Advertisement

ಮನೆಗೆ ಬೆಂಕಿ : ಭಿನ್ನ ಸಾಮರ್ಥ್ಯದ ಯುವಕನ ರಕ್ಷಣೆ

12:07 AM May 16, 2023 | Team Udayavani |

ಕುಂಬಳೆ: ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯೊಳಗೆ ಸಿಲುಕಿಕೊಂಡ ಭಿನ್ನ ಸಾಮರ್ಥ್ಯದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

Advertisement

ಪೈವಳಿಕೆಯ ಕುರಿಯ ರಾಮಣ್ಣ ಶೆಟ್ಟಿ ಅವರ ಮನೆಗೆ ಬೆಂಕಿ ಹತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಮನೆಯೊಳಗೆ ಭಿನ್ನ ಸಾಮರ್ಥ್ಯದ ಯುವಕ ಮಾತ್ರವೇ ಒಳಗಿದ್ದರು. ತಂದೆ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದರು. ಅಲ್ಲದೆ ಇನ್ನಿಬ್ಬರು ಭಿನ್ನ ಸಾಮರ್ಥ್ಯದ ಮಕ್ಕಳು ಅಂಗಳದಲ್ಲಿದ್ದರು. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿ ಭಿನ್ನ ಸಾಮರ್ಥ್ಯದ ಯುವಕನನ್ನು ರಕ್ಷಿಸಿದರು. ಈ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next