Advertisement

ಟೀಸರ್ ನಲ್ಲಿ ಸದ್ದು ಮಾಡುತ್ತಿದೆ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ಸಿನಿಮಾ

05:38 PM Nov 05, 2022 | Team Udayavani |

ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್‌ ಮತ್ತು ವಿಭಿನ್ನ ಪ್ರಚಾರದ ಮೂಲಕ ಒಂದಷ್ಟು ಸಿನಿಮಂದಿಯ ಗಮನ ಸೆಳೆದಿರುವ ಸಿನಿಮಾ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಬಿಡುಗಡೆ ಮಾಡಿದ್ದ ಈ ಸಿನಿಮಾದ ಪೋಸ್ಟರ್‌ ಲಾಂಚ್‌ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಅದಾದ ಬಳಿಕ ರಕ್ಷಿತ್‌ ಶೆಟ್ಟಿ, ಕಿಚ್ಚ ಸುದೀಪ್‌ ಸೇರಿದಂತೆ ಹಲವು ಸ್ಟಾರ್ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದ್ದರು. ಇದೀಗ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸ್ಯಾಂಡಲ್‌ವುಡ್‌ನ‌ ಮೋಹಕ ತಾರೆ ರಮ್ಯಾ ಕೂಡ ಸಾಥ್‌ ನೀಡುತ್ತಿದ್ದಾರೆ.

Advertisement

ಹೌದು, “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಪ್ರಚಾರ ಕಾರ್ಯಕ್ಕಾಗಿ ಚಿತ್ರತಂಡದ ರಮ್ಯಾ ಅವರನ್ನು ಕರೆತಂದಿದೆ. ಇದೀಗ ರಮ್ಯಾ ಚಿತ್ರದ ಪ್ರಮೋಷನಲ್‌ ಕಂಟೆಂಟ್‌ ವೀಡಿಯೋನಲ್ಲಿ ಭಾಗಿಯಾಗಿದ್ದು, ಗುರುವಾರ ರಮ್ಯಾ ಭಾಗಿಯಾಗಿರುವ ಚಿತ್ರದ ಪ್ರಮೋಷನಲ್‌ ಟೀಸರ್‌ ಬಿಡುಗಡೆಯಾಗಿದೆ.

“ವರುಣ್‌ ಸ್ಟುಡಿಯೋಸ್‌’ ಹಾಗೂ “ಗುಲ್‌ ಮೋಹರ್‌ ಫಿಲಂಸ್‌’ ಬ್ಯಾನರ್‌ನಡಿ ನಿರ್ಮಾಣವಾಗಿರುವ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾಕ್ಕೆ ನಿತಿನ್‌ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಹಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದು, ಜೊತೆಗೆ ಸ್ಯಾಂಡಲ್‌ವುಡ್‌ನ‌ ಅನೇಕ ಸ್ಟಾರ್‌ ನಟರ ಗೆಸ್ಟ್‌ ಅಪಿಯರೆನ್ಸ್‌ ಕೂಡ ಚಿತ್ರದಲ್ಲಿದೆ. “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತವಿದ್ದು, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಸುರೇಶ್‌ ಸಂಕಲನವಿದೆ.

ಸದ್ಯ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿರುವ ಚಿತ್ರತಂಡ, ಜನವರಿಯಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next