Advertisement

ನೊಣಗಳ ಕಾಟಕ್ಕೆ  ಹೈರಾಣರಾದ ಗ್ರಾಮಸ್ಥರು

02:21 PM Jul 19, 2022 | Team Udayavani |

ನೆಲಮಂಗಲ: ಕೋಳಿ ಫಾರಂನಿಂದ ನೋಣಗಳ ಕಾಟ ಹೆಚ್ಚಾಗಿ ಜನರು ಗ್ರಾಮ ತೋರಿಯುವ ಸ್ಥಿತಿ ಎದುರಾಗಿದೆ. ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ ಬೂರಗಮರದಪಾಳ್ಯ ರಾಷ್ಟ್ರೀಯ ಹೆದ್ದಾರಿಯಿಂದ 1 ಕಿ.ಮೀ. ಇದ್ದು, ಇಲ್ಲಿನ ಜನರು ಗ್ರಾಮ ತೊರೆಯುವ ಮಾತುಗಳನ್ನಾಡುತ್ತಿದ್ದಾರೆ. ಇದಕ್ಕೆ ಕಾರಣ ಕೋಳಿಫಾರಂ. ಗ್ರಾಮ ಸಮೀಪದಲ್ಲಿ, ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ಕೋಳಿಫಾರಂ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಬಹಳಷ್ಟು ವರ್ಷಗಳಿಂದ ಅನುಮತಿ ಪಡೆಯದೇ ವಿದ್ಯುತ್‌, ನೀರು ಬಳಕೆ ಮಾಡಿಕೊಂಡು ಸ್ವತ್ಛತೆಯಿಲ್ಲದ ಕೋಳಿಫಾರಂ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ನೊಣಗಳು, ಸೊಳ್ಳೆಗಳು, ಸತ್ತ ಕೋಳಿ ತಿನ್ನುವ ನಾಯಿಗಳ ಕಾಟ ಹೆಚ್ಚಾಗಿದೆ. ದಿನನಿತ್ಯದ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ.

ಪಂಚಾಯ್ತಿ ಕಟ್ಟಡದಲ್ಲಿ ವಾಸ್ತವ: ಮನೆಗಳ ಬಳಿ ನೊಣಗಳ ಹಿಂಡು ಊಟದ ತಟ್ಟೆಯಲ್ಲಿ, ಮನೆಯ ಗೋಡೆಗಳ ಮೇಲೆ, ವಾಹನಗಳ ಮೇಲೆ, ಬಟ್ಟೆಗಳ ಮೇಲೆ, ಮನೆಯ ಅಂಗಳದಲ್ಲಿ ಹೆಚ್ಚಾಗಿದ್ದು, ಜನರ ಅನಾರೋಗ್ಯಕ್ಕೆ ಕಾರಣವಾದರೆ, ದನದ ಕೊಟ್ಟಿಗೆಯಲ್ಲಿ ಸಾವಿರಾರು ನೊಣಗಳು ಏಕಕಾಲದಲ್ಲಿ ಜಾನುವಾರಗಳ ಮೇಲೆ ದಾಳಿ ಮಾಡುತ್ತಿವೆ. ಗ್ರಾಪಂ ಕಟ್ಟಡದಲ್ಲಿ ವಾಸಿಸುವ ಅನಿವಾರ್ಯತೆ: ಗ್ರಾಮದಲ್ಲಿ ಮಕ್ಕಳಿಗೆ ಊಟ ಮಾಡಿಸಲು ಸಮಸ್ಯೆ ಆಗುವ ಜೊತೆಗೆ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಮತ್ತೂಂದು ಕಡೆ ನೊಣಗಳಿಂದ ದನಗಳಲ್ಲಿ ಹಾಲು ಕರೆಯಲು ಸಮಸ್ಯೆಯಾಗಿದೆ. ನಮ್ಮ ಗ್ರಾಮದಲ್ಲಿನ ನೊಣಗಳ ಸಮಸ್ಯೆ ದೂರವಾಗದಿದ್ದರೆ, ನಾವು ಊರು ತೊರೆದು ಗ್ರಾಪಂ ಕಟ್ಟಡದಲ್ಲಿ ವಾಸ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಕಿಡಿಕಾರಿದರು.

ಪ್ರಭಾವಕ್ಕೆ ಮಣಿದರೆ: ಗ್ರಾಮದ ನೊಣದ ಸಮಸ್ಯೆಯ ಬಗ್ಗೆ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳು ಸ್ವತಃ ಕಣ್ಣಾರೆ ಕಂಡರೂ ಕ್ರಮಕೈಗೊಳ್ಳಲು ಮಾತ್ರ ಮುಂದಾಗಿಲ್ಲ, ಕ್ರಮ ತೆಗೆದುಕೊಳ್ಳಿ ಎಂದರೇ ಆ ಕೋಳಿ ಫಾರಂ ಉಪಾಧ್ಯಕ್ಷರಿಗೆ ಸೇರಿದೆ. ಅವರಿಗೆ ಹೇಳಿದ್ದೇವೆ ಸರಿಮಾಡುತ್ತಾರೆ ಬಿಡಿ ಎಂಬ ಮಾತುಗಳಿಂದಲೇ ಜನರನ್ನು ಯಾಮಾರಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು, ಪ್ರತಿಭಟನೆ ಮಾಡಿದ್ದು ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೇ ಪೊಲೀಸ್‌ ಠಾಣೆಗೆ ಹೋದರು ಚಿಂತೆಯಿಲ್ಲ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ದಾಳಿ: ನೊಣಗಳ ಸಮಸ್ಯೆಯ ಬಗ್ಗೆ ದೂರು ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪರಿಣಾಮ ಉಪಾಧ್ಯಕ್ಷೆಯ ಪ್ರಭಾವದಿಂದ ಕೆಲ ಮನೆಗಳ ಮೇಲೆ ಮದ್ಯ ಮಾರಾಟ ಮಾಡುತ್ತಾರೆ ಎಂಬ ಸುಳ್ಳು ಮಾಹಿತಿ ನೀಡಿ, ಪೊಲೀಸರು ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ದಾಳಿಗಳಿಗೆ ನಾವು ಬಗ್ಗುವುದಿಲ್ಲ, ನಮ್ಮ ಗ್ರಾಮಕ್ಕೆ ಎದುರಾಗಿರುವ ನೊಣಗಳ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗ್ರಾಮದಲ್ಲಿ ನೊಣ, ಸೊಳ್ಳೆಗಳು ಹೆಚ್ಚಾಗಿವೆ. ಗ್ರಾಮದಲ್ಲಿ ಸಣ್ಣ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದೆ. ಕೋಳಿಫಾರಂನಿಂದ ಜನರಿಗೆ ಬಹಳಷ್ಟು ಕಷ್ಟವಾಗುತ್ತಿದೆ. ನೊಣಗಳ ಹಾವಳಿಯಿಂದ ದನಗಳಲ್ಲಿ ಹಾಲು ಕರೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯ್ತಿಗೆ ಮನವಿ ನೀಡಿ ಸಾಕಾಗಿದೆ. ಈಗಲಾದರೂ ನೊಣಗಳ ಹಾವಳಿಗೆ ಕಾರಣವಾದ ಕೋಳಿಫಾರಂ ತೆರವು ಮಾಡದಿ ದ್ದರೆ ಊರು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಬಂದು ವಾಸ ಮಾಡಬೇಕಾಗುತ್ತದೆ.-ಲಲಿತಾ, ಗ್ರಾಮಸ್ಥರು, ಬೂರಗಮರದಪಾಳ್ಯ.

ತಾಲೂಕಿನ ಬೂರಗಮರದಪಾಳ್ಯದಲ್ಲಿ ನೊಣಗಳ ಸಮಸ್ಯೆ ಬಗ್ಗೆ ದೂರು ಬಂದಿಲ್ಲ, ಶೀಘ್ರದಲ್ಲಿ ಕೋಳಿಫಾರಂ ತೆರವು ಮಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ.– ಕೆ.ಮಂಜುನಾಥ್‌, ತಹಶೀಲ್ದಾರ್‌, ನೆಲಮಂಗಲ.

ಗ್ರಾಮಕ್ಕೆ ಸಮಸ್ಯೆ ಆಗುವ ರೀತಿ ಯಾರು ಸಹ ನಡೆದುಕೊಳ್ಳಬಾರದು, ತಕ್ಷಣಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಮಾಹಿತಿ ಪಡೆದು ಕೋಳಿ ಫಾರಂನಿಂದ ಎದುರಾಗಿರುವ ನೊಣಗಳ ಸಮಸ್ಯೆಯನ್ನು ದೂರಮಾಡವ ಜತೆ ಫಾರಂ ತೆರವಿಗೆ ಸೂಚನೆ ನೀಡಿ ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆ ಬಗೆಹರಿಸುತ್ತೇವೆ.– ಮೋಹನ್‌ಕುಮಾರ್‌, ಇಒ, ತಾಪಂ

Advertisement

Udayavani is now on Telegram. Click here to join our channel and stay updated with the latest news.

Next