Advertisement
ಚೀನಾದ ನಡವಳಿಕೆ ಬಗ್ಗೆ ಜೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿ ಈ ಬಗ್ಗೆ ವಿಶ್ಲೇಷಿಸಿದ್ದು, ಜಾಗತಿಕವಾಗಿ ಫ್ಲೂನಂತಹ ವೈರಸ್ ಗೆ ಐದು ಲಕ್ಷಕ್ಕಿಂತ ಹೆಚ್ಚು ಜನರು ನರಳುವಂತಾಗಿದೆ. ಸಾವಿನ ಪ್ರಮಾಣ 23 ಸಾವಿರಕ್ಕೆ ಏರಿಕೆ ಕಂಡಿದೆ.
ಸಾಧ್ಯವಾಗಲಿಲ್ಲ. 2019ರ ಡಿಸೆಂಬರ್ ನಲ್ಲಿ ಚೀನಾದಿಂದ ಕೊರಿಯಾ ಮತ್ತು ಥಾಯ್ ಲ್ಯಾಂಡ್ ಗೆ ವೈರಸ್ ಹಬ್ಬಿಬಿಟ್ಟಿತ್ತು! ವರದಿಯ ಪ್ರಕಾರ ಆರಂಭದಲ್ಲಿ ಮಾರಣಾಂತಿಕ ಸೋಂಕಿನ ಬಗ್ಗೆ ತಿಳಿದ ಚೀನಾ ಈ ಕುರಿತ ಪುರಾವೆಯನ್ನು ನಾಶಮಾಡಲು ಪ್ರಯತ್ನಿಸಿತ್ತು. ಕೆಲವು ವರದಿಗಳ ಪ್ರಕಾರ ಚೀನಾ ವೈದ್ಯರು ಶೀಘ್ರವೇ ಹೊಸ ವೈರಸ್ ಅನ್ನು ಕಂಡುಹಿಡಿದುಬಿಟ್ಟಿದ್ದರು. ನಂತರ ಚೀನಾ ಅಧಿಕಾರಿಗಳು ಪ್ರಯೋಗಾಲಯಗಳನ್ನು ಬಂದ್ ಮಾಡಿ, ವೈರಸ್ ಸ್ಯಾಂಪಲ್ಸ್ ಅನ್ನು ಶಗೊಳಿಸಿಬಿಟ್ಟಿರುವುದಾಗಿ ವಿವರಿಸಿದೆ.
Related Articles
Advertisement
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ 19 ಚೀನಾ ವೈರಸ್ ಎಂದು ಕರೆದಿದ್ದರು. ಆದರೆ ಚೀನಾ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿತ್ತು. ಆದರೆ ಈ ಹಿಂದೆ ಸ್ಪ್ಯಾನಿಶ್ ಫ್ಲೂ, ನ್ಯೂ ದಿಲ್ಲಿ ಸೂಪರ್ ಬಗ್ ಅಥವಾ ದಕ್ಷಿಣ ಕೊರಿಯಾ ನದಿ ಹಾಂಟಾನಾದ ಹಾಂಟಾ ವೈರಸ್ ಎಂದು ಹೆಸರಿಟ್ಟಾಗ ಚೀನಾ ಯಾವತ್ತೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲವಾಗಿತ್ತು. ಆದರೆ ಇದೀಗ ಚೀನಾ ವೈರಸ್ ಎಂಬ ಹೆಸರಿಗೆ ತೀವ್ರ ವಿರೋಧವ್ಯಕ್ತಪಡಿಸುತ್ತಿದೆ ಎಂದು ವರದಿ ತಿಳಿಸಿದೆ.
ಈಗ ಚೀನಾ ಸರ್ಕಾರ ಮತ್ತು ಮಾಧ್ಯಮ ಚೀನಾದಲ್ಲಿ ವೈರಸ್ ಹರಡಲು ಅಮೆರಿಕವೇ ಕಾರಣ ಎಂದು ಆರೋಪಿಸುತ್ತಿದೆ. ಮಾರ್ಚ್ 12ರಂದು ಚೀನಾದ ವಿದೇಶಾಂಗ ವಕ್ತಾರ ಝಾವೋ ಲಿಜಾನ್ ಕೂಡಾ ಕೋವಿಡ್ ವೈರಸ್ ಅಮೆರಿಕದಿಂದ ಚೀನಾಕ್ಕೆ ಬಂದಿತ್ತು ಎಂದು ಟ್ವೀಟರ್ ನಲ್ಲಿ ಆರೋಪಿಸಿದ್ದರು.