Advertisement

5 ಸಾವಿರ ಕಾರ್ಮಿಕರಿಗೆ ವಸತಿ

07:15 AM Feb 05, 2019 | Team Udayavani |

ದೊಡ್ಡಬಳ್ಳಾಪುರ: ಐದು ಸಾವಿರ ಕಾರ್ಮಿ ಕರಿಗೆ ಮನೆ ನಿರ್ಮಾಣ ಮಾಡಿ ಕೊಡಲು ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು.

Advertisement

ಭಾರತೀಯ ಬೋವಿ ಜನಾಂಗದ ಪರಿ ಷತ್‌ ತಾಲೂಕು ಘಟಕದ ನೇತೃತ್ವದಲ್ಲಿ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 847ನೇ ಜಯಂತಿ ಮತ್ತು ಭಾರತೀಯ ಬೋವಿ ಜನಾಂಗ ಪರಿಷತ್‌, ಬೆಂ.ಗ್ರಾಮಾ ಂತರ ಜಿಲ್ಲಾ ಕೇಂದ್ರ ಕಚೇರಿ ಹಾಗು ಶ್ರೀಸಿದ್ದ ರಾಮೇಶ್ವರ ಬೋವಿ ಅಭಿವೃದ್ಧಿ ಟ್ರಸ್ಟ್‌ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಮಿಕರಿಗೆ ಪೀಣ್ಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಈಗಾಗಲೇ ಸರ್ಕಾರದ ಅನುಮೋದನೆ ಪಡೆದಿದ್ದೇವೆ. ಅಲ್ಲದೆ ಗ್ರಾಮೀಣ ಪ್ರದೇಶಗಳ ಶೋಷಿತ ಸಮುದಾ ಯಗಳ ಅಭಿವೃದ್ಧಿಗೆ ವೃತ್ತಿ ತರಬೇತಿಗಳನ್ನು ನೀಡಲು ಮುಂದಾಗಿದ್ದೇವೆ ಎಂದರು.

ಶೋಷಿತರಿಗೆ ಸವಲತ್ತು: ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೂ ಕ್ಯಾಬಿನೆಟ್ ಅನುಮೋದನೆ ಪಡೆದಿದ್ದೇವೆ. ಈ ಹಂತದಲ್ಲಿ ಶೋಷಿತ ಸಮುದಾಯಗಳು, ಆರ್ಥಿಕ ಶೋಷಿತರು ಹೆಚ್ಚಿರುವ ಕಾರ್ಮಿಕ ವಲಯಕ್ಕೆ ಬಹುತೇಕ ಸರ್ಕಾರಿ ಸೌಲತ್ತುಗಳನ್ನು ನಮ್ಮ ಸರ್ಕಾರದಿಂದ ನೀಡುತ್ತಿದ್ದೇವೆ ಎಂದು ತಿಳಿಸಿದರು.

ವೃತ್ತಿ ಬಿಡಿ ಶಿಕ್ಷಣ ನೀಡಿ: ತಮ್ಮ ವೃತ್ತಿಗೆ ಜೋತು ಬೀಳದೆ ಬೋವಿ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಸಮುದಾಯ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸಾಧ್ಯ. 7 ಕೋಟಿ ಜನಸಂಖ್ಯೆ ಇರುವ ಸಮುದಾಯ ರಾಜಕೀಯ ಪ್ರಗತಿ ಸಾಧಿಸುವಲ್ಲಿ ಸಮು ದಾಯದ ರಾಜಕಾರಣಿಗಳಿಗೆ ಶಕ್ತಿ ನೀಡುವಲ್ಲಿ ನಿಮ್ಮ ಅಮಾಯಕ ಧೋರಣೆಯನ್ನು ಬದಿಗಿರಿಸಿ.

Advertisement

ಮದ್ಯಕ್ಕೆ ದಾಸರಾಗದೆ ಸಮು ದಾಯದ ಏಳಿಗೆಗೆ ಪ್ರತಿಯೊಬ್ಬ ಶ್ರಮಿಸಬೇಕು. ಸರ್ಕಾರ ನೀಡುತ್ತಿರುವ ಬಹುತೇಕ ಸರ್ಕಾರಿ ಸೌಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸಮು ದಾಯ ಹಿಂದೆ ಇರುವುದು ಖೇದಕರವಾಗಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗುವ ಮೂಲಕ ತಮ್ಮ ಸೌಲತ್ತು ಪಡೆದುಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.

ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ: ಶಾಸಕ ಟಿ.ವೆಂಕಟರಮಣಯ್ಯ ನಂತರ ಮಾತನಾಡಿ, ಬೋವಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ನೀಡಿರುವುದು ಸಿದ್ದರಾಮಯ್ಯರ ಶೋಷಿತ ಪರವಾದ ಆಡಳಿತವನ್ನು ಬಿಂಬಿಸುತ್ತದೆ. ಶೋಷಿತ ಸಮುದಾಯಗಳಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಬಹುತೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದೆ.

ಈ ನಿಟ್ಟಿನಲ್ಲಿ ತಾಲೂಕಿನಲ್ಲೂ ಪ್ರತಿ ಹೋಬಳಿಯಲ್ಲಿ ವಸತಿ ಶಾಲೆಗಳೂ ಸೇರಿದಂತೆ ಬಹುತೇಕ ಶೆ„ಕ್ಷಣಿಕ ಪ್ರಗತಿಗೆ ಸಿದ್ದರಾಮಯ್ಯರ ಸರ್ಕಾರದಿಂದ ಅನುದಾನ ತಂದಿದ್ದೇನೆ. ಈ ಮೂಲಕ ಈ ತಾಲೂಕಿನ ಶೋಷಿತ ಸಮುದಾಯಗಳು ಮತ್ತು ಆರ್ಥಿಕ ಶೋಷಿತರಿಗೆ ಶೆ„ಕ್ಷಣಿಕ ಪ್ರಗತಿ ಸಾಧಿಸಲು ಶ್ರಮಿಸಿದ್ದೇನೆ ಎಂದರು. ಚಿತ್ರದುರ್ಗ ಮತ್ತು ಬಾಗಲಕೋಟೆ ಬೋವಿ ಗುರು ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದ ರಾಮೇಶ್ವರ ಮಹಾ ಸ್ವಾಮಿಗಳು ಆಶೀರ್ವ ಚನ ನೀಡಿದರು.

ಮೆರವಣಿಗೆ: ಸ್ವಾಮಿಗಳನ್ನು ಬೆಳ್ಳಿರಥದಲ್ಲಿ ಜನಪದ ಕಲಾ ತಂಡಗಳ ನೃತ್ಯದೊಂದಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಯಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಕರೆತರಲಾಯಿತು.

ಸಮುದಾಯದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಒಸಿಸಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಚ್.ರವಿಮಾಕಳಿ, ಒಸಿಸಿ ಐ ರಾಷ್ಟ್ರೀಯ ಪದಾಧಿಕಾರಿಗಳು, ತಾಲೂಕು ಸಮಿತಿ ಅಧ್ಯಕ್ಷ ಎನ್‌.ರಾಮಕೃಷ್ಣ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಆರ್ಕೇಸ್ಟ್ರಾ ರಾಮ ಕೃಷ್ಣ, ಬಿಎಸ್ಪಿ ತಾಲೂಕು ಅಧ್ಯಕ್ಷ ಆಂಜಿನಪ್ಪ, ಕೆಪಿಸಿಸಿ ಸದಸ್ಯ ಎಸ್‌.ಆರ್‌.ಮುನಿರಾಜ್‌ ಸೇರಿದಂತೆ ಕನ್ನಡಪರ ಸಂಘ ಟನೆಗಳು ಮುಖ್ಯಸ್ಥರು, ಒಸಿಸಿಐ ತಾಲೂಕು, ಜಿಲ್ಲಾ, ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next