ಗುನಾ: ಸಾಮಾನ್ಯವಾಗಿ ಹ್ಯಾಂಡ್ ಪಂಪ್ ಬೋರ್‌ವೆಲ್‌ಗಳಲ್ಲಿ ನೀರು ಸಿಗುವುದೇ ಈ ದಿನಗಳಲ್ಲಿ ಕಷ್ಟಸಾಧ್ಯವಾಗಿದೆ. ಆದರೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಬಾನ್ಪುರ ಗ್ರಾಮದಲ್ಲಿ ಹ್ಯಾಂಡ್ ಪಂಪ್‌ನಲ್ಲಿ ಮದ್ಯ ಬರುತ್ತಿದೆ!
ಐನಾತಿ ಸಾರಾಯಿ ತಯಾರಕರು, ಪೊಲೀಸರ ಕಣ್ಣು ತಪ್ಪಿಸಲು ಕೃಷಿ ಭೂಮಿಯಲ್ಲಿ ಹಳ್ಳ ತೋಡಿ, ಸಾರಾಯಿ ತುಂಬಿರುವ ಮೂರು ಡ್ರಮ್‌ಗಳನ್ನು ಇರಿಸಿದ್ದಾರೆ. ಅದು ಕಾಣದಂತೆ ಮೇಲೆ ಮೇವು ಮುಚ್ಚಿದ್ದಾರೆ. ಡ್ರಮ್‌ಗಳಿಗೆ ಪೈಪ್ ಸಂಪರ್ಕದೊಂದಿಗೆ ಹ್ಯಾಂಡ್ ಪಂಪ್ ಅಳವಡಿಸಿದ್ದಾರೆ. ಒಮ್ಮೆ ಹ್ಯಾಂಡ್ ಪಂಪ್ ಒತ್ತಿದರೆ ಸಾರಾಯಿ ಬರುತ್ತದೆ. ಅದನ್ನು ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಮಧ್ಯಪ್ರದೇಶ ಪೊಲೀಸರು ಅಕ್ರಮ ಸಾರಾಯಿ ದಂಧೆಯನ್ನು ಬಯಲಿಗೆಳೆದಿದ್ದು, ಸಾರಾಯಿ ತುಂಬಿದ ಡ್ರಮ್‌ಗಳು ಸೇರಿದಂತೆ ಇದಕ್ಕೆ ಬಳಸಿದ್ದ ಹ್ಯಾಂಡ್ ಪಂಪ್ ವಶಪಡಿಸಿಕೊಂಡಿದ್ದಾರೆ.