Advertisement
ಇನ್ನು ವ್ಯಾಪಾರ- ವ್ಯವಹಾರದ ಹೊರತಾಗಿ ಕುಟುಂಬದೊಳಗೆ ಯಾರಿಗಾದರೂ ಅನಾರೋಗ್ಯವಾದಾಗ ದಿಕ್ಕು ತೋಚದಂತೆ ಮಾಡಿಬಿಡುತ್ತವೆ. ಸ್ಥಿರವಾದ ಆದಾಯ ಇಲ್ಲದ ಪರಿಣಾಮ ವೆಚ್ಚಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಆದರೆ ಈ ಸಮಸ್ಯೆಗಳಿಗೆ ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್ )ಪರಿಹಾರವಾಗಲಿದೆ. ಹಾಗಾದರೆ ಏನಿದು ಟರ್ಮ್ ಇನ್ಶೂರೆನ್ಸ್ ? ಪ್ರಯೋಜನಗಳೇನು ಇಲ್ಲಿದೆ ಮಾಹಿತಿ.
ಹಣಕಾಸಿನ ಸಂಕಷ್ಟದಲ್ಲಿ ಇರುವವರಿಗೆ ಕಾಯ್ದೆ ಅನ್ವಯ ಟರ್ಮ್ ಇನ್ಶೂರೆನ್ಸ್ ಲಭ್ಯವಿದ್ದು, ಆನ್ ಲೈನ್ ಮೂಲಕ ಖರೀದಿ ಮಾಡಬಹುದು.ಬಹಳ ಕಡಿಮೆ ಬೆಲೆಗೆ ಈ ವಿಮಾ ಯೋಜನೆ ದೊರೆಯಲಿದ್ದು, ಎಲ್ಲ ವರ್ಗದ ಜನರೂ ಈ ಇನ್ಶೂರೆನ್ಸ್‌ನ್ನು ಮಾಡಿಸಿಕೊಳ್ಳಬಹುದು.
Related Articles
ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಇದು ಹೆಚ್ಚು ಸೂಕ್ತ. ಉದ್ಯೋಗಸ್ಥರಿಗಾದರೆ ಬಹುತೇಕ ಮಟ್ಟಿಗೆ ಉದ್ಯೋಗದಾತರೇ ಲೈಫ್ ಇನ್ಶೂರೆನ್ಸ್‌ಮಾಡಿಸಿರುತ್ತಾರೆ. ಆದರೆ ಸ್ವಂತ ವ್ಯವಹಾರ ಮಾಡುವವರಿಗೆ ಈ ಸವಲತ್ತು ಇರುವುದಿಲ್ಲ. ಮನೆಗೆ ಆಧಾರಸ್ತಂಭವಾದ ಯಜಮಾನ ಅಥವಾ ಯಾಜಮಾನಿ ತೀರಿಕೊಂಡರೆ ಆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳು ತ್ತದೆ. ಅಂಥ ಸ್ಥಿತಿಯಲ್ಲಿ ಟರ್ಮ್ ಇನ್ಶೂರೆನ್ಸ್ ನೆರವು ನೀಡುತ್ತದೆ. ಟರ್ಮ್ ಇನ್ಶೂರೆನ್ಸ್ ಹಣದಿಂದ ಮನೆ ಖರ್ಚು, ಮನೆ ನಿರ್ಮಾಣ ಅಥವಾ ಉನ್ನತ ಶಿಕ್ಷಣದ ಶುಲ್ಕ ಪಾವತಿ ಅಥವಾ ವ್ಯಾಪಾರಕ್ಕೆ ಪಡೆದಿದ್ದ ಸಾಲ ಮರುಪಾವತಿ ಮಾಡ ಬಹುದು.
Advertisement
ಪ್ರೀಮಿಯಂ ಮನ್ನಾ ಸೌಲಭ್ಯಒಂದು ವೇಳೆ ಪಾಲಿಸಿದಾರರಿಗೆ ಗಂಭೀರ ಸ್ವರೂಪದ ಕಾಯಿಲೆ ಬಂದರೆ ಟರ್ಮ್ ಇನ್ಶೂರೆನ್ಸ್‌ನ ಪ್ರೀಮಿಯಂ ಪಾವತಿಸುವ ಅಗತ್ಯ ಇಲ್ಲ. ಅದೇ ರೀತಿ ಶಾಶ್ವತ ಅಂಗವೈಫಲ್ಯಕ್ಕೆ ತುತ್ತಾದರೂ ಪಾಲಿಸಿದಾರರು ಪ್ರೀಮಿಯಂ ಪಾವತಿಸ ಬೇಕಿಲ್ಲ. ಇಂತಹ ಸನ್ನಿವೇಶದಲ್ಲಿ ಪಾಲಿಸಿದಾರರು ಭವಿಷ್ಯದಲ್ಲಿ ಕಟ್ಟಬೇಕಾದ ಎಲ್ಲ ಪ್ರೀಮಿಯಂಗಳು ಮನ್ನಾ ಆಗುತ್ತದೆ. ಆದರೆ ಇನ್ಶೂರೆನ್ಸ್‌ಯೋಜನೆ ಹಾಗೇ ಮುಂದುವರಿಯುತ್ತದೆ. ಇನ್ನು ಗಂಭೀರ ಕಾಯಿಲೆಯಿಂದ ಸಾವನ್ನಪ್ಪಿದಲ್ಲಿ ಕುಟುಂಬದವರಿಗೆ ಇನ್ಶೂರೆನ್ಸ್ ಹಣ ಬರುತ್ತದೆ. ಮಾಸಿಕ, ತ್ತೈ ಮಾಸಿಕವಾಗಿ ಪ್ರೀಮಿಯಂ ಪಾವತಿಸಬಹುದು
ಮಾಸಿಕವಾಗಿ, ತ್ತೈಮಾಸಿಕವಾಗಿ ಇನ್ಶೂರೆನ್ಸ್ ನ ಪ್ರೀಮಿಯಂ ಪಾವತಿಸಬಹುದಾಗಿದ್ದು. ಯೋಜನೆಯ ಪ್ರಾರಂಭದಲ್ಲಿಯೇ ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ. ಟರ್ಮ್ ಇನ್ಶೂರೆನ್ಸ್ ಕಷ್ಟದ ಸಮಯದಲ್ಲಿ ಮಾತ್ರವಲ್ಲದೇ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿಯೂ ಅನುಕೂಲವಾಗಲಿದೆ. ಆದಾಯ ತೆರಿಗೆ ಕಾಯ್ದೆ 80ಇಅಡಿಯಲ್ಲಿ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಕ್ಲೇಮ್ ಮಾಡಬಹುದಾಗಿದ್ದು, 1.5 ಲಕ್ಷ ರೂ.ಗಳವರೆಗೂ ಕ್ಲೇಮ್ ಮಾಡಬಹುದು. ಶೇ.30ರಷ್ಟು ಟ್ಯಾಕ್ಸ್ ಸ್ಲಾ$Âಬ್ ಬರುವವರಿಗೆ ಒಂದು ವರ್ಷದಲ್ಲಿ 45,000 ರೂ.ಗಳಷ್ಟು ಆರ್ಥಿಕ ಅನುಕೂಲತೆ ದೊರೆಯಲಿದೆ.