Advertisement
ಚೀನದಲ್ಲಿಯೂ ಇದೇ ದಾಖಲಾಗಿದೆ. ಅಲ್ಲಿ ಕೆಲವು ವೈರಸ್ ಸೋಂಕಿತರು ಚೇತರಿಸಿಕೊಂಡಿದ್ದರು. ಅನಂತರ ಅವರಲ್ಲಿ ಪಾಸಿಟಿವ್ ಪತ್ತೆಯಾಯಿತು. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಹಾಗಾದರೆ ಸೋಂಕಿತರಾಗಿದ್ದುಕೊಂಡು ಗುಣಮುಖರಾದರೂ ಅಪಾಯದಿಂದ ಪಾರಾದಂತೆ ಅಲ್ಲವೇ ಎಂಬ ಪ್ರಶ್ನೆ ಹುಟ್ಟಿಸಿದೆ. ಕೆಸಿಡಿಸಿ ಒಂದೇ ಕುಟುಂಬದಿಂದ ಮೂರು ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಿದೆ. ಅಲ್ಲಿ ರೋಗಿಗಳು ಚೇತರಿಸಿಕೊಂಡ ಅನಂತರ ಪಾಸಿಟಿವ್ ಪರೀಕ್ಷೆ ನಡೆಸಿ¨ªಾರೆ.
Related Articles
ಸದ್ಯಕ್ಕೆ ದಕ್ಷಿಣ ಕೊರಿಯಾ ಕೆಸಿಡಿಸಿ ಉಳಿದ ಪ್ರಕರಣಗಳನ್ನು ನಿರ್ಣಾಯಕ ಹಂತಕ್ಕೆ ಕೊಂಡುಹೋಗುತ್ತಿದೆ. ಡೇಜಿಯಾನ್ ನಗರದಲ್ಲಿ ಆಸ್ಪತ್ರೆಗೆ ದಾಖಲಾದ ಜಿನ್ ಕಿಮ್ ಮಾರ್ಚ್ 25ರಂದು ಕೋವಿಡ್ 19ನ ಪಾಸಿಟಿವ್ ಎಂದು ಗುರುತಿಸಲ್ಪಟ್ಟರು. ಈ ವಾರದ ಪರೀಕ್ಷೆಯಲ್ಲಿ ಅವರು ನೆಗೆಟಿವ್ ಆಗಿದ್ದಾರೆ. ಆದರೆ ಒಂದು ದಿನದ ಬಳಿಕ ಅವರು ಮತ್ತೆ ಪಾಸಿಟಿವ್ ಪರೀಕ್ಷೆಗೆ ಒಳಪಟ್ಟರು. 25 ವರ್ಷ ವಯಸ್ಸಿನವರು ಕನಿಷ್ಟ ಎರಡು ಪರೀಕ್ಷೆ ಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅವರು ಚೇತರಿಸಿ ಕೊಳ್ಳಬೇಕಾದರೆ ಅಥವಾ ಕೊರೊನಾ ಮುಕ್ತ ರಾಗಬೇಕಾದರೆ 2 ಪರೀಕ್ಷೆಗಳಲ್ಲಿ ನೆಗೆಟಿವ್ ಬರ ಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಅನಂತರ ಎರಡು ವಾರಗಳವರೆಗೆ ಪ್ರತ್ಯೇಕ ವಾಸದ ಲ್ಲಿರಲು ಸರಕಾರ ಶಿಫಾರಸು ಮಾಡುತ್ತದೆ.
Advertisement
ಮತ್ತೆ ಪಾಸಿಟಿವ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದೆ. ಇಲ್ಲಿ ದ್ವಿತೀಯ ಅಥವಾ ತೃತೀಯ ಪ್ರಸರಣದ ಅಪಾಯವಿಲ್ಲ ಎಂದು ದಕ್ಷಿಣ ಕೊರಿಯಾದ ವೈದ್ಯರು ಹೇಳಿದ್ದಾರೆ. ಸೋಂಕಿತ ಮತ್ತು ಚೇತರಿಸಿಕೊಂಡ ಜನರಿಂದ 400 ಮಾದರಿಗಳನ್ನು ಪರೀಕ್ಷಿಸಲು ಕೆಸಿಡಿಸಿ ಮುಂದಾಗಿದೆ.
ಸಾಧ್ಯತೆಗಳೇನು?ರೋಗಿಗಳು ಧನಾತ್ಮಕವಾಗಿ ಮರುಪರಿಶೀಲಿಸುವ ಪ್ರಕ್ರಿಯೆ ಗಳಲ್ಲಿ ದೋಷವಿರಬಹುದು. ವೈರಸ್ ಅನ್ನು ಗುರುತಿಸಲು ಅವರು ವಿಫಲವಾಗಿರುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ದೋಷ ವಿದ್ದರೆ, ರೋಗಿಗಳು ನೆಗೆಟಿವ್ ಮತ್ತು ದೃಢಿಕರಣವಲ್ಲದ ಪಾಸಿಟಿವ್ ಪಡೆಯ ಬಹುದು. ಪರೀಕ್ಷೆಯಲ್ಲಿ ಬಳಸಿದ ರಾಸಾಯನಿಕಗಳೊಂದಿಗಿನ ಸಮಸ್ಯೆಗಳು ಮತ್ತು ಪರೀಕ್ಷೆಯಿಂದ ಗುರುತಿಸಲಾಗದ ರೀತಿಯಲ್ಲಿ ವೈರಸ್ ರೂಪಾಂತರಗೊಳ್ಳುವ ಸಾಧ್ಯತೆ ಸೇರಿದಂತೆ ಇದು ಸಂಭವಿಸಲು ಹಲವಾರು ಕಾರಣಗಳಿವೆ ಎನ್ನುತ್ತವೆ ವೈದ್ಯಕೀಯ ಮೂಲಗಳು.