Advertisement

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

12:06 AM Sep 27, 2023 | Team Udayavani |

ಮಂಗಳೂರು:ನಗರದ ಪಂಪ್‌ವೆಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಸ್ಟಮರ್‌ ಕೇರ್‌ ಎಕ್ಸಿಕ್ಯೂಟಿವ್‌ ಆಗಿರುವ ಮಹಿಳೆಯೋರ್ವಳಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆಶಿಕ್‌ ಬಂಧಿತ ಆರೋಪಿ. ಸೆ. 25ರಂದು ಈತ ತನ್ನ ತಾಯಿಯನ್ನು ದಾಖ ಲಿಸಲು ಆಸ್ಪತ್ರೆಗೆ ಬಂದಿದ್ದ. ಆಗ ಎಡ್ಮಿಷನ್‌ ಡೆಸ್ಕ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳೆ ರೋಗಿಯ ಹೆಸರು, ವಯಸ್ಸು, ವಿಳಾಸ ಮೊದಲಾದ ಮಾಹಿತಿ ಕೇಳಿದಾಗ ಕೋಪಗೊಂಡ ಆಶಿಕ್‌ ಅವಾಚ್ಯವಾಗಿ ನಿಂದಿಸಿದ್ದಾನೆ. ಎಡ್ಮಿಷನ್‌ ಡೆಸ್ಕ್ ನಲ್ಲಿದ್ದ ಸೊತ್ತುಗಳನ್ನು ಹಾನಿಗೊಳಿಸಿದ್ದಾನೆ. ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಎದೆ ಮತ್ತು ಭುಜಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next