Advertisement
ಸದ್ಯಕ್ಕೆ ಎಲ್ಲೆಡೆ ಚರ್ಚೆಯಾಗುತ್ತಿರುವುದು ಇದೇ ವಿಷಯ. ಪ್ರಸಾದದಲ್ಲಿ ವಿಷ ಬೆರೆಸಿದ್ದೇ ಆದಲ್ಲಿ ಹಾಕಿದ್ದು ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಬೆಳವಣಿಗೆಯ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಸಾವಿಗೆ ಕಾರಣವಾದ ಪ್ರಸಾದದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಸಾದದಲ್ಲಿ ವಿಷ ಸೇರಿದೆಯೇ ಎಂಬ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದಿದ್ದಾರೆ.
ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 76 ಮಂದಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಸ್ವಸ್ಥಗೊಂಡಿದ್ದ 79 ಮಂದಿಯನ್ನು ಮೈಸೂರಿಗೆ ಕರೆತರಲಾಗಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಏಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 48 ಅಥವಾ 72 ಗಂಟೆಗಳ ಕಾಲ ಇವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಜತೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಇನ್ನೂ ಒಂದು ವಾರ ಬೇಕಾಗಬಹುದು ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾತು.
Related Articles
ಕೊಳ್ಳೇಗಾಲ ತಾಲೂಕು ಬಿದರಹಳ್ಳಿಯ ಕೂಲಿ ಕಾರ್ಮಿಕ ಷಣ್ಮುಖ ಅವರ ಮೂವರು ಮಕ್ಕಳ ಪೈಕಿ ದುರಂತದಲ್ಲಿ ಅಸ್ವಸ್ಥನಾಗಿದ್ದ 6 ವರ್ಷದ ಪ್ರೀತಂನನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟ ಪ್ರೀತಂ ಹಿರಿಯ ಮಗ. ಆರು ವರ್ಷದ ಹಿಂದೆ ಶುಕ್ರವಾರವೇ ಜನಿಸಿದ್ದ ಪ್ರೀತಂ ದುರಂತದಲ್ಲಿ ಸತ್ತಿದ್ದು ಕೂಡ ಶುಕ್ರವಾರವೇ. ಜೊತೆಗೆ ಡಿ.14ರಂದೇ ಆತನ 6ನೇ ಹುಟ್ಟುಹಬ್ಬ, ವಿಧಿ ಅವನನ್ನು ಬಿಡಲಿಲ್ಲ ಎಂದು ಕಣ್ಣೀರಾದರು ಮೃತ ಪ್ರೀತಂ ತಂದೆ ಷಣ್ಮುಖ.
Advertisement
ಪ್ರಸಾದ ಖಾಲಿ, 30 ಮಂದಿ ಮಾಲಾಧಾರಿಗಳು ಪಾರುದೇಗುಲದಲ್ಲಿನ ಪ್ರಸಾದ ಖಾಲಿಯಾಗಿದ್ದರಿಂದ 30 ಮಂದಿ ಓಂ ಶಕ್ತಿ ಮಾಲಾಧಾರಿಗಳು ಅಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಮೇಲ್ ಮರುವತ್ತೂರಿನ ಆದಿ ಪರಾಶಕ್ತಿ ದೇವಾಲಯಕ್ಕೆ ತೆರಳಲು ಬಿದರಹಳ್ಳಿ, ವಡಕೆಹಳ್ಳ ಸುತ್ತಮುತ್ತಲಿನ ಸುಮಾರು 60 ಮಂದಿ ಮಾಲೆ ಹಾಕಿಸಿಕೊಂಡಿದ್ದರು. 30 ಜನರಿದ್ದ ಒಂದು ತಂಡ ಮುಂದೆ ಹೋಗಿತ್ತು. ಆ ಸಂದರ್ಭದಲ್ಲಿ ಕೆಲವರು ಬಾತ್ ಸೇವಿಸಿದರು. ಇನ್ನು ಕೆಲವರು ಬಾತ್‌ನಲ್ಲಿ ಏನೋ ಕೃತಕ ವಾಸನೆ ಬರುತ್ತಿದೆ ಎಂದು ಬಿಸಾಡಿದ್ದರು.ಇನ್ನು 30 ಜನರಿದ್ದ ಎರಡನೇ ತಂಡ ಹೋಗುವ ವೇಳೆಗೆ ಬಾತ್ ಖಾಲಿಯಾಗಿತ್ತು. ನಮಗೆ ಪ್ರಸಾದ ಸಿಗಲಿಲ್ಲ ಎಂಬ ಬೇಸರವಾಯಿತು. ತಾಯಿ ನಮಗೆ ಪ್ರಸಾದ ಕೊಡಲಿಲ್ಲವಲ್ಲ ಎಂದು ನೊಂದುಕೊಂಡಿದ್ದೆವು. ಆದರೆ ಘಟನೆ ಬಳಿಕ ಆ ತಾಯಿಯೇ ನಮ್ಮನ್ನು ಕಾಪಾಡಿದ್ದಾಳೆ. ಆ ತಾಯಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಪಾರಾದ ವಡಕೆಹಳ್ಳ ಗೋಪಾಲ್ ತಿಳಿಸಿದರು. ಮಾಹಿತಿ ಲಭ್ಯವಿಲ್ಲ
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾ ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಹೇಳಿದ್ದಾರೆ. ಸದ್ಯ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ. ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆಹಾರದ ಮಾದರಿಯನ್ನು ಮೈಸೂರಿನ ಫೋರೆನ್ಸಿಕ್ ಸೈನ್ಸ್ ಲ್ಯಾಬ್‌ಗ ಕಳುಹಿಸಿಕೊಡಲಾಗಿದ್ದು ಭಾನುವಾರ ವರದಿ ಬರುವ ನಿರೀಕ್ಷೆಯಿದೆ. ಶವಪರೀಕ್ಷೆ ವರದಿ ಸಹ ಭಾನುವಾರ ದೊರಕಲಿದ್ದು, ಬಳಿಕವಷ್ಟೇ ಮಹತ್ವದ ಸುಳಿವು ದೊರಕುವ ಸಾಧ್ಯತೆಯಿದೆ ಎಂದು ತಿಳಿಸಿದರು. ಫುಡ್ ಪಾಯಿಸನ್‌ನಿಂದ ಈ ದುರಂತ ಸಂಭವಿಸಿಲ್ಲ, ಯಾರೋ ಪಾತಕಿಗಳು ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಈಗಾಗಲೇ ಘಟನೆ ಬಗ್ಗೆ ತನಿಖೆಗೆ ಮುಖ್ಯಮಂತ್ರಿಯವರು ಆದೇಶ ಮಾಡಿದ್ದಾರೆ. ನಾನು ಕೂಡ ಅವರೊಂದಿಗೆ ಮಾತನಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇನೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ