Advertisement
ಈ ಗುಡ್ಡಗಾಡು ದೇಶದಲ್ಲಿ ಕೋವಿಡ್ ಪರೀಕ್ಷೆಯೇ ನಡೆಯುತ್ತಿಲ್ಲ. ಹೀಗಾಗಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿಲ್ಲ. ವೈದ್ಯಕೀಯ ಸೌಲಭ್ಯದಲ್ಲಿ ಈ ದೇಶ ಶತಮಾನದಷ್ಟು ಹಿಂದುಳಿದಿದ್ದು, ಈ ಪರಿಸ್ಥಿತಿಯಲ್ಲಿ ಕೋವಿಡ್‌ನಂಥ ವೈರಾಣುವಿನ ವಿರುದ್ಧ ಹೋರಾಡುವುದು ಕೈಲಾಗದ ಮಾತು ಎಂದು ಇಲ್ಲಿನ ಸರಕಾರವೇ ಒಪ್ಪಿಕೊಂಡಿದೆ.
Related Articles
Advertisement
ಡಾ|ಯೂಸುಫ್ ಸಂಪರ್ಕದಲ್ಲಿದ್ದವರ ಹಾಗೂ ಕುಟುಂಬದ ಇತರ ಸದಸ್ಯರ ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದರೂ ಅದರ ವರದಿಯಿನ್ನೂ ಕೈಸೇರಿಲ್ಲ. ಟೆಸ್ಟಿಂಗ್ ಕಿಟ್ ಇಲ್ಲದೆಯೇ ಅಪಾ^ನಿಸ್ಥಾನದಲ್ಲಿ ಜನರು ಸಾಯುತ್ತಿದ್ದಾರೆ. ಕನಿಷ್ಠ ಯಾವ ಕಾರಣದಿಂದ ಸತ್ತಿದ್ದಾರೆ ಎಂದು ತಿಳಿಯಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ ದೇಶದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ.
ಬಡರಾಷ್ಟ್ರಗಳಿಗೆ ಟೆಸ್ಟಿಂಗ್ ಕಿಟ್‌ಗಳು ಸುಲಭವಾಗಿ ಸಿಗುತ್ತಿಲ್ಲ. ನಾವು ಹಣ ಕೊಟ್ಟರೂ ಕಿಟ್‌ಗಳ ಪೂರೈಕೆಯಾಗುತ್ತಿಲ್ಲ. ಎಲ್ಲ ಕಂಪೆನಿಗಳು ಬಲಾಡ್ಯ ದೇಶಗಳಿಗೆ ಆದ್ಯತೆ ನೀಡುತ್ತವೆ. ನಮ್ಮ ಆರೋಗ್ಯ ವಲಯ ಕೋವಿಡ್‌ನ ವಿರುದ್ಧ ಹೋರಾಡುವಷ್ಟು ಸಶಕ್ತವಾಗಿಲ್ಲ ಎನ್ನುತ್ತಾರೆ ಸಲೇಹ.
ಟೆಸ್ಟಿಂಗ್ ರದ್ದುಎರಡು ವಾರದ ಹಿಂದೆ ಅಪಾ^ನಿಸ್ಥಾನದ ಎಲ್ಲ ಪ್ರಯೋಗಾಲಯಗಳು ಮುಚ್ಚಿದ್ದವು. ಇದಕ್ಕೆ ಕಾರಣ ಕೋವಿಡ್ ವೈರಸ್ ಪರೀಕ್ಷೆ ಮಾಡಲು ಅಗತ್ಯವಿರುವ ರೀಏಜೆಂಟ್ ಮುಗಿದದ್ದು. ಕೊನೆಗೆ ಒಂದೆರಡು ದಿನ ಒದ್ದಾಡಿದ ಬಳಿಕ ಒಂದಷ್ಟು ರಿಏಜೆಂಟ್‌ಗಳನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ಅನಂತರ ಪರೀಕ್ಷೆಗಳು ಪ್ರಾರಂಭವಾಯಿತು ಎಂದು ದಯನೀಯ ಪರಿಸ್ಥಿತಿಯನ್ನು ವಿವರಿಸುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಈ ಭಾಗದ ಮುಖ್ಯಸ್ಥ ಡಾ| ರಿಕ್ ಪೀಪೆರಾRನ್. ಅಂತರ ಪಾಲನೆಯಿಲ್ಲ
ಪಾಕಿಸ್ಥಾನದಂತೆ ಅಫ್ಘಾನಿಸ್ಥಾನದಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಲಾಕ್‌ಡೌನ್ ಘೋಷಿಸಿದರೆ ಕೋವಿಡ್‌ಗಿಂತ ಹೆಚ್ಚು ಜನರನ್ನು ಹಸಿವು ಬಲಿತೆಗೆದುಕೊಳ್ಳುವ ಭಯ. ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‌ಗಳೆಲ್ಲ ಇಲ್ಲಿನ ಜನರಿಗೆ ಭಾರೀ ದುಬಾರಿ ವಸ್ತುಗಳು. ಹಬ್ಬದ ದಿನಗಳೂ ಆಗಿರುವುದರಿಂದ ಸಾಮೂಹಿಕ ಪ್ರಾರ್ಥನೆ, ಗುಂಪುಗೂಡಿ ಖರೀದಿಯೆಲ್ಲ ಎಗ್ಗಿಲ್ಲದೆ ನಡೆಯುತ್ತಿದೆ. ಹೆಸರಿಗೆ ಲಾಕ್‌ಡೌನ್ ಘೋಷಣೆಯಾಗಿದ್ದರೂ ಅದರ ಲಕ್ಷಣ ಎಲ್ಲೂ ಕಂಡು ಬರುತ್ತಿಲ್ಲ. ನಮ್ಮ ಸಂಸ್ಕೃತಿಗೆ ಇದೆಲ್ಲ ಒಪ್ಪುವುದಿಲ್ಲ ಎಂದು ಇಲ್ಲಿನ ನಾಯಕರೇ ಹೇಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಸತತ ಪ್ರಯತ್ನದ ಫಲವಾಗಿ ಒಂದಿದ್ದ ಪ್ರಯೋಗಾಲಯದ ಸಂಖ್ಯೆ ಈಗ ಒಂಭತ್ತಕ್ಕೇರಿದೆ. ನೆರೆಯ ಇರಾನ್‌ನಲ್ಲಿ 1,22,000 ಸೋಂಕಿನ ಪ್ರಕರಣಗಳಿದ್ದವು ಮತ್ತು 7000ಕ್ಕೂಎ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಹೀಗಿರುವಾಗ ಅಫ್ಘಾನ್ ಹೇಗೆ ಸುರಕ್ಷಿತವಾಗಿ ಉಳಿಯಿತು ಎಂಬ ಪ್ರಶ್ನೆ ಕಾಡುತ್ತಿತ್ತು. ಅಲ್ಲಿನ ಪರಿಸ್ಥಿತಿ ಈ ಪ್ರಶ್ನೆಗೆ ಉತ್ತರ ಕೊಡುತ್ತದೆ. ಅಂದ ಹಾಗೇ ಅಫ್ಘಾನಿಸ್ಥಾನದಲ್ಲಿ ಕೋವಿಡ್ ಸೋಂಕಿತರೆಷ್ಟು ಮತ್ತು ಬಲಿಯಾದವರೆಷ್ಟು ಎಂಬ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ಇಂಥ ಅಂಕಿಅಂಶ ಸರಕಾರದ ಬಳಿಯೂ ಇಲ್ಲ.