Advertisement
ಆರ್ಥಿಕ ಕುಸಿತದಿಂದಾಗಿ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಹೌಸ್ ಹೋಲ್ಡ್ ಇನ್ ಕಮ್ ಸೆಪ್ಟೆಂಬರ್ 2019 ರಿಂದ ಇಳಿಮುಖವಾಗಲು ಪ್ರಾರಂಭವಾಯಿತು. ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರದಿಂದ ವಿಶ್ಲೇಷಿಸಲ್ಪಟ್ಟ ವ್ಯಾಪಾರ ಮಾಹಿತಿ ಕಂಪನಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಹಿತಿಯ ಪ್ರಕಾರ, ಏಪ್ರಿಲ್ 2020 ರಲ್ಲಿ ಹೌಸ್ ಹೋಲ್ಡ ಇನ್ ಕಮ್ ಬಾರಿ ಕುಸಿತ ಕಂಡಿರುವುದನ್ನು ಕಾಣಬಹುದಾಗಿದೆ.
Related Articles
Advertisement
ಓದಿ : “ಮುಂಜಾನೆ ಮಂಜಲ್ಲಿ….” ಕರಾವಳಿಯ ವಿವಿಧೆಡೆ ಮಂಜು ಮುಸುಕಿದ ವಾತಾವರಣ
ನವೆಂಬರ್ 2019 ರಿಂದ, ಕೋವಿಡ್ ಪ್ಯಾಂಡಮಿಕ್ ಮತ್ತು ಲಾಕ್ ಡೌನ್ ಹೊಡೆತಕ್ಕೆ ಮುಂಚೆಯೇ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಕೆಳ ಮುಖ ಪ್ರವೃತ್ತಿಯಲ್ಲಿದೆ ಆದರೆ ಬಾರಿ ಕುಸಿತವು ಏಪ್ರಿಲ್ 2020 ರಲ್ಲಿ (ಲಾಕ್ ಡೌನ್ ನ ಮೊದಲ ಪೂರ್ಣ ತಿಂಗಳು) 19% ನಷ್ಟು ಕುಸಿತದೊಂದಿಗೆ ಮತ್ತು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಕ್ರಮವಾಗಿ 41%, ”ಸೆಂಟರ್ ಫಾರ್ ಎಕನಾಮಿಕ್ ಡಾಟಾ ಅಂಡ್ ಅನಾಲಿಸಿಸ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಬುಲೆಟಿನ್ ಗಮನಿಸಿದೆ.
ಗ್ರಾಮೀಣ ಮತ್ತು ನಗರ ಒಟ್ಟು ವೇತನದ ವಿಷಯದಲ್ಲಿನ ಕುಸಿತವು ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಗೆ ಸಮಾನವಾದ ಪ್ರವೃತ್ತಿಯನ್ನು ತೋರಿಸಿದೆ. ಗ್ರಾಮೀಣ ಭಾರತದಲ್ಲಿನ ಸಂಪೂರ್ಣ ವೇತನ ಕುಸಿತ ಕಂಡಿದ್ದು, ನಗರ ಪ್ರದೇಶಕ್ಕೂ ಪ್ರಭಾವ ಬೀರಿದೆ.
ಸಮಸ್ಯೆಯ ಮೂಟೆಯಾದ ನಿರುದ್ಯೋಗ :
ಭಾರತವು ಜೂನ್ ನಲ್ಲಿ ನಿಧಾನವಾಗಿ “ಅನ್ಲಾಕ್” ಆಗಲು ಪ್ರಾರಂಭಿಸಿದ ನಂತರ, ಆದಾಯವು ಸ್ವಲ್ಪ ಚೇತರಿಕೆಗೆ ಮಟ್ಟವನ್ನು ಕಂಡಿತ್ತಾದರೂ. ನಗರ ಹೌಸ್ ಹೋಲ್ಡ್ ವಿಷಯದಲ್ಲಿ, ಮೇ ಮತ್ತು ಜೂನ್ ತಿಂಗಳುಗಳಲ್ಲಿ V ಆಕಾರದ (Up and Down) ತೀಕ್ಷ್ಣವಾದ ಚೇತರಿಕೆ ಕಂಡುಬಂದಿದೆ. ಆದರೆ ಈ ಬೆಳವಣಿಗೆಯು ನಿಧಾನವಾಯಿತು ಮತ್ತು ಆದಾಯವು ಸೆಪ್ಟೆಂಬರ್ 2020 ರಲ್ಲಿ ಕೋವಿಡ್ ಪರಿಸ್ಥಿತಿಯ ಪೂರ್ವ ಮಟ್ಟಕ್ಕಿಂತ ಕಡಿಮೆಯಾಗಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ಚೇತರಿಕೆ ಕಂಡುಬಂದಾಗ 2020 ರ ಸೆಪ್ಟೆಂಬರ್ ನಂತರ ಈ ಸನ್ನಿವೇಶವು ಸುಧಾರಿಸಿದೆ ಎಂದು ಹೇಳಬಹುದು, ಆದರೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ದತ್ತಾಂಶವು ಡಿಸೆಂಬರ್‌ನಲ್ಲಿ ನಿರುದ್ಯೋಗ ಸಮಸ್ಯೆಯು 9% ಕ್ಕಿಂತ ಹೆಚ್ಚಾಗಿದೆ ಎಂದು ತೋರಿಸುತ್ತದೆ, ಇದು ಹೌಸ್ ಹೋಲ್ಡ್ ಇನ್ ಕಮ್ ನ ಮೇಲೆ ನೇರ ಪರಿಣಾಮ ಬೀರುತ್ತದೆ.
“ಸೆಪ್ಟೆಂಬರ್ 2020 ರವರೆಗೆ ಉದ್ಯೋಗ ಚೇತರಿಕೆ ಸ್ಥಿರವಾಗಿದ್ದರೂ, ಅದು ಅಕ್ಟೋಬರ್ 2020 ರಿಂದ ಕುಂಠಿತಗೊಳ್ಳಲು ಪ್ರಾರಂಭಿಸಿದೆ” ಎಂದು ನಾವು ಗಮನಿಸಬಹುದುದಾಗಿದೆ.
ಮೂಲ : Scroll.in , Quartz India
ಓದಿ : ಸಿಹಿ-ಕಹಿ ನಡುವೆ ವರ್ಕ್ ಫ್ರಂ ಹೋಂ : ವರ್ಕ್ ಫ್ರಂ ಹೋಂಗೆ ಒನ್ ಇಯರ್