Advertisement
ಸುದೃಢ ಮನೆ ಕಟ್ಟಿಮನೆ ಕಟ್ಟಲು ನಿವೇಶನದ ಆಯ್ಕೆಯೂ ಬಲು ಮುಖ್ಯ. ಸೈಟಿಗೆ ಹೊಂದುವಂತೆ ಮನೆ ಕಟ್ಟಬೇಕು. ಸೈಟಿಗೆ ಹೊಂದುವಂತೆ ಮನೆಯ ಪಾಯ ಹಾಕಬೇಕು. ಕೊನೆಗೆ ಸೈಟು ಹೇಗಿರುತ್ತದೋ ಹಾಗೇ ಮನೆಯನ್ನು ಕಟ್ಟಬೇಕು. ಅಂದರೆ ಸೈಟಿನ ವಾಸ್ತವ ರೂಪ/ ಸ್ಥಿತಿಯ ಆಧಾರದ ಮೇಲೆಯೇ ಮನೆ ಪ್ಲಾನ್ ತಯಾರಾಗಬೇಕಾಗುತ್ತದೆ. ನಿಮ್ಮ ಕಲ್ಪನೆ, ಕನಸಿನಂತೆ ಮನೆ ಕಟ್ಟಬೇಕಾದರೂ ಅದು ಸೈಟಿನ ಪ್ರಸ್ತುತ ಇರವಿಕೆಯ ಆಧಾರದ ಮೇಲೆಯೇ ಆಗಿರಬೇಕು.
ಎಲ್ಲವೂ ಒಟ್ಟಾರೆ ಮನೆ ಕಟ್ಟುವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಗಮನ ಹೆಚ್ಚಿಗೆ ಕೊಡಬೇಕಾಗುತ್ತದೆ. ಇದರಂತೆ ಗಟ್ಟಿಮುಟ್ಟಾದ ಪಾಯ ಹಾಕಲು ಗಟ್ಟಿ ಮಣ್ಣೂ ಕೂಡ ಮುಖ್ಯ. ಮನೆಯ ಮೇಲೆ ಒಟ್ಟಾರೆ ಭಾರ ಎಷ್ಟು ಬೀಳುತ್ತದೆ ಎಂದು ಲೆಕ್ಕಹಾಕಲು ಎಷ್ಟು ಮಹಡಿ ಕಟ್ಟುತ್ತೇವೆ? ಎನ್ನುವುದರ ಮೂಲಕ ನಿರ್ಧಾರಿತವಾಗುತ್ತದೆ.
ನಮ್ಮಲ್ಲಿ ಒಂದನ್ನು ಸ್ಟಾಂಡರ್x ಎಂದು ನಿರ್ಧರಿಸಿದ ರೀತಿಯಲ್ಲಿ ಎಲ್ಲಕ್ಕೂ ಒಂದೇ ಮಂತ್ರ ಎಂಬಂತಾಗಿದೆ. ಸೂರು ಎಂದರೆ ಐದು ಇಲ್ಲವೇ ಆರು ಇಂಚು ದಪ್ಪ ಎಂದಾಗಿದೆ. ಆದರೆ ಆಧಾರ ನೀಡುವ ಗೋಡೆಗಳ ಅಂತರ ಹೆಚ್ಚಾದಂತೆಲ್ಲ, ಸ್ಲಾಬ್ ದಪ್ಪವೂ ಹೆಚ್ಚಾಗಬೇಕಾಗುತ್ತದೆ. ಸುಮಾರು ಹನ್ನೆರಡು ಹದಿನಾಲ್ಕು ಅಡಿ ಅಗಲದವರೆಗೂ ಆರು ಇಂಚು ಸಾಕಾದರೂ, ಹೆಚ್ಚು ಅಗಲ ಆದಂತೆ ಇದರ ದಪ್ಪವನ್ನೂ ಹೆಚ್ಚಿಸ ಬೇಕಾಗುತ್ತದೆ. ಇಲ್ಲವಾದರೆ, ಮಧ್ಯೆ ಸೂಕ್ತ ಬೀಮುಗಳನ್ನು ನೀಡಬೇಕು.
Related Articles
Advertisement
ಗೋಡೆ ಲೆಕ್ಕಾಚಾರ ಹೀಗೆ ಮಾಡಬಹುದು ನೋಡ್ರೀ..!ನಿಮ್ಮ ಮನೆ ಭಾರ ಹೊರುವ ಮಾದರಿಯ ಸ್ಟ್ರಕ್ಚರ್ ಹೊಂದಿದ್ದರೆ, ಮೊದಲು ಯಾವ ಗೋಡೆ ಹೆಚ್ಚು ಭಾರ ಹೊರುತ್ತದೆ ಎಂದು ಲೆಕ್ಕಚಾರ ಮಾಡಬೇಕು. ಏಕೆಂದರೆ ಆ ಗೋಡೆಗಳನ್ನು ಸುದೃಢ ಮಾಡುವುದು ಅಗತ್ಯ. ನೀವು ತಿಳಿದು ಕೊಳ್ಳಬೇಕಾದ ವಿಚಾರ ಏನೆಂದರೆ ಸಾಮಾನ್ಯವಾಗಿ ಮನೆಯ ಮಧ್ಯಭಾಗದಲ್ಲಿ ಬರುವ ಗೋಡೆ ಎರಡೂ ಕಡೆಯಿಂದ ಭಾರ ಹೊರುವ ಕಾರಣ, ಮಧ್ಯದ ಗೋಡೆ ಹೆಚ್ಚು ದಪ್ಪ ಇರಬೇಕು. ಇಲ್ಲವೆ ಈ ಗೋಡೆಯನ್ನು ಹೆಚ್ಚು ದುರ್ಬಲ ಗೊಳಿಸಬಾರದು. ಗೋಡೆಗಳು ದುರ್ಬಲವಾಗಲು ಮುಖ್ಯ ಕಾರಣ – ಅತಿ ಹೆಚ್ಚು ಬಾಗಿಲು, ಶೋಕೆಸ್, ಗೂಡು ಇತ್ಯಾದಿ ಬಂದರೆ, ಅಷ್ಟು ಭಾಗದಲ್ಲಿ ಗೋಡೆಗಳು ಇರುವುದಿಲ್ಲ. ಆದಕಾರಣ, ಹೆಚ್ಚು ಭಾರ ಹೊರಲು ಆಗುವುದಿಲ್ಲ. ಶೋಕೆಸ್, ಗೂಡುಗಳು ನಿಮಗೆ ಅನಿವಾರ್ಯ ಇದೆಯೇ, ಇದ್ದರೆ ಎಲ್ಲಿ ನಿರ್ಮಿಸಿದರೆ ಹೆಚ್ಚು ಉಪಯೋಗ ಎನ್ನುವುದನ್ನು ಮೊದಲೇ ತೀರ್ಮಾನಿಸಬೇಕು. ಹತ್ತು ಅಡಿ ಉದ್ದದ ಗೋಡೆಯಲ್ಲಿ ಮೂರೂವರೆ ಅಡಿಯ ಎರಡು ಬಾಗಿಲು ಬಂದರೆ, ಕಡೆಗೆ ಭಾರ ಹೊರಲು ಉಳಿಯುವುದು ಕೇವಲ ಎರಡು ಅಡಿಗಳಷ್ಟು ಗೋಡೆ ಮಾತ್ರ. ಏಕೆಂದರೆ, ಬಾಗಿಲಿನ ಚೌಕಟ್ಟು ಕೂರಿಸಲು ಅಂದರೆ ಅದರ ಮೇಲು ಭಾಗದ “ಕೊಂಬು’ ಹಾಗೂ ಪಕ್ಕದಲ್ಲಿ ಸಿಗಿಸುವ ಉಕ್ಕಿನ ಹೋಲ್ಡ್ ಫಾಸ್ಟ್- ಬಿಗಿ ಹಿಡಿಗಳಿಗಾಗಿ ಸರಾಸರಿ ಆರು ಇಂಚಿನಷ್ಟು ಎರಡೂ ಕಡೆ ಗೋಡೆಯನ್ನು ಕೊರೆಯಲಾಗುತ್ತದೆ. ಈ ಭಾಗ ಭಾರವನ್ನು ಹೊರುವುದಿಲ್ಲ. ಹಾಗಾಗಿ ನೀವು ನಿಮ್ಮ ಮನೆಯ ಮುಖ್ಯ ಗೋಡೆಗಳನ್ನು ಕಿಟಕಿ ಬಾಗಿಲು ಮತ್ತೂಂದು ಕೂರಿಸಲು ಕೊರೆದು ಹಾಕಿದ್ದೀರಾ? ಎಂಬುದನ್ನು ಪರಿಶೀಲಿಸಿ. ಮನೆಯ ವಿನ್ಯಾಸ ಮಾಡುವಾಗಲೇ ಎಷ್ಟು ಗೋಡೆಗಳಲ್ಲಿ, ಎಷ್ಟು ಪಾಲು ತೆರೆದ ಸ್ಥಳಗಳು ಇರುತ್ತವೆ ಹಾಗೂ ಇದರಿಂದ ಉಂಟಾಗುವ ದುರ್ಭಲತೆಯನ್ನು ಹೇಗೆ ಹೋಗಲಾಡಿಸಬಹುದು ಎಂಬುದನ್ನು ಮೊದಲೇ ಪರಿಶೀಲಿಸುವುದು ಅತ್ಯಗತ್ಯ. ಕಿಟಕಿ ಬಾಗಿಲುಗಳು ಮುಖ್ಯವಾದರೂ, ಅವುಗಳಿಂದಾಗಿ ಕಳೆದುಕೊಂಡ ಸ್ಥಳವನ್ನು ಇತರೆ ವಿಧಾನದಲ್ಲಿ ತುಂಬಿದರೆ ಮನೆ ನಿಜಕ್ಕೂ ಹೆಚ್ಚು ಸುದೃಢವಾಗುತ್ತದೆ. ಕೆಲವೊಮ್ಮೆ ಗೋಡೆಗಳು ಕಡಿಮೆ ಇರುವ ಜಾಗಗಳಲ್ಲಿ, ಪ್ಲಿಂತ್ ಮಟ್ಟದಿಂದ ಸಣ್ಣದೊಂದು ಕಾಲಂ ಶುರುಮಾಡಿ ಸೂರಿನವರೆಗೂ ತೆಗೆದುಕೊಂಡು ಹೋಗುವ ಪರಿಪಾಟವಿದೆ. ಹೀಗೆ ಮಾಡಲು ಪ್ಲಿಂತ್‌ಗೆ ಉಕ್ಕಿನ ಸರಳುಗಳನ್ನು ಅಳವಡಿಸಿದರೆ ಸದೃಢವಾಗಿರುತ್ತದೆ. ರೇನ್ ಫೋರ್ಡ್ ಕಾಂಕ್ರಿಟ್ ಪ್ಲಿಂತ್‌ಗಳಿಂದ ಅಗತ್ಯಕ್ಕೆ ತಕ್ಕಂತೆ ನಾಲ್ಕಾರು ಕಡೆಯೂ ಸಣ್ಣ ಸಣ್ಣ ಕಾಲಂಗಳನ್ನು ಶುರು ಮಾಡಬಹುದು. ಈ ಕಾಲಂಗಳು ಸಾಮಾನ್ಯವಾಗಿ ಒಂಭತ್ತು ಇಂಚಿಗೆ ಒಂಬತ್ತು ಇದ್ದು, ನೆಲಪಾಯದ ಮಟ್ಟದಿಂದ ಬಾರದೆ, ಭೂಮಿಯ ಮಟ್ಟದಿಂದ ಸುಮಾರು ಒಂದು ಅಡಿ ಎತ್ತರದಲ್ಲಿ ಅಂದರೆ ಪ್ಲಿಂತ್ ಶುರುವಾಗುವ ಮಟ್ಟದಿಂದ ಮಾತ್ರ ಹಾಕಲಾಗುತ್ತದೆ. – ಆರ್ಕಿಟೆಕ್ಟ್ ಕೆ. ಜಯರಾಮ್