Advertisement

ಯಾಸಿನ್‌ನನ್ನು ಜೈಲಿಗೆ ಕಳುಹಿಸಿದ್ದು ಜ್ಯಾಕ್‌, ಜಾನ್‌, ಆಲ್ಫಾ!

11:04 PM May 26, 2022 | Team Udayavani |

ನವದೆಹಲಿ/ಶ್ರೀನಗರ: “ಜ್ಯಾಕ್‌, ಜಾನ್‌ ಮತ್ತು ಆಲ್ಫಾ…’ ಇವರ್ಯಾರು ಗೊತ್ತಾ?

Advertisement

ಬುಧವಾರವಷ್ಟೇ ಜೀವಾವಧಿಗೆ ಶಿಕ್ಷೆಗೆ ಗುರಿಯಾದ ಪ್ರತ್ಯೇಕತಾವಾದಿ ನಾಯಕ, ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್‌ ಮಲಿಕ್‌ನನ್ನು ಬಂಧಿಸಲು ನೆರವಾದವರು! ಇವರು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ “ಸಂರಕ್ಷಿತ ಸಾಕ್ಷಿಗಳು’.

ಉಗ್ರರಿಗೆ ಹಣ ಕಾಸು ನೆರವು ಪ್ರಕರಣ ದಲ್ಲಿ ಯಾಸಿನ್‌ ಬಂಧನಕ್ಕೆ ಸಹಾಯ ಮಾಡಿದ ಅತ್ಯಂತ ಮಹತ್ವದ ಮೂವರು ಸಾಕ್ಷಿಗಳಿಗೆ ಎನ್‌ಐಎ ಈ “ಕೋಡ್‌ನೇಮ್‌’ ಇಟ್ಟಿತ್ತು. ಸಾಕ್ಷಿಗಳ ಸುರಕ್ಷತೆಯ ನಿಟ್ಟಿನಲ್ಲಿ ಅವರ ನೈಜ ಹೆಸರು ಬಹಿರಂಗಪಡಿಸದ ಎನ್‌ಐಎ, ಅವರನ್ನು “ಜ್ಯಾಕ್‌, ಜಾನ್‌ ಆ್ಯಂಡ್‌ ಆಲ್ಫಾ’ ಎಂದು ಕರೆದಿತ್ತು. ಈ ಪ್ರಕರಣದಲ್ಲಿ 48ಕ್ಕೂ ಹೆಚ್ಚು ಸಂರಕ್ಷಿತ ಸಾಕ್ಷಿಗಳಿದ್ದರೂ, ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದ ಮೂವರಿಗೆ ಮಾತ್ರ ಕೋಡ್‌ನೇಮ್‌ ನೀಡಲಾಗಿತ್ತು. ಕೋರ್ಟ್‌ ನೀಡಿರುವ ತೀರ್ಪು ಖಂಡಿತವಾಗಿಯೂ ತನಿಖಾ ತಂಡದ ಪರಿಶ್ರಮಕ್ಕೆ ಸಿಕ್ಕ ಜಯ. ಇದನ್ನು ನೋಡಿಯಾದರೂ, ಇನ್ನು ಮುಂದೆ ಯಾರೂ ದೇಶದ ವಿರುದ್ಧ ಯುದ್ಧ ಸಾರುವ ಬಗ್ಗೆ ಕಲ್ಪಿಸಿಕೊಳ್ಳಲೂ ಹೋಗಬಾ ರದು ಎನ್ನುತ್ತಾರೆ ಅಧಿಕಾರಿಗಳು.

ಹತ್ತು ಮಂದಿ ಬಂಧನ: ಮಲಿಕ್‌ಗೆ ಶಿಕ್ಷೆ ವಿಧಿಸಿದ್ದನ್ನು ಖಂಡಿಸಿ ಗುರುವಾರ ಶ್ರೀನಗ ರ ದಲ್ಲಿ ಕಲ್ಲು ತೂರಾಟ ನಡೆಸಿ, ದೇಶ ವಿರೋಧಿ ಘೋಷಣೆ ಕೂಗಿದ್ದ ಹತ್ತು ಮಂದಿ ಯನ್ನು ಬಂಧಿಸಲಾಗಿದೆ. ಅವರ ವಿರುದ್ದ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ.

ಯಾಸಿನ್‌ಗೆ ಪ್ರತ್ಯೇಕ ಸೆಲ್‌; ಕೆಲಸ ಇರಲ್ಲ :

Advertisement

ಯಾಸಿನ್‌ ಮಲಿಕ್‌ನನ್ನು ಬಿಗಿಭದ್ರತೆ ಯೊಂದಿಗೆ ತಿಹಾರ್‌ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ಕೈದಿಗಳಿಗೆ ಉದ್ಯೋಗ ನೀಡುವ ಪದ್ಧತಿ ಇದೆಯಾದರೂ ಭದ್ರತಾ ಕಾರಣಗಳಿಂದ ಮಲಿಕ್‌ಗೆ ಯಾವುದೇ ಕೆಲಸ ನೀಡದೇ ಇರಲು ಅಧಿಕಾರಿ ಗಳು ನಿರ್ಧರಿಸಿದ್ದಾರೆ. ಮಲಿಕ್‌ಗೆ ನೀಡಲಾಗಿರುವ ಭದ್ರತೆಯನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಮೂವರು ಲಷ್ಕರ್‌ ಉಗ್ರರ ಹತ್ಯೆ :

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ನುಸುಳುವಿಕೆ ಯತ್ನವನ್ನು ಭದ್ರತಾಪಡೆ ವಿಫ‌ಲಗೊಳಿಸಿದೆ. ಜತೆಗೆ, ಮೂವರು ಲಷ್ಕರ್‌ ಉಗ್ರರನ್ನು ಹತ್ಯೆಗೈದಿದೆ. ಈ ನಡುವೆ, ಜಮ್ಮು ಹೊರವಲಯದಲ್ಲಿ ಏಪ್ರಿಲ್‌ನಲ್ಲಿ ನಡೆದ ಸಂಜ್ವಾನ್‌ ಉಗ್ರರ ದಾಳಿ ಪ್ರಕರಣ ಸಂಬಂಧ ಎನ್‌ಐಎ ಗುರುವಾರ ಜೆಇಎಂ ಉಗ್ರನೊಬ್ಬನನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next