Advertisement
ಕಾರಿನ ಕ್ಯಾಬಿನ್ ಒಳಗೆ ಶುದ್ಧಗಾಳಿಯನ್ನು ಬಿಟ್ಟು, ಹೊರ ಗಿನ ಧೂಳಿನ ಕಣಗಳನ್ನು ನಿಯಂತ್ರಿಸಿ ಫಿಲ್ಟರ್ ಮಾಡುತ್ತದೆ. ಫಿಲ್ಟರ್ ಹಾಳಾದಾಗ ಅಥವಾ ಹೆಚ್ಚು ಧೂಳು ಕೂತಾಗ ಅದು ಶುದ್ಧಗಾಳಿಯನ್ನು ಕೊಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಫಿಲ್ಟರ್‌ನ್ನು ನಿಯಮಿತವಾಗಿ ಶುಚಿಗೊಳಿಸುವುದರಿಂದ ಉತ್ತಮ ಗಾಳಿ ಕ್ಯಾಬಿನ್ ಒಳಗೆ ಬರುತ್ತದೆ. ಕ್ಯಾಬಿನ್ ಒಳಗೆ ಶುಚಿಯಾಗಿರದಿದ್ದರೆ ಚಾಲಕ, ಪ್ರಯಾಣಿಕರಿಗೆ ಅಲರ್ಜಿ, ಕೆಮ್ಮು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕಾರಿನ ಡ್ಯಾಶ್‌ಬೋರ್ಡ್ ಕೆಳಭಾಗದಲ್ಲಿ (ಎಡಭಾಗದಲ್ಲಿ) ಚೌಕಾಕಾರದ ಬಾಕ್ಸ್ ಅನ್ನು ಪತ್ತೆ ಮಾಡಿ. ಇದರ ಒಳಭಾಗದಲ್ಲಿ ಪೋಲನ್ ಫಿಲ್ಟರ್ ಇರುತ್ತದೆ. ಇದು ಕೆಲವು ಕಾರುಗಳಲ್ಲಿ ದಪ್ಪ ಕಾಗದದಿಂದ ಮಾಡಿದ್ದು ಅಥವಾ ನೈಲಾನ್ ಮೆಶ್‌ನಿಂದ ಮಾಡಿದ್ದೂ ಆಗಿರಬಹುದು. ಫಿಲ್ಟರ್ ಬಾಕ್ಸ್‌ನ ಸೂಗಳನ್ನು ತೆಗೆದು ಈ ಫಿಲ್ಟರನ್ನು ಜಾಗ್ರತೆಯಾಗಿ ಹೊರತೆಗೆಯಿರಿ ಶುಚಿಗೊಳಿಸುವ ವಿಧಾನ ಪೋಲನ್ ಫಿಲ್ಟರ್ ತೆಗೆದು ನೀರಿ ನಲ್ಲಿ ಚೆನ್ನಾಗಿ ತೊಳೆಯಿರಿ. ಬಳಿಕ ಡೀಸೆಲ್, ಶ್ಯಾಂಪೂ ಹಾಕಿ ತೊಳೆಯಿರಿ. ದಪ್ಪನೆಯ ಬ್ರಷ್ ಇದಕ್ಕೆ ಉಪಯೋಗಿಸಬೇಡಿ. ಹಲ್ಲು ಜ್ಜುವ ಬ್ರಷ್ ಬಳಸಿ ಶುಚಿ ಗೊಳಿಸಬಹುದು. ಬಳಿಕ ಚೆನ್ನಾಗಿ ಒಣಗಿಸಿ. ಉತ್ತಮ ಬಟ್ಟೆಯಲ್ಲಿ ಶುಚಿಗೊಳಿಸಿ ಮೊದಲಿನಂತೆಯೇ ಮರುಸ್ಥಾಪಿಸಿ. ಎಷ್ಟು ಅವಧಿಗೆ ಫಿಲ್ಟರ್ ಬದಲಾಯಿ ಸಬೇಕು?
ಪೋಲನ್ ಫಿಲ್ಟರ್‌ನ್ನು ನಿಯಮಿತವಾಗಿ ಬದಲಾವಣೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಕಾರು ಸರ್ವೀಸ್ ವೇಳೆ ಮೆಕ್ಯಾನಿಕ್‌ಗಳು ಇದನ್ನು ಗಮನಿಸುತ್ತಾರೆ. ಒಂದು ವೇಳೆ ಅವರು ಅದರ ಬಗ್ಗೆ ಗಮನ ಹರಿಸದಿದ್ದರೆ ನೀವೇ ಇದನ್ನು ನಿರ್ವಹಣೆ ಮಾಡಬಹುದು. ಕಾರಿನ ಮಾಡೆಲ್, ಕಂಪೆನಿಗೆ ಅನುಗುಣವಾಗಿ ಫಿಲ್ಟರ್‌ಗಳ ಮಾದರಿಗಳು ಭಿನ್ನವಾಗಿರುತ್ತವೆ. ಇವುಗಳ ಬಾಳಿಕೆ ಸುಮಾರು 30 ಸಾವಿರ ಕಿ.ಮೀ.ಗಳು. ನೀವು ಡ್ರೈವ್ ಮಾಡುವ ರಸ್ತೆ ಹೇಗಿದೆ? ಧೂಳಿನಿಂದ ಕೂಡಿದೆಯೇ ಎಂಬುದರ ಮೇಲೆ ಇದರ ಬಾಳಿಕೆಯೂ ನಿರ್ಧಾರವಾಗುತ್ತದೆ.
Related Articles
ಕಡಿಮೆ ಏರ್‌ಫ್ಲೋ: ಕ್ಯಾಬಿನ್‌ನಲ್ಲಿ ಎ.ಸಿ. ಹಾಕಿದರೂ ಕಡಿಮೆ ಏರ್‌ಫ್ಲೋ ಆಗು ತ್ತಿರಬಹುದು. ಇದಕ್ಕೆ ಕಾರಣ ಪೋಲನ್ ಫಿಲ್ಟರ್‌ನಲ್ಲಿ ಧೂಳು ಕೂತಿರುವುದು.
ಕೆಟ್ಟ ವಾಸನೆ: ಕೆಟ್ಟ ವಾಸನೆ, ಧೂಳು ವಾಸನೆ ಹೊಡೆಯಬಹುದು. ಪೋಲನ್ ಫಿಲ್ಟರ್ ಸರಿಯಾಗಿಲ್ಲದಿದ್ದರೆ ಕ್ಯಾಬಿನ್ ಒಳಗೆ ಬ್ಯಾಕ್ಟೀರಿಯಾಗಳು ಹೆಚ್ಚು ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ.
Advertisement
ಕರ್ರರ್ರರ್ರ ಶಬ್ದ:ಪೋಲನ್ ಫಿಲ್ಟರ್ ಹರಿದು ಹೋದ ಸಂದರ್ಭದಲ್ಲಿ ಫುಲ್ ಎ.ಸಿ. ಹಾಕಿಕೊಂಡಿದ್ದರೆ ಸಣ್ಣದಾಗಿ ಕರ್ರರ್ರರ್ರ ಶಬ್ದ ಕೇಳಿಸುವ ಸಾಧ್ಯವಿರುತ್ತದೆ. ಎ.ಸಿ. ಅಥವಾ ಏರ್ ಫ್ಲೋ ಫ್ಯಾನ್ ಬಂದ್ ಮಾಡಿದಾಗ ಈ ಶಬ್ದ ನಿಲ್ಲುತ್ತದೆ ಎಂದಾದರೆ ಅದು ಫಿಲ್ಟರ್‌ನ ಸಮಸ್ಯೆಯಾಗಿದ್ದು ಫಿಲ್ಟರ್ ಬಾಕ್ಸ್ ತೆರೆದು ನೋಡಬೇಕು. ಫಿಲ್ಟರ್ ಹಾಳಾಗಿದ್ದು ಗೊತ್ತಾಗೋದು ಹೇಗೆ?
ಫಿಲ್ಟರ್ ಅನ್ನು ಶುಚಿಗೊಳಿಸಲು ತೆಗೆಯುವ ವೇಳೆ ಅದರ ಒಂದು ಬದಿ ಹರಿದಿರುವುದು ಅಥವಾ ಫಿಲ್ಟರ್‌ನ ಜಾಲರಿಗಳ ಮಧ್ಯೆ ಜಾಗ ಸೃಷ್ಟಿಯಾಗಿದ್ದರೆ ಫಿಲ್ಟರ್ ಉಪಯೋಗಕ್ಕೆ ಬಾರದು. ಇಂತಹ ಫಿಲ್ಟರ್‌ಗಳನ್ನು ಶುಚಿಗೊಳಿಸಿ ಹಾಕಿದರೂ ಪ್ರಯೋಜನಕಾರಿಯಲ್ಲ. ಹೊಸತೇ ಹಾಕುವುದು ಉತ್ತಮ. - ಈಶ