ಪ್ರಸ್ತುತ ಆಡಿಯೋ ಹಾಗೂ ವಿಡಿಯೋ ಫೀಚರ್ ಹೊಂದಿರುವ ಸೋಷಿಯಲ್ ಮೀಡಿಯಾ ಆ್ಯಪ್‍ಗಳು ಟಾಪ್ ಟ್ರೆಂಡಿಂಗ್‍ನಲ್ಲಿವೆ. ಈ ನಿಟ್ಟಿನಲ್ಲಿ ಇದೀಗ ಟ್ವಿಟರ್ ಕೂಡ ಹೊಸತನವೊಂದಕ್ಕೆ ತನ್ನನ್ನು ತೆರೆದುಕೊಳ್ಳುತ್ತಿದೆ. ಫೇಸ್‍ಬುಕ್, ವಾಟ್ಸಪ್‍ನಂತೆ ಬಹುಬೇಡಿಕೆಯ ಹಾಗೂ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟ್ವಿಟರ್ ಇದೀಗ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಹೊಸ ಫೀಚರ್ ವೊಂದನ್ನು ಪರಿಚಯಿಸಲು ಮುಂದಾಗಿದೆ.
ಹೌದು, ಟ್ವಿಟರ್ ತನ್ನ ಎಲ್ಲ ಗ್ರಾಹಕರಿಗೆ ‘ಲೈವ್ ಆಡಿಯೋ ಚಾಟ್’ ಫೀಚರ್ ಒದಗಿಸುವತ್ತ ಹೆಜ್ಜೆ ಇಟ್ಟಿದೆ. ಆಂಡ್ರಾಯ್ಡ್ ಮೊಬೈಲ್ ಫೋನ್ ಹೊಂದಿರುವ ಟ್ವಿಟರ್ ಬಳಕೆದಾರರಿಗೆ ಲೈವ್ ಆಡಿಯೋ ಫೀಚರ್ ಸೌಲಭ್ಯ ದೊರೆಯಲಿದೆ. ಬರುವ ಏಪ್ರಿಲ್ ತಿಂಗಳಲ್ಲಿನಲ್ಲಿ ಆಂಡ್ರಾಯ್ಡ್ ಓಎಸ್ ಫೋನ್‍ಗಳಲ್ಲಿ ಈ ಹೊಸ ಫೀಚರ್ ಲಭ್ಯವಾಗಲಿದೆ.
ಏನಿದು ಲೈವ್ ಆಡಿಯೋ ಚಾಟ್ ?
ಆಡಿಯೋ ಚಾಟ್ ಫೀಚರ್ ಅನ್ನು ಟ್ವಿಟರ್ ಸ್ಪೇಸ್ ಎಂದು ಕರೆಯಲಾಗುತ್ತದೆ. ಲೈವ್ ಆಡಿಯೋ ಚಾಟ್ ಮೂಲಕ ಏಕಕಾಲದಲ್ಲಿ 10 ಜನರ ಜತೆ ಸಂಭಾಷಣೆ ನಡೆಸಬಹುದು. ನಿಮ್ಮನ್ನು ಫಾಲೋವ್ ಮಾಡದವರಿಗೂ ಇನ್ವೈಟ್ ಮಾಡುವ ಮುಖೇನ ಲೈವ್ ಆಡಿಯೋ ಚಾಟ್‍ಗೆ ಸೇರಿಸಿಕೊಳ್ಳಬಹುದು. ಹಲವು ವಿಚಾರಗಳ ಬಗ್ಗೆ ಚರ್ಚಿಸಬಹುದು. ನೀವು ಆಡಿಯೋ ಚಾಟ್ ಹೋಸ್ಟ್ ಮಾಡಿ, ಇತರರನ್ನು ( ನಿಮ್ಮನ್ನು ಫಾಲೋವ್ ಮಾಡುವ ಹಾಗೂ ಮಾಡದವರನ್ನು) ಅದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಬಹುದು. ನೀವು ಚಾಟ್ ಹೋಸ್ಟ್ ಮಾಡಿದ್ದರೆ, ಅದರಲ್ಲಿ ಸಕ್ರಿಯಗೊಂಡಿರುವವರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತೀರಿ. ನೀವು ಅವರನ್ನು ಚಾಟ್‍ನಿಂದ ರಿಮೂವ್ ಮಾಡಬಹುದು ಇಲ್ಲವೆ ಬ್ಲಾಕ್ ಮಾಡಬಹುದು.
ಸದ್ಯಯ್ಕೆ ಕೇವಲ ಐಪೋನ್ ಗಳಲ್ಲಿ ಮಾತ್ರ ಟ್ವಿಟರ್ ಆಡಿಯೋ ಚಾಟ್ ಹೋಸ್ಟ್ ಮಾಡುವ ಅವಕಾಶ ಇದೆ. ಈ ಸೌಲಭ್ಯನ್ನು ಆಂಡ್ರಾಯ್ಡ್ ಫೋನ್‍ಗಳಿಗೂ ಕಲ್ಪಿಸಲು ಟ್ವಿಟರ್ ಮುಂದಾಗಿದೆ. ಏಪ್ರಿಲ್ ತಿಂಗಳಿನಿಂದ ಆಂಡ್ರಾಯ್ಡ್ ಬಳಕೆದಾರರಿಗೂ ಇದು ಲಭ್ಯವಾಗಲಿದೆ.