Advertisement
ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆಬೆಲ್ಲದಲ್ಲಿ ವಿಟಮಿನ್ ಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸಲು ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.
ತೂಕ ಇಳಿಸಬೇಕೆಂದರೆ ಸಕ್ಕರೆಯನ್ನೇ ತಿನ್ನಬಾರದು ಎಂದು ಹೇಳುತ್ತಾರೆ, ಹಾಗಾದರೆ ಬೆಲ್ಲ ತಿನ್ನಬಹುದೇ? ವಾಸ್ತವವಾಗಿ ಬೆಲ್ಲದಲ್ಲಿರುವ ಸಕ್ಕರೆಯ ಅಂಶಕ್ಕಿಂತಲೂ ಇತರ ಪೋಷಕಾಂಶಗಳು ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ರಕ್ತ ಮತ್ತು ಜೀರ್ಣಾಂಗಗಳನ್ನು ಶುದ್ದೀಕರಿಸಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುತ್ತದೆ
ಬೆಲ್ಲದಲ್ಲಿ ಪೊಟ್ಯಾಶಿಯಂ ಸಹಿತ ಹಲವಾರು ಪ್ರಮುಖ ಖನಿಜಗಳಿವೆ. ಇವು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ದೇಹದ ಯಾವುದೇ ಕ್ರಿಯೆ ಜರುಗಲು ನೀರು ಅಗತ್ಯವಾಗಿದ್ದು ತೂಕ ಇಳಿಕೆಗೂ ಅಂದರೆ, ಕೊಬ್ಬಿನಾಂಶವನ್ನು ಬಳಸಿಕೊಳ್ಳಲೂ ನೀರು ಅಗತ್ಯವಾಗಿದ್ದು ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವು ನೀಡುತ್ತದೆ. ಹಾಗಾಗಿ ಬೆಲ್ಲವನ್ನು ನಿತ್ಯವೂ ಮಿತಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ
Related Articles
Advertisement
ಬೆಲ್ಲವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಆದ್ದರಿಂದ ಇದು ರಕ್ತದೊತ್ತಡ ಇರುವವರಿಗೆ ಉತ್ತಮ ಮನೆ ಮದ್ದು ಹೌದು.
ಊಟದ ನಂತರ ಸಣ್ಣ ಬೆಲ್ಲದ ತುಣುಕನ್ನು ತಿಂದರೆ ಜೀರ್ಣಶಕ್ತಿಗೆ ಇದು ಸಹಾಯ ಮಾಡುತ್ತದೆ. ಜೀರ್ಣಶಕ್ತಿ ಪ್ರಕ್ರಿಯೆ ಸುಗಮವಾಗುವುದರಿಂದ ಅಸಿಡಿಟಿ, ತೇಗು, ಗ್ಯಾಸ್ ಟ್ರಬಲ್ನಿಂದ ಮುಕ್ತಿ ಸಾಧ್ಯ.
ಮಲಬದ್ಧತೆಗೆ ಬೆಲ್ಲ ಉತ್ತಮ ಪರಿಹಾರ. ಇದಕ್ಕೆ ಬೆಲ್ಲದಲ್ಲಿರುವ ಫೈಬರ್ ಅಂಶವೇ ಕಾರಣ.
ಬೆಲ್ಲದ ಉಪಯೋಗದಿಂದ ಯಕೃತ್ಗೂ ಉತ್ತಮ ಫಲಕಾರಿ. ಇದರೋಲಗಿನ ಜಿಂಕ್ ಅಂಶ ಯಕೃತ್ನ್ನು ಸ್ವಚ್ಛಗೊಳಿಸುತ್ತದೆ. ಆಯುರ್ವೇದದಲ್ಲಿ ಬೆಲ್ಲವನ್ನು ರಕ್ತ ಶುದ್ಧಿಗೆ ಮತ್ತು ಯಕೃತ್ ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾದ ಕೆಮ್ಮು, ಶೀತ, ಜ್ವರದಿಂದ ರಕ್ಷಣೆ ಸಾಧ್ಯ. ಒಂದು ಲೋಟ ನೀರಿಗೆ ಒಂದು ಟೀ ಚಮಚದಷ್ಟು ಬೆಲ್ಲದ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಶೀತ, ನೆಗಡಿ, ಬರುವುದನ್ನು ತಪ್ಪಿಸಬಹುದು.
ಬೆಲ್ಲವು ಶ್ವಾಸಕೋಶಗಳ ಸ್ವಚ್ಛತೆಗೊಳಿಸುತ್ತದೆ. ಇದರಿಂದ ಅಸ್ತಮಾ, ನ್ಯುಮೋನಿಯಾಗಳನ್ನು ಉಪಶಮನಗೊಳಿಸಬಹುದು.
ದೇಹದೊಳಗಿನ ಉಷ್ಣಾಂಶದ ಸಮತೋಲಕ್ಕೆ ಚಳಿಗಾಲದಲ್ಲಿ ಬೆಲ್ಲ ಸಹಕಾರಿ. ಕಬ್ಬಿಣಾಂಶ, ಜಿಂಕ್, ಮ್ಯಾಗ್ನೇಸಿಯಂ ಮತ್ತು ಪ್ರಾಸ್ಪರಸ್ನಂತಹ ಅಂಶಗಳು ಉಷ್ಣವನ್ನು ನಿಯಂತ್ರಿಸುತ್ತವೆ.
ಬೆಲ್ಲದೊಳಗಿನ ಕಬ್ಬಿಣಾಂಶವು ಗರ್ಭಿಣಿಯರಿಗೆ, ಅನಿಮಿಯಾದಿಂದ ಬಳಲುತ್ತಿರುವವರಿಗೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಉಪಯುಕ್ತ.