Advertisement

49 ಡಿ.ಸೆ. ದಾಟಿದ ದೆಹಲಿ ತಾಪಮಾನ : ಬಿಸಿಲಿನ ಬೇಗೆಗೆ ಜನರು ಹೈರಾಣು

10:44 PM May 15, 2022 | Team Udayavani |

ನವದೆಹಲಿ : ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದರೆ, ಉತ್ತರ ಭಾರತದಾದ್ಯಂತ ಬಿಸಿಗಾಳಿಯು ಜನರನ್ನು ಪೀಡಿಸುತ್ತಿದೆ. ಸುಡು ಬಿಸಿಲಿನಿಂದಾಗಿ ದೆಹಲಿಯಂತೂ ಕಾದ ಬಾಣಲೆಯಂತಾಗಿದೆ. ಭಾನುವಾರ ದೆಹಲಿಯ ಹಲವು ಭಾಗಗಳಲ್ಲಿ ತಾಪಮಾನ 49 ಡಿ.ಸೆ.ಗೆ ತಲುಪಿದ್ದು, ಬಿಸಿಲಿನ ಬೇಗೆಗೆ ಜನರು ಹೈರಾಣಾಗಿದ್ದಾರೆ.

Advertisement

ದೆಹಲಿಯ ಮಂಗೇಶು³ರದಲ್ಲಿ 49.2 ಡಿ.ಸೆ., ನಜಾಫ್ಗಡದಲ್ಲಿ 49.1 ಡಿ.ಸೆ. ಉಷ್ಣಾಂಶವಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರದ ಬಳಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಣೆಯಾಗಬಹುದು ಎಂದು ಹೇಳಲಾಗಿದೆ. ದೆಹಲಿಯಾದ್ಯಂತ ಸೋಮವಾರ ಗುಡುಗುಸಹಿತ ಮಳೆಯಾಗಬಹುದು ಅಥವಾ ಧೂಳು ಬಿರುಗಾಳಿ ಏಳಬಹುದು ಎಂದೂ ಇಲಾಖೆ ಹೇಳಿದೆ.

ಹರ್ಯಾಣದ ಗುರುಗ್ರಾಮದಲ್ಲಿ ಭಾನುವಾರ 48.1 ಡಿ.ಸೆ. ತಾಪಮಾನ ದಾಖಲಾಗಿದೆ. 1966ರ ಮೇ 10ರ ಬಳಿಕ(49 ಡಿ.ಸೆ.) ಇದೇ ಮೊದಲ ಬಾರಿಗೆ ಇಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಮಳೆ ಸಾಧ್ಯತೆ : ಮೇ 16ರಿಂದ 19ರವರೆಗೆ “ಎಲ್ಲೋ ಅಲರ್ಟ್‌’

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next