ಮುಂಬಯಿ: ನಟ ಅಕ್ಷಯ್ ಕುಮಾರ್ ಅಭಿನಯದ ಹೌಸ್‌ಪುಲ್ 4 ಚಲನ ಚಿತ್ರ 25ರಂದು ಬಿಡುಗಡೆಗೊಂಡಿದೆ. ದೇಶಾದ್ಯಂತ ಹೆಚ್ಚು ಸದ್ದು ಮಾಡಿರುವ ಹೌಸ್‌ಫುಲ್ 4 ಮೊದಲ 3 ದಿನಗಳಲ್ಲಿ ಬರೋಬ್ಬರಿ 53 ಕೋಟಿ ರೂ. ಗಳನ್ನು ಸಂಪಾದಿಸಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ 19.09 ಕೋಟಿ. ರೂ.ಗಳನ್ನು ಸಂಪಾಸಿತ್ತು. ಹಬ್ಬಗಳ ಕಾರಣ ಜನರು ನಿಧಾನವಾಗಿ ಚಿತ್ರ ಮಂದಿರಗಳತ್ತ ಬಂದು ಸಿನೆಮಾ ವೀಕ್ಷಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಬಹಳ ವರ್ಷಗಳ ಅನಂತರ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಲಭಿಸಿಲ್ಲ. “ಹೌಸ್ ಫುಲ್ʼ ಸೀರಿಸ್ 2010 ರಲ್ಲಿ ಆರಂಭವಾಗಿದೆ. ಈ ವರ್ಷ ನಾಲ್ಕನೇ ಅವತರಣಿಕೆಯೊಂದಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಹೆಸರಿಗೆ ತಕ್ಕ ಹಾಗೆ ಈ ಸಿನಿಮಾದಲ್ಲಿ ಕಾಮಿಡಿ, ತಮಾಷೆ ಇದೆ. 600 ವರ್ಷಗಳ ಹಿಂದಿನ ಹಾಗೂ ಇಂದಿನ ಕಾಲ ಎರಡರ ಮಿಶ್ರಣ ಸಿನಿಮಾದಲ್ಲಿ ಒಳಗೊಂಡಿದೆ. ಈ ಭೂತಕಾಲ ಮತ್ತು ವರ್ತಮಾನದೊಂದಿಗೆ ಸಿನಿಮಾ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಕೂಡಿಕೊಂಡಿದೆ. ಅಕ್ಷಯ್ ಕುಮಾರ್ ಬಾಲ ಸೈತಾನ್ ಕ ಸಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನರ್ತಕಿ ಬ್ಯಾಂಗ್ದು ಮಹಾರಾಜ್ ಪಾತ್ರದಲ್ಲಿ ರಿತೇಶ್ ದೇಶ್ ಮುಖ್, ಅಂಗರಕ್ಷಕ್, ಧರ್ಮಪುತ್ರನಾಗಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಬೆಡಗಿ ಸುಂದರಿ ಪೂಜಾ ಹೆಗ್ಡೆ ಅವರ ಎರಡನೇ ಹಿಂದಿ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ರಾಜಕುಮಾರಿ ಮಾಲ ಆಗಿ ಪೂಜಾ ಕಾಣಿಸಿಕೊಂಡಿದ್ದು, ರಾಜಕುಮಾರಿ ಮೀನಾ ಆಗಿ ಕೃತಿ ಕರಬಂದ ಕಾಣಿಸಿಕೊಂಡಿದ್ದಾರೆ. ಕೃತಿ ಸನೋನ್ ರಾಜಕುಮಾರಿ ಮಧು ಪಾತ್ರದಲ್ಲಿ ನಟಿಸಿದ್ದಾರೆ.