ಮನೆಯ ಸ್ವತ್ಛತೆಯ ವಿಷಯಕ್ಕೆ ಬಂದಾಗ ಗೃಹಿಣಿಯರನ್ನು ಹೆಚ್ಚು ಬಾಧಿಸುವುದು ಟೈಲ್ಸ್. ಮನೆ ಸುಂದರವಾಗಿ ಕಾಣಲು ಯಾವ ಡಿಸೈನ್ ಟೈಲ್ಸ್ ಹಾಕಿದರೆ ಚೆನ್ನ? ಯಾವ ಬಣ್ಣ ಹಾಕಿದರೆ ನೆಂಟರಿಷ್ಟರಿಂದ ಹೊಗಳಿಸಿಕೊಳ್ಳಬಹುದು? ಎಂದೆಲ್ಲಾ ತಲೆಕೆಡಿಸಿಕೊಳ್ಳುತ್ತೇವೆ. ಆದರೆ, ಚೆಂದದ ಟೈಲ್ಸ್ ಹಾಕಿದರೆ ಸಾಕೇ? ಇಲ್ಲ, ಅವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದೇ ಹೋದರೆ, ಎಷ್ಟೇ ದುಬಾರಿ ಬೆಲೆಯ ಟೈಲ್ಸ್ ಆದರೂ ನಿರ್ವಹಣೆ ಇಲ್ಲದಿದ್ದರೆ ಬಣ್ಣಗೆಡುವುದು. ಸಾಮಾನ್ಯವಾಗಿ ಅಡುಗೆ ಮನೆ, ಸಿಂಕ್, ಸ್ಟವ್ ಇಟ್ಟಿರುವ ಜಾಗ ಮತ್ತು ಸ್ನಾನದ ಕೊಠಡಿಗಳಲ್ಲಿನ ಟೈಲ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕೊಳಕಾಗಿರುತ್ತವೆ. ಅದಕ್ಕಾಗಿಯೇ ಒಂದಷ್ಟು ಸುಲಭ ಪರಿಹಾರಗಳು ಇಲ್ಲಿವೆ…
– ಬಕೆಟ್‌ನಲ್ಲಿ ಸ್ವಲ್ಪ ವಿನೆಗರ್‌ಗೆ ಅದರ ಐದು ಪಟ್ಟು ನೀರನ್ನು ಮಿಶ್ರಣ ಮಾಡಿ ದ್ರಾವಣವನ್ನು ತಯಾರಿಸಿಕೊಳ್ಳಿ. ಟೈಲ್ಸ್‌ಗಳ ಮೇಲೆ ಈ ದ್ರಾವಣವನ್ನು ಸಿಂಪಡಿಸಿ. 5- 10 ನಿಮಿಷ ಹಾಗೇ ಬಿಡಿ. ಟೈಲ್ಸ್‌ನ ಸಂದಿಯಲ್ಲಿರುವ ಕೊಳೆಯು ದ್ರಾವಣದೊಡನೆ ವಿಲೀನಗೊಳ್ಳುತ್ತದೆ. ನಂತರ ಬ್ರಶ್‌ನಿಂದ ಉಜ್ಜಿ ನೀರಿನಿಂದ ತೊಳೆದರೆ ಟೈಲ್ಸ್ ಸ್ವತ್ಛಗೊಳ್ಳುವುದಲ್ಲದೇ, ಮಿರಮಿರ ಮಿಂಚುತ್ತಿರುತ್ತವೆ.
– ಟೈಲ್ಸ್ ಕ್ಲೀನರ್ ದ್ರಾವಣವನ್ನು ಬಿಳಿಬಣ್ಣದ ಟೈಲ್ಸ್‌ಗಳ ಮೇಲೆ ಹಾಕಿ ಅರ್ಧಗಂಟೆಯಷ್ಟು ಕಾಲ ಹಾಗೇ ಬಿಡಿ. ನಂತರ ತಿಕ್ಕಿ ತೊಳೆದರೆ ಕೊಳೆಯೆಲ್ಲವೂ ಕಿತ್ತು ಬಂದು ಶುಭ್ರವಾಗಿ ಕಾಣುತ್ತವೆ.
– ಡಿಟರ್ಜಂಟ್ ಪೌಡರ್ ಹಾಗೂ ಅಮೋನಿಯಾ ಮಿಶ್ರಣ ಟೈಲ್ಸ್ ಮೇಲಿನ ಹಳದಿ ಕೊಳೆಯನ್ನು ತೆಗೆಯಲು ಹೇಳಿ ಮಾಡಿಸಿದ್ದು. ಇದರ ವೈಶಿಷ್ಟéವೆಂದರೆ ಟೈಲ್ಸ್ ಮೇಲಿನ ಮೇಣದ ಅಂಟನ್ನೂ ಈ ದ್ರಾವಣ ಸುಲಭವಾಗಿ ತೆಗೆಯಬಲ್ಲುದು. ಜೊತೆಗೆ ಧೂಳು, ಕಸ, ಕ್ರಿಮಿಗಳು ಮುಂತಾದ ಕೊಳಕನ್ನು ಸ್ವತ್ಛಗೊಳಿಸಿಕೊಳ್ಳುವುದೂ ಕೂಡ ಸರಳವೆನಿಸಬಹುದಾಗಿದೆ.
– ಬಹಳಷ್ಟು ಜಿಡ್ಡಾದ ಕೊಳೆ ಅಂಟಿಕೊಂಡಿದ್ದಲ್ಲಿ ಬಿಸಿನೀರನ್ನು ಉಪಯೋಗಿಸಿ ಸುಲಭವಾಗಿ ಜಿಡ್ಡನ್ನು ತೆಗೆದುಹಾಕಬಹುದು. ಇದೆಲ್ಲದರ ಜೊತೆಗೆ ಟೈಲ್ಸ್ ಮೇಲೆ ಯಾವುದೋ ಪದಾರ್ಥ ಚೆಲ್ಲಿದರೂ ಕೂಡಲೇ ಹಸಿ ಬಟ್ಟೆ, ನಂತರ ಒಣಗಿದ ಬಟ್ಟೆಯಿಂದ ತಿಕ್ಕಿ ಉಜ್ಜುವ ಮೂಲಕ ಸ್ವತ್ಛಗೊಳಿಸಿಕೊಳ್ಳಬಹುದು.
– ಪ.ನಾ. ಹಳ್ಳಿ ಹರೀಶ್ ಕುಮಾರ್