Advertisement

ಅಭಿಮಾನಿಯ ಇಂಗ್ಲೆಂಡ್‌ ಪ್ರವಾಸ: ವೀಸಾಗೆ ತೆಂಡುಲ್ಕರ್‌ ಶಿಫಾರಸು ಪತ್ರ!

11:02 AM May 27, 2017 | Team Udayavani |

ಮುಂಬಯಿ: ಸುಧೀರ್‌ ಕುಮಾರ್‌ ಚೌಧರಿ!ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಹಾಗೂ ಟೀಮ್‌ ಇಂಡಿಯಾದ ನಂಬರ್‌ ವನ್‌ ಅಭಿಮಾನಿ. ಭಾರತ ಕ್ರಿಕೆಟ್‌ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಅಲ್ಲಿ ಮೈಗೆ ಬಣ್ಣ ಬಳಿದುಕೊಂಡು, ತ್ರಿವರ್ಣ ಧ್ವಜ ಹಾರಾಡಿಸುತ್ತ ತಂಡ ವನ್ನು ಹುರಿದುಂಬಿಸುವುದೇ ಈತನ ಕೆಲಸ. ಸ್ವತಃ ಸಚಿನ್‌ ಹೇಳಿದಂತೆ ಈತ ಟೀಮ್‌ ಇಂಡಿಯಾದ ಅನಧಿಕೃತ ಲಾಂಛನ!

Advertisement

ಸಚಿನ್‌ ತೆಂಡುಲ್ಕರ್‌ ಈಗ ಭಾರತ ತಂಡದಲ್ಲಿ ಕಾಣಿಸದೇ ಹೋದರೂ ಅವರ ಅಭಿಮಾನಿ ಸುಧೀರ್‌ ಮಾತ್ರ ತನ್ನ ಕಾಯಕವನ್ನು ನಿಲ್ಲಿಸಿಲ್ಲ. ಈಗ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಯಲ್ಲಿ ಭಾರತ ತಂಡ ವನ್ನು ಪ್ರೋತ್ಸಾಹಿಸಲು ಇಂಗ್ಲೆಂಡಿಗೆ ಹಾರಿದ್ದಾರೆ. ಟೀಮ್‌ ಇಂಡಿಯಾದೊಂದಿಗೆ ನಿಕಟ ಸಂಪರ್ಕ ಹೊಂದಿದರೂ ಯಾರಿಂದಲೂ ಆರ್ಥಿಕ ನೆರವನ್ನು ಪಡೆಯದೇ, ಬಹುತೇಕ ಸಂದರ್ಭ ಸ್ವಂತ ಖರ್ಚಿನಿಂದಲೇ ಪ್ರಯಾಣ ಮಾಡುವಂಥ ಸ್ವಾಭಿಮಾನಿ ಈತ!

ಪ್ರಸಕ್ತ ಇಂಗ್ಲೆಂಡ್‌ ಪ್ರಯಾಣಕ್ಕಾಗಿ ಸುಧೀರ್‌ ಫಾಸ್ಟ್‌-ಟ್ರ್ಯಾಕ್‌ ವೀಸಾವೊಂದಕ್ಕೆ ಅರ್ಜಿ ಹಾಕಿದ್ದರು. ಸಾಮಾನ್ಯ ವೀಸಾಕ್ಕೆ 7,500 ರೂ.ಗಳಾದರೆ, ಫಾಸ್ಟ್‌-ಟ್ರ್ಯಾಕ್‌ ವೀಸಾಕ್ಕೆ 26 ಸಾವಿರ ರೂ. ಆಗುತ್ತದೆ. ಈ ವೀಸಾ ಮೂರೇ ದಿನಗಳಲ್ಲಿ ಸುಧೀರ್‌ ಕೈಸೇರಿತ್ತು. ಈ ಕುರಿತಂತೆ ಸಚಿನ್‌ ತೆಂಡುಲ್ಕರ್‌ ವೀಸಾ ಕಚೇರಿಯ ಅಧಿಕಾರಿಗಳಿಗೆ ಶಿಫಾರಸು ಪತ್ರವನ್ನು ಬರೆದು ಅಭಿಮಾನಿಗೆ ನೆರವಾಗಿದ್ದರೆಂಬುದು ವಿಶೇಷ!

ಸಚಿನ್‌ ಪತ್ರದ ಸಾಲುಗಳು…
“ಸುಧೀರ್‌ ಕುಮಾರ್‌ ಚೌಧರಿ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟನ್ನು ಬೆಂಬಲಿಸುತ್ತಲೇ ಇರುವ ಓರ್ವ ಅಪ್ಪಟ ಅಭಿಮಾನಿ. ಟೀಮ್‌ ಇಂಡಿಯಾದ ಅನಧಿಕೃತ ಲಾಂಛನವೇ ಆಗಿದ್ದಾರೆ. ಅವರ ಕ್ರಿಕೆಟ್‌ ಪ್ರೀತಿ ಅಪಾರ. ಭಾರತ ತಂಡ ಎಲ್ಲೇ ತೆರಳಿದದರೂ ಸ್ವಂತ ಖರ್ಚಿನಿಂದಲೇ ಇವರೂ ಪ್ರಯಾಣ ಮಾಡುತ್ತಾರೆ. ಕ್ರಿಕೆಟಿಗರಿಂದ ಚಿಕ್ಕಾಸನ್ನೂ ಪಡೆದುಕೊಳ್ಳುವುದಿಲ್ಲ. ಅಂಥ ಸ್ವಾಭಿಮಾನಿ. ಅವರಿಗೆ ನಿಮ್ಮ ಎಂದಿನ ಸಹಕಾರವನ್ನು ಮುಂದುವರಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ…’ ಎಂದು ತೆಂಡುಲ್ಕರ್‌ ವೀಸಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದು ಫ‌ಲ ಕೊಟ್ಟಿದೆ.

ಸುಧೀರ್‌ ಕುಮಾರ್‌ ಚೌಧರಿ ಅವರ ಈ ಬಾರಿಯ ಇಂಗ್ಲೆಂಡ್‌ ಪ್ರವಾಸ ವೆಚ್ಚವನ್ನು “ಫಿವರ್‌ 104 ಎಫ್ಎಂ ರೇಡಿಯೋ’ ಭರಿಸುತ್ತಿದೆ.

Advertisement

ಸಿನೆಮಾ ವೀಕ್ಷಣೆಗೂ ಆಹ್ವಾನ!
ತೆಂಡುಲ್ಕರ್‌ ತಮ್ಮ ಚಲನಚಿತ್ರ “ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’ ವೀಕ್ಷಣೆಗಾಗಿ ಸುಧೀರ್‌ ಅವರನ್ನೂ ವಸೋìವಾದ ಪಿವಿಆರ್‌ಗೆ ಆಹ್ವಾನಿಸಿದ್ದರು. ಥಿಯೇ ಟರ್‌ನಿಂದ ಹೊರಬರುವಾಗ ಭಾವಪರವಶ ರಾಗಿದ್ದ ಸುಧೀರ್‌, ಇದೊಂದು ಅದ್ಭುತ ಸಿನೆಮಾ ಎಂದು ಉದ್ಗರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next