Advertisement

ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಸಿಕ್ಕ ಮತಗಳೆಷ್ಟು?

09:19 PM May 13, 2023 | Team Udayavani |

ಚಾಮರಾಜನಗರ: ಈ ಬಾರಿ ನನ್ನನ್ನು ಗೆಲ್ಲಿಸದಿದ್ದರೆ ಮತ್ತೆ ಇಲ್ಲಿಗೆ ಕಾಲಿಡುವುದಿಲ್ಲ ಎಂದಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಮತದಾರರಿಂದ ಕೇವಲ 658 ಮತಗಳನ್ನು ಮಾತ್ರ ಪಡೆದಿದ್ದಾರೆ.

Advertisement

ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಸಿ.ಪುಟ್ಟರಂಗಶೆಟ್ಟಿ ಅವರು 83858 ಮತಗಳನ್ನು ಪಡೆದು ಪುನರಾಯ್ಕೆಯಾಗಿದ್ದಾರೆ. ಬಿಜೆಪಿ ಹುರಿಯಾಳಾಗಿದ್ದ ವಿ.ಸೋಮಣ್ಣ 76325 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ವಾಟಾಳ್ ಅವರು ಈ ಹಿಂದೆ ಚಾಮರಾಜನಗರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ ಸ್ಪರ್ಧಿಸಿದಾಗ 5,977 ಮತಗಳನ್ನು ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next