Advertisement

ಹೊಟೇಲ್‌ ಇನ್ನು ಅಗ್ಗ 

10:00 AM Sep 22, 2019 | mahesh |

ಪಣಜಿ: ಇನ್ನು ಮುಂದೆ ಪ್ರವಾಸಕ್ಕೆ ಹೋದಾಗ ಹೊಟೇಲ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಹೆಚ್ಚು ವೆಚ್ಚ ಮಾಡಬೇಕೆಂದು ಚಿಂತೆ ಮಾಡಬೇಕಾಗಿಲ್ಲ. ಆದರೆ ಪೆಪ್ಸಿ, ಕೋಕಕೋಲಾದಂಥ ತಂಪು ಪಾನೀಯಗಳನ್ನು ಕುಡಿಯಬೇಕಾದರೆ ಕೊಂಚ ಯೋಚಿಸಬೇಕು.

Advertisement

ಗೋವಾ ರಾಜಧಾನಿ ಪಣಜಿಯಲ್ಲಿ ಶುಕ್ರವಾರ ನಡೆದ 37ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹೊಟೇಲ್‌ಗ‌ಳ ಮೇಲೆ ವಿಧಿಸಲಾಗುವ ಜಿಎಸ್‌ಟಿ ಮಿತಿ ತಗ್ಗಿಸಿದ್ದರೆ, ತಂಪು ಪಾನೀಯಗಳ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಲಾಗಿದೆ. ಹೀಗಾಗಿ ಅವುಗಳ ದರದಲ್ಲಿ ಏರಿಕೆಯಾಗುವುದು ನಿಶ್ಚಿತ. ಬೆಳಗ್ಗಿನಿಂದ ಸಂಜೆಯ ವರೆಗೆ ಮಂಡಳಿ ಸಭೆ ನಡೆದ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರ ಪ್ರಕಟಿಸಿದ್ದಾರೆ.

ಕ್ಯಾಟರಿಂಗ್‌: ಕ್ಯಾಟರಿಂಗ್‌ ಉದ್ದಿಮೆ ನಡೆಸುವ ಕ್ಷೇತ್ರದವ ರಿಗೆ ಇರುವ ತೆರಿಗೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸ ಲಾಗಿದೆ. ಹೀಗಾಗಿ ಆ ಕ್ಷೇತ್ರದವರಿಗೆ ನೆಮ್ಮದಿ ಉಂಟಾಗುವುದರ ಮೂಲಕ ಸಾಮಾನ್ಯರಿಗೂ ಆ ಕ್ಷೇತ್ರವನ್ನು ಸುಲಲಿತವಾಗಿ ಅವಲಂಬಿಸಿಕೊಳ್ಳಬಹುದು. ಸದ್ಯ ಶೇ. 18ರಷ್ಟು ಇರುವ ತೆರಿಗೆಯನ್ನು ಶೇ.5ಕ್ಕೆ, ಮೆರೈನ್‌ ಫ್ಯೂಯೆಲ್‌ಗೆ ಕೂಡ ಶೇ.5ರಷ್ಟು ತೆರಿಗೆ ಇಳಿಕೆ ಮಾಡಲಾಗಿದೆ.

ಹೆಚ್ಚಳ: ರೈಲ್ವೇ ವ್ಯಾಗನ್‌ಗಳು, ಕೋಚ್‌ಗಳು, ರೋಲಿಂಗ್‌ ಸ್ಟಾಕ್‌ಗಳಿಗೆ ಇರುವ ತೆರಿಗೆ ಮಿತಿಯನ್ನು ಹಾಲಿ ಶೇ.5ರಿಂದ ಶೇ.18ಕ್ಕೆ ಏರಿಕೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಪ್ಯಾಕ್‌ ಮಾಡುವ ಉದ್ದಿಮೆಯಲ್ಲಿ ಬಳಸುವ ಪಾಲಿ ಥೀನ್‌ ಬ್ಯಾಗ್‌ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸ ಲಾಗಿದೆ. 10-13 ಮಂದಿ ಪ್ರಯಾಣಿಸುವ ಸಾಮರ್ಥ್ಯ ಇರುವ ಪೆಟ್ರೋಲ್‌ ಚಾಲಿತ ವಾಹನಕ್ಕೆ ಶೇ.3ರಷ್ಟು ಇರುವ ತೆರಿಗೆಯನ್ನು ಶೇ.1ಕ್ಕೆ ತಗ್ಗಿಸಲಾಗಿದೆ.

Advertisement

ಅಕ್ಟೋಬರ್‌ 1ರಿಂದ ಜಾರಿ
ಇದೇ ವೇಳೆ ಬಾದಾಮಿ ಹಾಲಿನ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ಅ. 1ರಿಂದ ಅದು ಜಾರಿ ಯಾಗಲಿದೆ. ಇನ್ನು ಝಿಪ್‌ಗ್ಳ ಮೇಲೆ ಶೇ. 18ರಿಂದ ಶೇ. 12ಕ್ಕೆ ಜಿಎಸ್‌ಟಿ ಪ್ರಮಾಣ, ವಜ್ರೋದ್ಯಮಕ್ಕೆ ನೆರವಾಗುವ ನಿಟ್ಟಿನಲ್ಲಿ ಶೇ.5ರಿಂದ ಶೇ. 1, ಮೆಷಿನ್‌ ಜಾಬ್‌ ಕಟ್‌ ಕ್ಷೇತ್ರಕ್ಕೆ ಸಂಬಂಧಿಸಿದ ತೆರಿಗೆಯನ್ನು ಶೇ.18ರಿಂದ ಶೇ. 12ಕ್ಕೆ ಇಳಿಕೆ ಮಾಡಲಾಗಿದೆ.

ಹೊಟೇಲ್‌ಗ‌ಳು
-1 ಸಾವಿರ ರೂ. ವರೆಗೆ ಬಾಡಿಗೆಯ ಕೊಠಡಿ ಇರುವ ಹೊಟೇಲ್‌ಗ‌ಳಿಗೆ ಶೂನ್ಯ
ಜಿಎಸ್‌ಟಿ ತೆರಿಗೆ ವಿಧಿಸಲಾಗಿದೆ.
– 1,001 ರೂ.ಗಳಿಂದ 7,500 ರೂ. ಕೊಠಡಿ ಬಾಡಿಗೆ ಇರುವ ಹೊಟೇಲ್‌ಗ‌ಳಿಗೆ ಶೇ.12 ತೆರಿಗೆ. ಸದ್ಯ ಅದರ ಪ್ರಮಾಣ ಶೇ.18 ಇದೆ.
– l 7,500 ರೂ.ಗಳಿಂತ ಹೆಚ್ಚು ಕೊಠಡಿಯ ಬಾಡಿಗೆ ಇರುವ ಹೊಟೇಲ್‌ಗ‌ಳಿಗೆ ಶೇ.18ರಷ್ಟು ತೆರಿಗೆ. ಸದ್ಯದ ತೆರಿಗೆ ಪ್ರಮಾಣ ಶೇ.28 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next