Advertisement

ಸೊಳ್ಳೆಗಳ ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರು! ಆಗಿದ್ದು ಇಷ್ಟೇ…

08:43 AM Jul 20, 2022 | Team Udayavani |

ಬೀಜಿಂಗ್‌: ಚೀನ ಪೊಲೀಸರು ಫೌಂಗ್ಜು ಪ್ರಾಂತ್ಯದಲ್ಲಿನ ಫ್ಲಾಟ್‌ ಒಂದರಲ್ಲಿ ಕಳ್ಳತನ ಮಾಡಿದ್ದವನನ್ನು ಪತ್ತೆ ಹಚ್ಚಲು ಎರಡು ಸೊಳ್ಳೆಗಳು ನೆರವಾಗಿವೆ!

Advertisement

ಕಳ್ಳನೊಬ್ಬ ಬೀಗ ಹಾಕಿದ್ದ ಫ್ಲಾಟ್‌ನೊಳಕ್ಕೆ ನುಗ್ಗಿ ಬೇಕಾದ್ದನ್ನು ದೋಚಿದ. ಒಂದು ರಾತ್ರಿಯನ್ನು ಅಲ್ಲೇ ಕಳೆದಿದ್ದ. ಆ ಸಂದರ್ಭದಲ್ಲಿ ಆತನನ್ನು ಕಚ್ಚಿದ್ದ ಎರಡು ಸೊಳ್ಳೆಗಳನ್ನು ಅವು ಫ್ಲಾಟ್‌ನ ಹಾಲ್‌ನಲ್ಲಿರುವ ಗೋಡೆಯ ಮೇಲೆ ಹೋಗಿ ಕೂತಿದ್ದಾಗ ಅದನ್ನೂ ಸಾಯಿಸಿದ್ದ. ಅಷ್ಟೇ.

ಅದೇ ಪೊಲೀಸರಿಗೆ ಆತನ ರಕ್ತದ ಡಿಎನ್‌ಎ ಮಾದರಿ ಸಿಗುವಂತೆ ಮಾಡಿತು. ಅದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು 19 ದಿನಗಳ ನಂತರ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next