ಅರಕಲಗೂಡು:ಕೋವಿಡ್ ಸೋಂಕು ತಡೆಗಟ್ಟಲುಸರ್ಕಾರ ಏನೆಲ್ಲಾ ಕ್ರಮ ಕೈಗೊಂಡರೂ ನಾಗರಿಕರುಮಾತ್ರ ಎಚ್ಚೆತ್ತುಕೊಳ್ಳದಿರುವುದಕ್ಕೆ ನಿತ್ಯ ಸೋಂಕಿತರಸಂಖ್ಯೆ ಹೆಚ್ಚಳವಾಗುತ್ತಿರುವುದೇ ಕಾರಣ.
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆಹೆಚ್ಚುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸೋಂಕಿತರುಮನಸೋ ಇಚ್ಚೆ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದಾರೆ.ಆಸ್ಪತ್ರೆಯ ಆವರಣ, ಇತರೆ ರೋಗಿಗಳ ಕೊಠಡಿ,ಪಟ್ಟಣದ ಅಂಗಡಿ, ಹೋಟೆಲ್‌ಗಳತ್ತ ಸುತ್ತುತ್ತಿದ್ದಾರೆ. ಈಬಗ್ಗೆ ನಾಗರಿಕರಲ್ಲಿ ಕೊರೊನಾ ಭೀತಿ ಕಾಡುತ್ತಿದ್ದುತಾಲೂಕು ಆಡಳಿತ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿಗಳುಮೌನಕ್ಕೆ ಶರಣಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೊರೊನಾ 2ನೇ ಅಲೆ ಇದ್ದರೂ ಸಾರ್ವಜನಿಕರುಮಾತ್ರ ಸೋಂಕಿನ ಬಗ್ಗೆ ಆತಂಕವಿಲ್ಲದೆ ಸಾಮಾಜಿಕಆಂತರ ಮತ್ತು ಮಾಸ್ಕ ಮರೆತು ಸಂಚರಿಸುತ್ತಿದ್ದಾರೆ. ಈನಿರ್ಲಕ್ಷ್ಯದಿಂದಾಗಿ ತಾಲೂಕಿನಲ್ಲಿ 2891ಕ್ಕೆ ಸೋಂಕಿತರಸಂಖ್ಯೆ ಹೆಚ್ಚುತ್ತಿದ್ದು 2728 ಜನ ಗುಣಮುಖರಾಗಿ 32ಸಾವನ್ನಪ್ಪಿದ್ದಾರೆ.2020ರಲ್ಲಿ ಸೋಂಕಿತರ ಬಗ್ಗೆ ಸರ್ಕಾರ ವಹಿಸುತ್ತಿದ್ದನಿಗಾ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದಕ್ಕೆಸಾಕ್ಷಿಯಂತೆ ತಾಲೂಕಿನಲ್ಲಿ 131 ಸಕ್ರಿಯ ಕೇಸುಗಳುದಾಖಲಾಗಿದ್ದು, ಇವರಲ್ಲಿ 6 ಮಂದಿ ಸೋಂಕಿತರುಹಾಸನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಹುತೇಕಸೋಂಕಿತರು ಮನೆಯಲ್ಲೇ ಉಳಿದು ಚಿಕಿತ್ಸೆಗೆ ಮುಂದಾದರೆ, ಇನ್ನೂ ಬೆರಳೆಣಿಕೆಯಷ್ಟು ಸೋಂಕಿತರು ಆಸ್ಪತ್ರೆಗೆದಾಖಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಗ್ರತೆವಹಿಸದಿದ್ದರಿಂದ ಮನಬಂದಂತೆ ಸುತ್ತಾಡುತ್ತಿದ್ದಾರೆ.ಹೋಮ್ ಐಸೋಲೇಷನ್ ಲೆಕ್ಕಕ್ಕಿಲ್ಲ: ಬಹತೇಕಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಪ್ಪದೆ ಮನೆಯಲ್ಲೇಉಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ 14 ದಿನದಕಾಲಾವಧಿ ಮುಗಿಯುವ ಮುನ್ನವೇ ಸಾರ್ವಜನಿಕವಾಗಿಓಡಾಡುತ್ತಿದ್ದಾರೆ. ಈ ಹಿಂದೆ ಇದ್ದ ಸರ್ಕಾರದಕಟ್ಟುನಿಟ್ಟಿನ ಕ್ರಮಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ.
ಸಿಬ್ಬಂದಿ ಅಜಾಗರೂಕತೆ: ಸರ್ಕಾರಿ ಆಸ್ಪತ್ರೆ ಕೋವಿಡ್-19 ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಸಿಬ್ಬಂದಿಗಳೇ ಮಾಸ್ಕ್, ಗ್ಲೌಸ್, ಅಥವಾ ಪಿಪಿಇ ಕಿಟ್‌ಬಳಸದೆ ಸಾಮಾನ್ಯ ವಾರ್ಡಿಗಳಲ್ಲೂ ತಿರುಗಾಡುವರೀತಿಯಲ್ಲೇ ಈ ವಾರ್ಡಿನಲ್ಲಿಯೂ ಕೆಲಸ ಮಾಡುತ್ತಾರೆಎಂಬ ಆರೋಪವೂ ಕೇಳಿ ಬಂದಿದೆ.
ಅವಾಚ್ಯವಾಗಿ ನಿಂದನೆ: ಸಿಬ್ಬಂದಿಗಳನ್ನು ವಾರ್ಡಿನಸೋಂಕಿತರ ಬಗ್ಗೆ ಜಾಗೃತಿ ವಹಿಸದೆ ಅವರನ್ನುಸ್ವತಂತ್ರವಾಗಿ ಬಿಟ್ಟಿರುವುದು ಎಷ್ಟರಮಟ್ಟಿಗೆ ಸರಿ.ಸೋಂಕಿತರಿಗೆ “ನೀವು ಹೊರಹೋಗಬೇಡಿ’ ಎಂದುತಾಕೀತು ಮಾಡಿ ವಾರ್ಡಿಗೆ ಬೀಗ ಹಾಕಲು ತೆರಳಿದರೆನಮ್ಮಗಳ ಮೇಲೆಯೇ ಹಲ್ಲೆಗೆ ಮುಂದಾಗಿ ಅವಾಚ್ಯಶಬ್ದಗಳಿಂದ ನಿಂದಿಸುತ್ತಾರೆ ಎಂದು ಅಧಿಕಾರಿಗಳುತಿಳಿಸಿದ್ದಾರೆ. ಈ ಮೂಲಕ ಸಮುದಾಯಕ್ಕೆ ಸೋಂಕುಹರಡುವ ಭೀತಿ ಕಾಡುತ್ತಿದೆ. ಒಟ್ಟಿನಲ್ಲಿ ತಾಲೂಕುಆಡಳಿತ, ಆರೋಗ್ಯ ಇಲಾಖೆ ಹಾಗೂ ಹೋಬಳಿಮಟ್ಟದಲ್ಲಿ ರಚನೆಯಾಗಿರುವ ಕೋವಿಡ್-19 ಜಾಗೃತಿತಂಡ ಎಚ್ಚರಗೊಳ್ಳದಿದ್ದರೆ ಬೆಂಗಳೂರಿನ ಪರಿಸ್ಥಿತಿತಲುಪಿದರೂ ಆಶ್ಚರ್ಯವಿಲ್ಲ.
ಅಕಲಗೂಡು ಶಂಕರ