಮ್ಮ ಎಸ್ ಬಿ ಐ ಡೆಬಿಟ್ ಕಾರ್ಡ್ ನಲ್ಲಿ ನೀವು ಇನ್ನು ಇಎಂಐ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ.
ಹೌದು ಆನ್ ಲೈನ್ ಶಾಪಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಪ್ರಮುಖ ಬ್ಯಾಂಕುಗಳು ಡೆಬಿಟ್ ಕಾರ್ಡ್ ಗಳಲ್ಲಿಯೂ ಇಎಂಐ ಸೌಲಭ್ಯವನ್ನು ನೀಡುತ್ತಿವೆ. ಪ್ರಮುಖ ಇ-ಕಾಮರ್ಸ್ ವೆಬ್ ಸೈಟ್‌ಗಳ ಸಹಭಾಗಿತ್ವದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಎಸ್ ಬಿ ಐ ಹೊರತಂದಿದೆ.
ಎಸ್ ಬಿ ಐ ಡೆಬಿಟ್ ಕಾರ್ಡ್ ಇಎಂಐ ಬಳಕೆದಾರರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೆಕ್ಕಿಸದೆ ಏನು ಬೇಕಾದರೂ ಖರೀದಿಸಲು ಅವಕಾಶ ಕಲ್ಪಿಸಿಕೊಡುತ್ತಿದೆ. ಇದರಿಂದಾಗಿ ಗ್ರಾಹಕರು ಏನನ್ನಾದ್ರೂ ಖರೀದಿಸಲು ಬಯಸಿದರೂ, ಸಾಕಷ್ಟು ಹಣವಿಲ್ಲದಿದ್ದಾಗ, ಕಂತುಗಳಲ್ಲಿ ನಂತರ ಪಾವತಿಸುವ ಆಯ್ಕೆಯನ್ನು ನೀಡುತ್ತದೆ.
ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಗಳಲ್ಲಿ ಎಸ್ ಬಿ ಐ ಡೆಬಿಟ್ ಕಾರ್ಡ್ ಬಳಸಿ ನಿಮ್ಮ ವ್ಯವಹಾರಗಳನ್ನು ಸುಲಭವಾಗಿ ಇಎಂಐಗಳಾಗಿ ಪರಿವರ್ತಿಸಬಹುದು. ಮಾಸಿಕ ಪಾವತಿ 8,000 ರೂಪಾಯಿಗಳವರೆಗೆ ಇಎಂಐ ಆಯ್ಕೆಯನ್ನು ನೀಡುತ್ತದೆ ಎಸ್ ಬಿ ಐ ನೀಡುತ್ತಿದೆ.
ಓದಿ : ಕೋವಿಡ್ ಲಸಿಕೆಯ ಕೊರತೆ ಒಂದು ಗಂಭೀರ ವಿಚಾರ, ಉತ್ಸವ ಅಲ್ಲ : ಗಾಂಧಿ ಟ್ವೀಟಾಕ್ರೋಶ
ಡೆಬಿಟ್ ಕಾರ್ಡ್ ಇಎಂಐ ಅರ್ಹತೆ ಪರಿಶೀಲನೆ ಮಾಡುವುದು ಹೇಗೆ..?
*
https://onlineapply.sbi.co.in/personal-banking/sbi-flipkart ಗೆ ಭೇಟಿ ನೀಡಿ
* ನಿಮ್ಮ ಮೊಬೈಲ್ ನಂಬರ್ ಹಾಗೂ ಅಕೌಂಟ್ ನಂಬರ್ ನಮೂದಿಸಿ
* ಚೆಕ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ
ಎಸ್‌ಎಂಎಸ್‌ನೊಂದಿಗೆ ಡೆಬಿಟ್ ಕಾರ್ಡ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?
* DCEMI ಎಂದು ಟೈಪ್ ಮಾಡಿ
* 57575 ನಂಬರ್ ಗೆ ಎಸ್ ಎಂ ಎಸ್ ಕಳುಹಿಸಿ
* ಡೆಬಿಟ್ ಕಾರ್ಡ್ ಅರ್ಹತೆಯನ್ನು ಎಸ್ ಎಂ ಎಸ್ ಮೂಲಕ ತಿಳಿಸಲಾಗುತ್ತದೆ
ಎಸ್ ಬಿ ಐ ಡೆಬಿಟ್ ಕಾರ್ಡ್ ಇಎಂಐ ಇತರೆ ಸೌಲಭ್ಯಗಳು ಏನಿವೆ..?
* 1 ಲಕ್ಷ ರೂಪಾಯಿವರೆಗೆ ಸಾಲ ನೀಡುವುದು
* 6-9-12-18 ತಿಂಗಳುಗಳಿಗೆ ಅನ್ವಯವಾಗುವಂತೆ ಬಡ್ಡಿದರ
* ಅನ್ವಯವಾಗುವ ಬಡ್ಡಿ ದರ : 2-ವರ್ಷ ಎಂ ಸಿ ಎಲ್ಆರ್ + 7.50%
* ಹೆಚ್ಚಿನ ಗ್ರಾಹಕ ಬಾಳಿಕೆ ಬರುವ ಉತ್ಪನ್ನಗಳು ಮೇಲೆ ಇಎಂಐ ಲಭ್ಯವಿದ್ದು, ಪ್ರೊಸೆಸಿಂಗ್ ಶುಲ್ಕವಿಲ್ಲ.
* ಮುಂಚಿತವಾಗಿ ಪಾವತಿಸಿದ ಮೊತ್ತದ 3% ಪೂರ್ವಪಾವತಿ ದಂಡ.
* ನಿಗದಿತ ಮಿತಿಯೊಳಗೆ, ಆನ್‌ಲೈನ್ ಇಎಂಐ ಮತ್ತು ಡಿಸಿ ಇಎಂಐ ಅಥವಾ ಎರಡರ ನಡುವೆ ಆಯ್ಕೆಮಾಡಿ.
ಓದಿ : ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್