Advertisement
ಸಾಮಾಜಿಕ ಕಾರ್ಯಕರ್ತ ಮಾರಲಿಂಗ ಗೌಡ ಮಾಲಿ ಪಾಟೀಲ್ ಅವರು ಕೇಳಿದ ಮಾಹಿತಿಗೆ ಸಿಎಂ ಸಿದ್ದರಾಮಯ್ಯ ಕಚೇರಿಯು ನೀಡಿದ ಮಾಹಿತಿಯಲ್ಲಿ ಈ ಖರ್ಚು-ವೆಚ್ಚದ ವಿವರ ಬಯಲಾಗಿದೆ ಎಂದು ತಿಳಿಸಿದೆ.
Related Articles
Advertisement
ಖರ್ಚಿನ ಬಗ್ಗೆ ಸಿಎಂ ಕಚೇರಿ ಸ್ಪಷ್ಟನೆ:
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಣೆಗೆ ವ್ಯಯಿಸುತ್ತಿರುವ ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ (CMO) ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಹಿಂದಿನ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಣೆಗಾಗಿ ಪ್ರತಿ ತಿಂಗಳು 2 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಅದಕ್ಕೆ ಹೋಲಿಸಿದಲ್ಲಿ ನಮ್ಮದು ಕಡಿಮೆ ಖರ್ಚು ಎಂದು ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದೆ.
ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ And ಎಡ್ವರ್ಟೈಸಿಂಗ್ ಲಿಮಿಟೆಡ್ (MCA) ಸರ್ಕಾರಿ ಸ್ವಾಮಿತ್ವದ ಸಂಸ್ಥೆ, ಸಿದ್ದರಾಮಯ್ಯ ಅವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಹೊಣೆ ಹೊತ್ತಿದ್ದು, ಅಂದಾಜು 35 ಜನರ ತಂಡ ಇದರಲ್ಲಿದೆ ಎಂದು ವರದಿ ವಿವರಿಸಿದೆ.