ಲಂಡನ್ : ಆಕ್ಸ್ ಫರ್ಡ ಯೂನಿವರ್ಸಿಟಿಯ ಪ್ರೆಸ್, ಆಕ್ಸ್ ಫರ್ಡ್ ಓಪನ್ ಇಮ್ಯುನೊಲಾಜಿ ಎಂಬ ಹೊಸ ಸಂಶೋಧನಾ ಪ್ರಬಂಧವನ್ನು ಹೊರತಂದಿದೆ.
ಕೋವಿಡ್ 19 ನನ್ನು ಅಲ್ಪಾವಧಿಯ ಕಾಯಿಲೆ ಅಥವಾ ಸೋಂಕು ಎಂದು ನಂಬಲಾಗಿತ್ತಾದರೂ ಕೆಲವು ರೋಗಿಗಳು 12 ವಾರಗಳಿಗಿಂತ ಹೆಚ್ಚು ಕಾಲ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದಾರೆ ಎಂದು ಈ ಸಂಶೋಧನೆ ತಿಳಿಸಿದೆ.
ಓದಿ : ಪಾರದರ್ಶಕ ನ್ಯಾಯದಡಿ ಶೀಘ್ರ ವಿಚಾರಣೆ ಪೂರ್ಣ
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 80% ಗಿಂತ ಹೆಚ್ಚು ರೋಗಿಗಳಲ್ಲಿ ಕನಿಷ್ಠ ರೋಗಲಕ್ಷಣಗಳು ಆರಂಭ ಹಂತದಲ್ಲಿ ಪತ್ತೆಯಾಗಿದ್ದವು. ಸೋಂಕು ಹರದಿಡ ಒಂದು ತಿಂಗಳ ನಂತರ ಕೆಮ್ಮು, ಸಣ್ಣ ಜ್ವರ, ಆಯಾಸ, ಎದೆ ನೋವು, ಉಸಿರಾಟದ ತೊಂದರೆ, ಸ್ನಾಯು ದೌರ್ಬಲ್ಯ, ಖಿನ್ನತೆ ಸೆರಿ ಇತರ ಮಾನಸಿಕ ಸಮಸ್ಯೆಗಳನ್ನೊಳಗೊಂಡು ರೋಗಲಕ್ಷಣಗಳು ಕಾಣಿಸಿಕೊಂಡಿವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೈಹಿಕ ವ್ಯಾಯಾಮ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ಸೋಂಕಿಗೆ ಪ್ರತಿರೋಧವನ್ನು ಸೃಷ್ಟಿಸುವ ರೋಗ ನಿರೋಧಕ ಶಕ್ತಿ ದೇಹದಲ್ಲಿ ಬೆಳವಣಿಗೆಯಾಗುತ್ತದೆ ಎಂದು ಪ್ರಬಂಧದ ಮುಖ್ಯ ಲೇಖಕ ವಲೇರಿಯಾ ಮೊಂಡೆಲ್ಲಿ ತಿಳಿಸಿದ್ದಾರೆ.
ಓದಿ : ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ; ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭ: ಡಿಸಿಎಂ