Advertisement

ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?

04:29 PM Feb 03, 2023 | |

ನವದೆಹಲಿ: ಉದ್ಯಮಿ ಅದಾನಿ ಸಮೂಹ ಸಂಸ್ಥೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಹಿಂಡನ್ ಬರ್ಗ್ ವರದಿಯ ಆರೋಪದ ಬಳಿಕ ಕಳೆದ ಒಂದು ವಾರದಲ್ಲಿ ಅದಾನಿಯ ಎಲ್ಲಾ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಕುಸಿತ ಕಾಣುವ ಮೂಲಕ ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದೆ. ಮತ್ತೊಂದೆಡೆ ಭಾರತೀಯ ರಿಸರ್ವ್ ಬ್ಯಾಂಕ್, ಅದಾನಿ ಗ್ರೂಪ್ ಗೆ ಎಷ್ಟು ಸಾಲ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಬ್ಯಾಂಕ್ ಗಳಿಗೆ ಸೂಚಿಸಿತ್ತು.

Advertisement

ಇದನ್ನೂ ಓದಿ:ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ

ಈ ಹಿನ್ನೆಲೆಯಲ್ಲಿ ಬ್ಲೂಮ್ ಬರ್ಗ್ ನೀಡಿರುವ ವರದಿಯಂತೆ, ಭಾರತದ ಅತೀ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿಗೆ 21,000 ಕೋಟಿಗೂ ಅಧಿಕ ಸಾಲ ನೀಡಿರುವುದಾಗಿ ತಿಳಿಸಿದೆ.

ಎಸ್ ಬಿಐನ ಸಾಗರೋತ್ತರ ಶಾಖೆಗಳ ಮೂಲಕ ಅದಾನಿ ಗ್ರೂಪ್ ಗೆ 1,600 ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲವನ್ನು ನೀಡಲಾಗಿದೆ ಎಂದು ವರದಿ ವಿವರಿಸಿದೆ. ಈ ಬಗ್ಗೆ ಎಸ್ ಬಿಐ ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖರ ಅವರು, ಅದಾನಿ ಗ್ರೂಪ್ ಗೆ ನೀಡಿರುವ ಸಾಲದಿಂದ ಯಾವುದೇ ಸಮಸ್ಯೆ ಎದುರಿಸುವ ಸನ್ನಿವೇಶ ಇಲ್ಲ. ಯಾಕೆಂದರೆ ಸಾಲ ಪಡೆದುಕೊಂಡ ಸಂದರ್ಭದಿಂದ ಈವರೆಗೂ ಅದಾನಿ ಗ್ರೂಪ್ ಸಾಲದ ಕಂತುಗಳನ್ನು ಪಾವತಿಸುತ್ತಿರುವುದಾಗಿ ತಿಳಿಸಿದ್ದರು.

ಎಸ್ ಬಿಐ ಹೊರತುಪಡಿಸಿ ಮತ್ತೊಂದು ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ಅದಾನಿ ಸಮೂಹ ಸಂಸ್ಥೆಗಳಿಗೆ 7,000 ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ಬಹಿರಂಗಪಡಿಸಿದೆ. ಇನ್ನುಳಿದಂತೆ ಐಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್ ಅದಾನಿ ಗ್ರೂಪ್ ಗೆ ದೊಡ್ಡ ಮೊತ್ತದ ಸಾಲ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next